ನಾಗ್ಪುರ್: ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿಯೊಂದಿಗೆ ಸರ್ಕಾರ ರಚಿಸಿದಾಗ ಸಿದ್ಧಾಂತ ಎಲ್ಲಿ ಹೋಗಿತ್ತು ಎಂದು ಶಿವಸೇನೆ ನಾಯಕ ಸಂಸದ ಸಂಜಯ್ ರಾವತ್ ಎಂದು ಪ್ರಶ್ನಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನವನ್ನು ರಚಿಸಲು ಒಂದೇ ಒಂದು ಬಾರಿ ಭಾರತವನ್ನು ವಿಭಜಿಸಿದ್ದರು. ಆದರೆ ಬಿಜೆಪಿ ನಾಯಕರು ತಮ್ಮ ಹೇಳಿಕೆಗಳ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವೆ ಬಿರುಕು ಮೂಡಿಸುವ ಮೂಲಕ ಪ್ರತಿದಿನ ದೇಶವನ್ನು ವಿಭಜಿಸುತ್ತಿದ್ದಾರೆ ಆರೋಪಿಸಿದರು.
Advertisement
Advertisement
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‍ಎಸ್) ಮುಸ್ಲಿಮರಿಗಾಗಿ ರಾಷ್ಟ್ರೀಯ ಮುಸ್ಲಿಂ ಮಂಚ್‍ನಂತಹ ಅನೇಕ ಸಂಘಟನೆಗಳನ್ನು ರಚಿಸಿದೆ. ಇದರಿಂದಾಗಿ ಬಿಜೆಪಿ ನಾಯಕರು ಆರ್‌ಎಸ್‍ಎಸ್ನ ಹೆಸರನ್ನು ರಾಷ್ಟ್ರೀಯ ಮುಸ್ಲಿಂ ಸಂಘ ಎಂದು, ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೆಸರನ್ನು ಜನಬ್ ಭಾಗವತ್ ಎಂದು ಬದಲಾಯಿಸುತ್ತಾರೆಯೇ ಎಂದು ಬಿಜೆಪಿಗೆ ತಿರುಗೇಟು ನೀಡಿದ ಅವರು, ಶಿವಸೇನೆ ಹಿಂದುತ್ವ ಪಕ್ಷವಾಗಿದ್ದು, ಸದಾ ಹಾಗೆಯೇ ಇರುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ
Advertisement
Advertisement
ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಅವರು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ(ಎಂವಿಎ) ಜೊತೆ ಮೈತ್ರಿ ಮಾಡಿಕೊಳ್ಳಲು ಪ್ರಸ್ತಾಪಿಸಿತ್ತು. ಇದಕ್ಕೆ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಶೀವಸೇನೆಯನ್ನು ಟೀಕಿಸಿದ್ದರು. ಶಿವಸೇನಾ ಮತ್ತು ಎಐಎಂಐಎಂ ಒಟ್ಟಿಗೆ ಬರುತ್ತವೆಯೇ ಇದನ್ನು ತಳ್ಳಿಹಾಕಲಾಗುವುದಿಲ್ಲ ಎಂದಿದ್ದರು. ಇದನ್ನೂ ಓದಿ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ