ಕಾಶ್ಮೀರದಲ್ಲಿ ವಿಜಯ್‌ ಜೊತೆ ಕಾಣಿಸಿಕೊಂಡ ಸಂಜಯ್‌ ದತ್

Public TV
1 Min Read
vijay thalapathy 1

`ವಾರಿಸು’ ಚಿತ್ರದ ಸಕ್ಸಸ್ ನಂತರ ವಿಜಯ್ ದಳಪತಿ (Vijay Thalapathy) ಇದೀಗ `ಲಿಯೋ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್‌ಗೆ `ಕೆಜಿಎಫ್ 2′ (KGF 2) ಖ್ಯಾತಿಯ ಸಂಜಯ್ ದತ್ (Sanjay Dutt) ಸಾಥ್ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ (Rashmika Mandanna) ಜೊತೆ `ವಾರಿಸು’ ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿದ ಬಳಿಕ ಈಗ `ಲಿಯೋ’ (Leo) ಸಿನಿಮಾವನ್ನು ವಿಜಯ್ ದಳಪತಿ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ಆ್ಯಂಡ್ ಟೀಂ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ವಿಜಯ್ ಜೊತೆ ಸಂಜಯ್ ದತ್ ಕೂಡ ಕಾಣಿಸಿಕೊಂಡಿದ್ದಾರೆ.

ಲೋಕೇಶ್‌ ಕನಗರಾಜ್‌ ನಿರ್ದೇಶನದ `ಲಿಯೋ’ ಚಿತ್ರದಲ್ಲಿ ಸಂಜಯ್ ದತ್ ಖಳನಾಯಕನಾಗಿ ಅಬ್ಬರಿಸುತ್ತಿದ್ದಾರೆ. `ಕೆಜಿಎಫ್ 2′ ಚಿತ್ರದ ನಂತರ ದಕ್ಷಿಣದ ಸಿನಿಮಾಗಳಿಗೆ ಸಂಜಯ್ ದತ್ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಮನಸ್ಸು ಮಾಡಿರುವ ಅಧೀರ ಈಗ ವಿಜಯ್‌ಗೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

vijay 1

`ಲಿಯೋ’ ತಮಿಳು ಸಿನಿಮಾ ಶೂಟಿಂಗ್‌ಗಾಗಿ ಸಂಜಯ್ ದತ್ ಕೂಡ ಕಾಶ್ಮೀರಕ್ಕೆ ಬಂದಿಳಿದಿದ್ದಾರೆ. ʻಲಿಯೋʼ ಟೀಂ ಸಂಜಯ್ ದತ್ ಅವರನ್ನ ಅದ್ದೂರಿಯಾಗಿ ಸ್ವಾಗತಿಸಿದೆ. ಬಳಿಕ ವಿಜಯ್- ಸಂಜಯ್  ಭೇಟಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಖುಷಿಯಿಂದ ಚಿತ್ರತಂಡ ಹೇಳಿಕೊಂಡಿದ್ದಾರೆ. ವಿಜಯ್ ಮತ್ತು ಸಂಜಯ್ ದತ್ ಜೊತೆಗಿನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಲಿಯೋ ಟೀಂ ಶೇರ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *