ಮುಂಬೈ: ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿದಾಗಿನಿಂದ ಇಡಿ ಸೇರಿದಂತೆ ಇತರೆ ತನಿಖಾ ಇಲಾಖೆಗಳು ತಮ್ಮ ಪಕ್ಷದ ನಾಯಕರ ವಿರುದ್ಧ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಶಿವಸೇನೆ ನಾಯಕ ಸಂಜಯ್ ರಾವತ್ ಪತ್ರ ಬರೆದಿದ್ದಾರೆ.
ಶಿವಸೇನೆ ಹಾಗೂ ಬಿಜೆಪಿ ಸುಮಾರು 25 ವರ್ಷಗಳ ಕಾಲ ಮೈತ್ರಿಯನ್ನು ಹೊಂದಿತ್ತು. ನಂತರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಮೈತ್ರಿಯನ್ನು ಕೊನೆಗೊಳಿಸಿತು. ಇದರಿಂದ ಬಿಜೆಪಿ ಜಾರಿ ನಿರ್ದೇಶನಾಲಯ ಸೇರಿದಂತೆ ಇತರೆ ತನಿಖಾ ಇಲಾಖೆಯನ್ನು ಬಳಸಿಕೊಂಡು ಶಿವಸೇನೆಯ ನಾಯಕರು ಮತ್ತು ಶಾಸಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
Advertisement
Advertisement
ಇಡಿ ಸಿಬ್ಬಂದಿ ಶಿವಸೇನೆಯ ಶಾಸಕರು ಸಂಸದರು, ನಾಯಕರು ಅವರ ಸ್ನೇಹಿತರು, ಸಂಬಂಧಿಕರು ಹಾಗೂ ಪರಿಚಯಸ್ಥರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ದಶಕಗಳಷ್ಟು ಹಳೆಯದಾದ ಮತ್ತು ಯಾವುದೇ ಸಂಬಂಧವಿಲ್ಲದ ಕೇಸ್‌ಗಳಲ್ಲಿ ಸರ್ಕಾರ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡುತ್ತಿದೆ. ಜೊತೆಗೆ ಅವರನ್ನು ಭಯಭೀತಗೊಳಿಸುವ ಉದ್ದೇಶದಿಂದ ತನಿಖೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!
Advertisement
सत्यमेव जयते.. pic.twitter.com/ImdX7wPuYa
— Sanjay Raut (@rautsanjay61) February 8, 2022
Advertisement
ನಮಗೆ ನಮ್ಮದೇ ಆದ ಸಿದ್ಧಾಂತವನ್ನು ಹೊಂದಲು ಹಕ್ಕಿದೆ. ಅದು ರಾಜಕೀಯ ಪಕ್ಷಕ್ಕೆ ಸಂಬಂಧಿಸಿಲ್ಲ. ನಮ್ಮ ಶಾಸಕರು, ಸಂಸದರು, ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಪರಿಚಯಸ್ಥರಿಗೆ ಬೆದರಿಕೆ ನೀಡುವುದರ ಜೊತೆಗೆ ತನಿಖೆ ನಡೆಸುವ ವೇಷದಲ್ಲಿ ಮನೆ ಮೇಲೆ ದಾಳಿ ನಡೆಸಿ ಕಿರುಕುಳ ನೀಡುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಟ್ಟದಿಂದ ಜಾರಿ ಬಂಡೆ ಮಧ್ಯೆ ಬಿದ್ದ- 2 ದಿನ ಅನ್ನ, ನೀರು ಇಲ್ಲ