ಮುಂಬೈ: ಇಂದು ಮೆಹಬೂಬಾ ಮುಫ್ತಿ ಏನೇ ಹೇಳುತ್ತಿದ್ದರೂ ನೇರವಾಗಿ ಬಿಜೆಪಿಯೇ ಹೊಣೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಉತ್ತಮ ಸ್ನೇಹಿತರಾಗಿದ್ದರು. ಅವರು ಅಫ್ಜಲ್ ಗುರು ಮತ್ತು ಬುರ್ಹಾನ್ ವಾನಿಗೆ ಬೆಂಬಲ ನೀಡಿದ್ದರೂ ಅವರೊಂದಿಗೆ ಬಿಜೆಪಿ ಸರ್ಕಾರ ರಚಿಸಿತ್ತು ಎಂದರು.
Advertisement
Advertisement
ಈ ಹಿಂದೆ ಮುಫ್ತಿ ಅವರೊಂದಿಗೆ ಬಿಜೆಪಿ ಸರ್ಕಾರ ರಚಿಸಿದಾಗ ಅವರ ರಾಜಕೀಯ ಸಿದ್ಧಾಂತ ಎಲ್ಲಿ ಹೋಗಿತ್ತು ಎಂದು ಕಿಡಿಕಾರಿದ್ದ ಅವರು, ಶಿವಸೇನೆ ಹಿಂದುತ್ವವಾದಿ ಪಕ್ಷವಾಗಿದೆ ಹಾಗೂ ಯಾವಾಗಲೂ ಹಾಗೇ ಇರುತ್ತದೆ ಎಂದಿದ್ದರು. ಇದನ್ನೂ ಓದಿ: ವಿವಾದದ ಹೇಳಿಕೆಯಿಂದ ಒಂಟಿಯಾದ್ರಾ..? – ಸಿದ್ದರಾಮಯ್ಯ ಆಪ್ತರ ಬಳಿ ಹೇಳಿಕೊಂಡಿದ್ದೇನು..?
Advertisement
ಮುಫ್ತಿ ಅವರು 2016ರ ಏಪ್ರಿಲ್‍ನಲ್ಲಿ ಜಮ್ಮು ಮತ್ತು ಕಾಶ್ಮೀರದ ಕೊನೆಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದರು. 2018ರಲ್ಲಿ ಬಿಜೆಪಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಾಗ ಸರ್ಕಾರ ಪತನವಾಯಿತು. ಇದನ್ನೂ ಓದಿ: ಕಾಂಗ್ರೆಸ್ ನಿರ್ನಾಮ ಮಾಡಲು ಸಿದ್ದರಾಮಯ್ಯನಂತವರು ಒಬ್ರು ಸಾಕು: ಕೆ.ಎಸ್ ಈಶ್ವರಪ್ಪ
Advertisement
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಗುಕ್‍ಪಾರ್ ಘೋಷಣೆಗಾಗಿ ಜನತಾದಳದ ಘಟಕಗಳಿಗೆ ಮತ ಹಾಕುವಂತೆ ಮುಫ್ತಿ ಜನರಿಗೆ ಕರೆ ನೀಡಿದ್ದರು. ಕಳೆದ 70 ವರ್ಷಗಳಿಂದ ಕಾಶ್ಮೀರ ಪರಿಹಾರಕ್ಕಾಗಿ ಕಾಯುತ್ತಿದೆಯೇ? ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೂ ಈ ಪ್ರದೇಶದಲ್ಲಿ ಶಾಂತಿ ಇರುವುದಿಲ್ಲ ಮತ್ತು ಅದಕ್ಕಾಗಿ ಪಾಕಿಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಮಾತುಕತೆ ಅತ್ಯಗತ್ಯ ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದರು.