ಮುಂಬೈ: ಸರ್ಕಾರ ರಚಿಸಲು ನಮ್ಮ ಬಳಿ ಬಹುಮತವಿದೆ ಎಂದು ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
288 ಕ್ಷೇತ್ರಗಳ ಪೈಕಿ ನಮಗೆ 170 ಶಾಸಕರ ಬೆಂಬಲ ದೊರೆತಿದೆ. ನಾವು ಸ್ವತಂತ್ರವಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬಹುದು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿ ಜೊತೆಯಲ್ಲಿ 50:50 ಫಾರ್ಮುಲಾದಂತೆ ಸರ್ಕಾರ ರಚಿಸಿಬೇಕಿದೆ ಎಂದು ಹೇಳುವ ಮೂಲಕ ಕಮಲ ನಾಯಕರಿಗೆ ಸಂದೇಶವನ್ನು ಸಂಜಯ್ ರಾವತ್ ರವಾನಿಸಿದ್ದಾರೆ. ಇದನ್ನೂ ಓದಿ: ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ
Advertisement
Shiv Sena leader Sanjay Raut: We have more than 170 MLAs supporting us, the figure can even reach 175. #MaharashtraAssemblyPolls pic.twitter.com/QJkNuiV9kk
— ANI (@ANI) November 3, 2019
Advertisement
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಬಂದಿದ್ದರೂ, ಇದುವರೆಗೂ ಸರ್ಕಾರ ರಚನೆಯಾಗಿಲ್ಲ. ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಗೆ ಬಹುಮತ ಸಿಕ್ಕರೂ ಸರ್ಕಾರ ರಚನೆ ಕಗ್ಗಂಟಾಗಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರುವಂತೆ ಜನಾದೇಶ ಬಂದಿದೆ. ವಿಪಕ್ಷದಲ್ಲಿಯೇ ಕುಳಿತುಕೊಳ್ಳುತ್ತೇವೆಯೇ ಹೊರತು ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಸಂಜಯ್ ರಾವತ್, ನಮಗೆ 170 ಶಾಸಕರ ಬೆಂಬಲವಿದೆ ಎಂಬ ಹೇಳಿಕೆ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಸಿಎಂ ಸ್ಥಾನ ನಮಗೆ ಬರೆದಿಟ್ಟುಕೊಳ್ಳಿ – ಬಿಜೆಪಿ ಇಲ್ಲದೇ ಸರ್ಕಾರ ರಚನೆಗೆ ಶಿವಸೇನೆ ಪ್ಲಾನ್
Advertisement
उसूलों पर जहाँ आँच आये,
टकराना ज़रूरी है
जो ज़िन्दा हो,
तो फिर ज़िन्दा नज़र आना ज़रूरी है ….
जय महाराष्ट्र…
— Sanjay Raut (@rautsanjay61) November 3, 2019
Advertisement
2014ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಶಿವಸೇನೆ 63 ಮತ್ತು ಬಿಜೆಪಿ 122 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ನಂತರ ಎರಡೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗಿತ್ತು. ಇದನ್ನೂ ಓದಿ: ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ? ಬಿಜೆಪಿ ಹೇಳಿಕೆಗೆ ಶಿವಸೇನೆ ಕೆಂಡಾಮಂಡಲ
2019ರಲ್ಲಿ ಬಿಜೆಪಿ ಚುನಾವಣೆ ಪೂರ್ವದಲ್ಲಿಯೇ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಇತ್ತ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ರಚನೆ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. ಬಿಜೆಪಿ 105, ಶಿವಸೇನೆ, 56, ಎನ್‌ಸಿಪಿ 54, ಕಾಂಗ್ರೆಸ್ 44 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಇದನ್ನೂ ಓದಿ: 50-50 ಫಾರ್ಮುಲಾಗೆ ಶಿವಸೇನೆ ಆಗ್ರಹ- ಜೆಡಿಎಸ್ ಅಸ್ತ್ರ ಪ್ರಯೋಗಿಸಿದ ಉದ್ಧವ್ ಠಾಕ್ರೆ
Sanjay Raut, Shiv Sena: If there is a delay in formation of government in a state, and a minister from the ruling party says President's rule will be implemented in Maharashtra if government isn't formed, is this a threat to the MLAs who have been elected? pic.twitter.com/smqsPh6xbu
— ANI (@ANI) November 2, 2019