ಪಾರ್ಲ್ (ದಕ್ಷಿಣ ಆಫ್ರಿಕಾ): ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ (Sanju Samson) ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದರು. ಸಂಜು ಸ್ಯಾಮ್ಸನ್‌ಗೆ ಉತ್ತಮ ಸಾಥ್ ನೀಡಿದ ತಿಲಕ್ ವರ್ಮಾ ಏಕದಿನ ಪಂದ್ಯಗಳಲ್ಲಿ ಮೊದಲ ಅರ್ಧಶತಕ ಬಾರಿಸಿದರು.
ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕ ಬಾರಿಸಿದರು. 114 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು. ಇದನ್ನೂ ಓದಿ: IND vs SA: ಸಂಜು ಸ್ಯಾಮ್ಸನ್ ಮೊದಲ ಶತಕ; ಆಫ್ರಿಕಾಗೆ 297 ರನ್‌ಗಳ ಗುರಿ
Advertisement
Advertisement
ಪದೇ ಪದೇ ಕ್ರೀಡಾಂಗಣಕ್ಕಿಳಿಯುವ ಅವಕಾಶ ವಂಚಿತರಾಗಿದ್ದ ಸಂಜು ಇಂದು ಸೆಂಚುರಿ ಬಾರಿಸುತ್ತಿದ್ದಂತೆ ತಮ್ಮ ತೋಳ್ಬಲ ಪ್ರದರ್ಶಿಸಿದರು. ಸೆಂಚುರಿ ಸಿಡಿಸಿದ ಸಂಭ್ರಮದಲ್ಲಿ ಹೆಲ್ಮೆಟ್ ಕೆಳಗೆಸೆದ ಸಂಜು ಟೀ ಶರ್ಟ್ ಮೇಲೆ ಸರಿಸಿ ತೋಳ್ಬಲ ಪ್ರದರ್ಶಿಸಿದರು.
Advertisement
Advertisement
ಇನ್ನಿಂಗ್ಸ್ ಬ್ರೇಕ್ ಮಧ್ಯೆ ಮಾತನಾಡಿದ ಸಂಜು, ಕಳೆದ ಕೆಲ ವರ್ಷಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಉತ್ತಮ ಆಟವಾಡಲು ಸಿದ್ಧವಾಗಿದ್ದೆ. ಸೆಂಚುರಿ ಬಾರಿಸಿರುವ ಈ ಕ್ಷಣ ಭಾವುಕನಾಗಿದ್ದೇನೆ. ಖುಷಿಯಾಗಿದೆ ಎಂದರು. ಇದನ್ನೂ ಓದಿ: RCB ಕಪ್ ಗೆಲ್ಲುವಂತೆ ಬೆಂಬಲಿಸಿ ಎಂದ ಅಭಿಮಾನಿ – ಲೆಜೆಂಡ್ ಮಹಿ ಕೊಟ್ಟ ಉತ್ತರ ಏನು?
ಸಂಜು ಸೆಂಚುರಿ ಸಹಾಯದಿಂದ ಟೀಂ ಇಂಡಿಯಾ ನಿಗದಿತ 50 ಓವರ್ ನಲ್ಲಿ 296 ರನ್ ಗಳಿಸಿತು. ಸಂಜು ಹಾಗೂ ತಿಲಕ್ ವರ್ಮಾ ಮೂರನೇ ವಿಕೆಟ್‌ಗೆ ಗಳಿಸಿದ 116 ರನ್ ಜೊತೆಯಾಟ ಭಾರತ ಉತ್ತಮ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿತು. ಕೊನೆಯ 10 ಓವರ್‌ಗಳಲ್ಲಿ ಭಾರತ 93 ರನ್ ಗಳಿಸಿ, ತಂಡದ ಮೊತ್ತ 296 ರನ್ ತಲುಪಲು ಸಹಕಾರಿಯಾಯಿತು.