ಮುಂಬೈ: ಸಂಸದ ಮತ್ತು ಶಿವಸೇನೆ (UBT) ನಾಯಕ ಸಂಜಯ್ ರಾವತ್ ಅವರನ್ನು ಮಾನನಷ್ಟ ಪ್ರಕರಣದಲ್ಲಿ (Defamation Case) ದೋಷಿ ಎಂದು ಮಜಗಾಂವ್‍ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿ, 25,000 ರೂ.ದಂಡ ಹಾಗೂ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.
ಬಿಜೆಪಿ (BJP) ನಾಯಕ ಕಿರಿತ್ ಸೋಮಯ್ಯ ಅವರ ಪತ್ನಿ ಡಾ.ಮೇಧಾ ಕಿರಿತ್ ಸೋಮಯ್ಯ ಅವರ ದೂರಿನ ಮೇರೆಗೆ ರಾವತ್ ವಿರುದ್ಧ ಪ್ರಕರಣ ದಾಖಲಾಗಿತ್ತು.
Advertisement
Advertisement
ಮೀರಾ ಭಯಂದರ್‌ನಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದ 100 ಕೋಟಿ ರೂ. ಹಗರಣದಲ್ಲಿ ತಾನು ಮತ್ತು ತನ್ನ ಪತಿ ಭಾಗಿಯಾಗಿದ್ದಾರೆ ಎಂದು ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ರಾವತ್ ಮಾಡಿದ್ದಾರೆ ಎಂದು ಆರೋಪಿಸಿ ಮೇಧಾ ಸೋಮಯ್ಯ ಅರ್ಜಿ ಸಲ್ಲಿಸಿದ್ದರು.
Advertisement
Advertisement
ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಸಂಜಯ್ ರಾವತ್ ಅವರಿಗೆ 15 ದಿನಗಳ ಜೈಲು, 25,000 ರೂ. ದಂಡ ವಿಧಿಸಿಸಿದೆ ಎಂದು ಡಾ.ಮೇಧಾ ಸೋಮಯ್ಯ ಪರ ವಕೀಲ ವಿವೇಕಾನಂದ ಗುಪ್ತಾ ಹೇಳಿದ್ದಾರೆ.