ಝೈದ್ ಖಾನ್ ನಟನೆಯ `ಬನಾರಸ್’ ಸಾಂಗ್ ರಿಲೀಸ್ ಮಾಡಲು ಸಂಜಯ್ ದತ್ ಸಾಥ್

Public TV
1 Min Read
banaras

ರಾಜಕಾರಣಿ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ `ಬನಾರಸ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಚಿತ್ರದ ಮಾಯಾಗಂಗೆ ಸಾಂಗ್ ಕನ್ನಡ ಮತ್ತು ಮಲಯಾಳಂ ರಿಲೀಸ್ ಆಗಿತ್ತು. ಈಗ ಹಿಂದಿ ವರ್ಷನ್‌ನ `ಮಾಯಾ ಗಂಗೆ’ ಹಾಡನ್ನ ಸಂಜಯ್ ದತ್ ರಿಲೀಸ್ ಮಾಡಲಿದ್ದಾರೆ.

banaras 3

ಝೈದ್ ಖಾನ್ ನಟನೆಯ `ಬನಾರಸ್’ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇತ್ತೀಚೆಗಷ್ಟೇ `ಮಾಯಾ ಗಂಗೆ’ ಸಾಂಗ್ ಕನ್ನಡ ಮತ್ತು ಮಲಯಾಳಂ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಝೈದ್ ಮತ್ತು ನಟಿ ಸೋನಾಲ್ ಜೋಡಿ ಮಾಡುತ್ತಿದೆ. ಈ ಬೆನ್ನಲ್ಲೇ ಚಿತ್ರದ ಮಾಯಾಗಂಗೆ ಹಿಂದಿ ವರ್ಷನ್‌ನ ಸಾಂಗ್‌ ಕೆಜಿಎಫ್ ಅಧೀರ ಸಂಜಯ್ ದತ್ ರಿಲೀಸ್ ಮಾಡಲಿದ್ದಾರೆ.

 

View this post on Instagram

 

A post shared by Zaid Khan (@urszaidkhan)

ಜಯತೀರ್ಥ ನಿರ್ದೇಶನದ `ಬನಾರಸ್’ ಮಾಯಾ ಗಂಗೆ ಹಿಂದಿ ಸಾಂಗ್ ರಿಲೀಸ್ ಮಾಡಲು ಮುಂಬೈಗೆ ಸಂಜಯ್ ದತ್ ಮುಂಬೈಗೆ ಬಂದಿಳಿದಿದ್ದಾರೆ. ಇನ್ನೂ ಮುಂಬೈ ಏರ್‌ಪೋರ್ಟ್‌ನಲ್ಲಿ ಸಂಜಯ್ ದತ್ ಮತ್ತು ಝೈದ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *