BollywoodCinemaLatestMain Post

ಮನಾಲಿಗೆ ಹೊರಟ ರಣ್‌ಬೀರ್ ಕಪೂರ್ ಆದರೆ ಹನಿಮೂನ್‌ಗಾಗಿ ಅಲ್ಲ!

Advertisements

ಬಾಲಿವುಡ್‌ನಲ್ಲಿ ಸದ್ಯ ಸೌಂಡ್ ಮಾಡ್ತಿರೋ ಸುದ್ದಿ ಅಂದ್ರೆ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ವಿಚಾರ. ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸತಿ ಪತಿಗಳಾಗಿ ಖುಷಿಯಿಂದ ಜೀವನ ನಡೆಸುತ್ತಿರೋ ನವಜೋಡಿಗೆ ಹನಿಮೂನ್‌ಗೆ ಹೋಗೋ ಪ್ಲ್ಯಾನ್ ಇಲ್ಲವಂತೆ.

ಬಿಟೌನ್‌ನ ಕ್ಯೂಟ್ ಕಪಲ್ ಆಲಿಯಾ ರಣ್‌ಬೀರ್ ಹನಿಮೂನ್‌ಗೆ ಹೋಗೋ ಪ್ಲ್ಯಾನ್ ಇಲ್ಲವಂತೆ. ಯಾಕಂದ್ರೆ ಇಬ್ಬರಿಗೂ ಇರೋ ವರ್ಕ್ ಕಮೀಟ್ಮೆಂಟ್‌ನಿಂದ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನ ಕೈಗೆತ್ತಿಕೊಳ್ಳಲು ಈ ಸ್ಟಾರ್ ಜೋಡಿ ನಿರ್ಧಾರ ಮಾಡಿದ್ದಾರೆ.

ranbir alia

ಬ್ಯಾಕ್ ಟು ವರ್ಕ್ ಟೈಮ್ ಅಂತಾ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ `ಅನಿಮಲ್’ ಸಿನಿಮಾದ ಶೂಟಿಂಗ್‌ಗೆ ಮಾನಾಲಿಗೆ ಹೋಗಲು ರಣ್‌ಬೀರ್ ರೆಡಿಯಾಗಿದ್ದಾರೆ. ಏಪ್ರಿಲ್ 22ರಿಂದ `ಅನಿಮಲ್’ ಚಿತ್ರದ ಶೂಟಿಂಗ್ ಶುರುವಾಗಲಿದೆಯಂತೆ. ಇನ್ನೊಂದ್ ಕಡೆ ಆಲಿಯಾ ನಟನೆಯ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಶೂಟಿಂಗ್ ಕೂಡ ಸದ್ಯದಲ್ಲೇ ಶುರುವಾಗಲಿದೆ. ಇದನ್ನೂ ಓದಿ:RRR ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ರೆಡ್ಡಿ ಹಾಡಿದ ಕೊಮ್ಮ ಉಯ್ಯಾಲ ಹಾಡು ರಿಲೀಸ್

`ಅನಿಮಲ್’ ಚಿತ್ರದ ಶೂಟಿಂಗ್ ಜತೆಗೆ ʻಲವ್ ರಂಜನ್ʼ ಚಿತ್ರದ ಕೂಡ ಇರಲಿದ್ದು, ನವಜೋಡಿ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ `ಅನಿಮಲ್’ ಚಿತ್ರದಲ್ಲಿ ರಣ್‌ಬೀರ್‌ಗೆ ಜೋಡಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ. ಇನ್ನು ನಟ ರಣ್‌ಬೀರ್ ಮತ್ತು ಆಲಿಯಾ ವರ್ಕ್ ಕಮೀಟ್ಮೆಂಟ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

Leave a Reply

Your email address will not be published.

Back to top button