ಬೆಳಗಾವಿ: ಲ್ಯಾಪ್‍ಟಾಪ್ ಹಂಚಿ ಗೆಲ್ಲುವವರು ವಿನ್ನರ್ ಅಲ್ಲ. ಕೆಲಸ ಮಾಡಿ ಗೆಲ್ಲುವವರು ವಿನ್ನರ್ ಎನ್ನುವ ಮೂಲಕ ಮಾಜಿ ಶಾಸಕ, ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕುಟುಕಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ನಗು ಬರ್ತಿದೆ. ನಮ್ಮ ಅಭ್ಯರ್ಥಿ ಕೆಲಸ ಕಾರ್ಯ ಮಾಡಿಲ್ಲ ಎನ್ನುತ್ತಾರೆ. ಆದ್ರೆ, ಕಾಂಗ್ರೆಸ್ ಮತದಾರರಿಗೆ ಲ್ಯಾಪ್‍ಟಾಪ್ ಕೊಡುವ ಮಾತು ಆಡ್ತಿದ್ದಾರೆ? ಅವರ ಹತ್ತಿರ ಅಷ್ಟೊಂದು ಶಕ್ತಿ ಇದ್ದರೆ, ಅಷ್ಟೊಂದು ಒಳ್ಳೆಯವರು ಆಗಿದ್ದರೆ ಏನು ಹಂಚಬಾರದಿತ್ತು. ಲ್ಯಾಪ್‍ಟಾಪ್ ಹಂಚಿ ಗೆಲ್ಲುವವರು ವಿನ್ನರ್ ಅಲ್ಲ. ಕೆಲಸ ಮಾಡಿ ಗೆಲ್ಲುವವರು ವಿನ್ನರ್ ಎಂದರು.
ಯಾರು ಲ್ಯಾಪ್ ಟಾಪ್ ಹಂಚುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಲ್ಯಾಪ್‍ಟಾಪ್ ಹಂಚುತ್ತಾರೆ ಅನ್ನೋ ಚರ್ಚೆ ನನ್ನ ಕಿವಿ ಮೇಲೆ ಬಿದ್ದಿದ್ದನ್ನು ಹೇಳಿದ್ದೇನೆ. ಹಂಚಿದ ಮೇಲೆ ಅದನ್ನು ತೆಗೆದುಕೊಂಡು ಬಂದು ಸುದ್ದಿಗೋಷ್ಠಿ ಮಾಡಿ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅನೈತಿಕ ಪ್ರೇಮದ ಮದ್ವೆಗೆ ಮಗು ಅಡ್ಡಿ- ಹೆತ್ತ ಮಗುವನ್ನೇ ಅನಾಥವೆಂದು ಬಿಂಬಿಸಲು ಕಥೆ ಹೆಣೆದಳು!
ಪದವೀಧರ ಕ್ಷೇತ್ರಗಳಿಗೆ ಚುನಾವಣೆಯ ಕುರಿತಾಗಿ ಮಾತನಾಡಿ, ಮೇ 26ರಂದು ಪದವೀಧರ ಮತಕ್ಷೇತ್ರದಿಂದ ಹನುಮಂತ ನಿರಾಣಿ, ಶಿಕ್ಷಕರ ಮತಕ್ಷೇತ್ರದಿಂದ ಅರಣು ಶಹಾಪುರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಆಗಮಿಸಲಿದ್ದಾರೆ. ನಾವು ನಾಮಪತ್ರ ಸಲ್ಲಿಕೆ ವೇಳೆ ಶಕ್ತಿಪ್ರದರ್ಶನ ಮಾಡ್ತಿಲ್ಲ. ಕಾಂಗ್ರೆಸ್‍ನವರು ಏನು ಮಾಡ್ತಾರೆ ನಮಗೆ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ನಾರಾಯಣ ಗೌಡರಿಗೆ ಕೈ ಪಾಲಿಕೆ ಸದಸ್ಯರಿಂದ ಫುಲ್ ಕ್ಲಾಸ್