ಮುಂಬೈ: ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಶಿವಸೇನೆ ಸಂಸದ ಸಂಜಯ್ ರಾವತ್ ಅವರನ್ನು ಕೋರ್ಟ್ ಆ.4ರವರೆಗೆ ಜಾರಿ ನಿರ್ದೇಶನಾಲಯ(ಇಡಿ)ದ ಕಸ್ಟಡಿಗೆ ನೀಡಿದೆ.
ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿನ್ನೆ ರಾವತ್ ಅವರನ್ನು ಬಂಧಿಸಲಾಗಿತ್ತು. ಸಂಜಯ್ ರಾವತ್ ಅವರನ್ನು 8 ದಿನಗಳ ಕಸ್ಟಡಿಗೆ ನೀಡುವಂತೆ ಇಡಿ ನ್ಯಾಯಾಲಯವನ್ನು ಕೋರಿತ್ತು. ಅಷ್ಟೇ ಅಲ್ಲದೇ ರಾವತ್ ಸಾಕ್ಷ್ಯಾಧಾರಗಳನ್ನು ತಿರುಚುತ್ತಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಹಲವಾರು ನಿರ್ಣಾಯಕ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದೆ.
8 ದಿನ ಕಸ್ಟಡಿಗೆ ಕೋರಿದ್ದ ಇಡಿ: ಆದರೆ ಇಡಿ ಪರ ವಾದಿಸಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾಂವ್ಕರ್ ಅವರು ಇಡಿ ಸಂಜಯ್ ರಾವತ್ ಅವರನ್ನು ವಿಚಾರಣೆ ನಡೆಸಲು 8 ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ ರಾವತ್ ಪರ ವಾದಿಸಿದ್ದ ವಕೀಲ ಅಶೋಕ್ ಮುಂಡರಗಿ ಅವರು, ಸಂಜಯ್ ರಾವತ್ ಅವರು ಹೃದ್ರೋಗಿಯಾಗಿದ್ದು, ಆರೋಗ್ಯದ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 8 ದಿನಗಳ ಕಸ್ಟಡಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 10 ಜನ ಸಜೀವ ದಹನ
ಈ ಹಿನ್ನೆಲೆಯಲ್ಲಿ ವಿಶೇಷ ಪಿಎಂಎಲ್‍ಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು ರಾವತ್ ಅವರನ್ನು ಮೂರು ದಿನಗಳ ಕಸ್ಟಡಿಗೆ ಕಳುಹಿಸಲು ಆದೇಶಿಸಿದೆ. ಅಷ್ಟೇ ಅಲ್ಲದೇ ಮನೆಯಿಂದ ಊಟ ಹಾಗೂ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಿದೆ.
ಏನಿದು ಪ್ರಕರಣ?: ಮುಂಬೈನ ಪತ್ರಾ ಚಾವ್ಲ್ ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವ ಸೇನೆಯ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಅವರನ್ನು ಬಂಧಿಸಲಾಗಿದೆ. 1,034 ಕೋಟಿ ರೂ. ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಈ ಹಿಂದೆ 2 ಬಾರಿ ವಿಚಾರಣೆ ನಡೆಸಲಾಗಿತ್ತು. ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‍ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ 9 ಗಂಟೆಗಳ ಕಾಲ ವಿಚಾರಣೆಯ ನಂತರ ಸಂಜಯ್ ರಾವತ್ ಅವರನ್ನು ಬಂಧಿಸಲಾಯಿತು. ಸೋಮವಾರ ಮಧ್ಯರಾತ್ರಿ 12:05 ಗಂಟೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‍ಎ) ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ 4 ದಿನ ಆರೆಂಜ್ ಅಲರ್ಟ್ – ಹೊಸಕೋಟೆ, ಸಂಪಾಜೆಯಲ್ಲಿ ಭಾರೀ ಮಳೆ