ನನಗೂ ಪೂಜಾಗೂ ದಂಡುಪಾಳ್ಯ ಟೈಮ್‌ನಲ್ಲಿ ಕೋಳಿ ಜಗಳ ಆಗಿತ್ತು- ಸಂಜನಾ ಗಲ್ರಾನಿ

Public TV
1 Min Read
pooja gandhi 4

ಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಅವರು ಮಂತ್ರ ಮಾಂಗಲ್ಯ ಪದ್ಧತಿಯಂತೆ ಹೊಸ ಬಾಳಿಗೆ ಇಂದು (ನ.29) ಕಾಲಿಟ್ಟಿದ್ದಾರೆ. ಪೂಜಾ-ವಿಜಯ್ ಮದುವೆಗೆ ಸಂಜನಾ ಗಲ್ರಾನಿ ಆಗಮಿಸಿ ಶುಭಕೋರಿದ್ದಾರೆ. ಇದನ್ನೂ ಓದಿ:ಪೂಜಾ ಗಾಂಧಿ ಮದುವೆಗೆ ಕೌಂಟ್‌ಡೌನ್-‌ ಮಳೆ ಹುಡುಗಿ ಫುಲ್‌ ಮಿಂಚಿಂಗ್

pooja gandhi 1 3

ಪೂಜಾ ಅವರನ್ನ ನೋಡಿದ್ರೆ ಹೆಮ್ಮೆ ಆಗುತ್ತದೆ. ಬೇರೇ ರಾಜ್ಯದಿಂದ ಬಂದು ಕನ್ನಡ ಕಲಿತಿದ್ದಾರೆ. ಈಗ ಕರ್ನಾಟಕದ ಸೊಸೆ ಆಗಿದ್ದಾರೆ. ವಿಜಯ್ ತುಂಬಾ ಒಳ್ಳೆಯ ಹುಡುಗ. ನಾನು ಹುಡುಗನ ಕಡೆಯಿಂದ ಮದುವೆಗೆ ಬಂದಿದ್ದೀನಿ ಎಂದು ಸಂಜನಾ ಮಾತನಾಡಿದ್ದಾರೆ. ಬಳಿಕ ನನಗೂ ಪೂಜಾಗೂ ದಂಡುಪಾಳ್ಯ ಟೈಮ್‌ನಲ್ಲಿ ಕೋಳಿ ಜಗಳ ಆಗಿತ್ತು ಎಂದು ಹಳೆಯ ದಿನಗಳನ್ನ ನಟಿ ಸಂಜನಾ ಗಲ್ರಾನಿ (Sanjana Galrani) ಸ್ಮರಿಸಿದ್ದರು. ಬಳಿಕ ನವಜೋಡಿಗೆ ಶುಭ ಹಾರೈಸಿದ್ದರು.

sanjana galrani 2

ಕಳೆದ 10 ವರ್ಷಗಳಿಂದ ವಿಜಯ್ ಮತ್ತು ಪೂಜಾ ಗಾಂಧಿ ಸ್ನೇಹಿತರಾಗಿದ್ದರು. ವಿಜಯ್ ಅವರಿಂದಲೇ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ಈ ಪರಿಚಯವೇ ಪ್ರೇಮಕ್ಕೆ ಮುನ್ನುಡಿ ಬರೆದಿದೆ. ಯಲಹಂಕದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಪೂಜಾ ಗಾಂಧಿ ಮದುವೆಯಾಗಿದ್ದಾರೆ.

pooja gandhi 3

ಪೂಜಾ ಗಾಂಧಿ ಬಿಳಿ ಸೀರೆಯಲ್ಲಿ ಮಿಂಚಿದ್ರೆ, ವಿಜಯ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. 10 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.

ಯೋಗರಾಜ್ ಭಟ್, ಸುಧಾರಾಣಿ, ಶುಭ ಪೂಂಜಾ, ಸುಮನಾ ಕಿತ್ತೂರು, ಸಾಹಿತಿ ಜಯಂತ್ ಕಾಯ್ಕಿಣಿ ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿಗೆ ಶುಭ ಕೋರಿದ್ದಾರೆ. ಮಳೆ ಹುಡುಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಅವರು ಶುಭಕೋರಿದ್ದಾರೆ.

Share This Article