ಸ್ಯಾಂಡಲ್‌ವುಡ್ ಕಿರಿಕ್ ಬ್ಯೂಟಿ ಸಂಜನಾ ಗಲ್ರಾನಿ ಸಿಕ್ಕಾಪಟ್ಟೆ ಸುದ್ದಿಯಲ್ಲಿಯಲ್ಲಿದ್ದಾರೆ. ಆದರೆ ಸಿನಿಮಾ ವಿಚಾರವಾಗಿ ಅಲ್ಲ. ವಯಕ್ತಿಕ ಬದುಕಿನ ತಾಯ್ತನದ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ.
View this post on Instagram
`ಗಂಡ ಹೆಂಡತಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪರಿಚಿತರಾದ ನಟಿ ಸಂಜನಾ, ಸಾಕಷ್ಟು ಸಿನಿಮಾಗಳ ಸಂಚಲನ ಮೂಡಿಸಿದ್ದಾರೆ. ಬಳಿಕ ಅಜೀಜ್ ಪಾಷಾ ಅವರನ್ನ ಸಂಜನಾ ವಿವಾಹವಾದ್ರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಸಂಜನಾ, ತಮ್ಮ ದೈನಂದಿನ ಬದುಕಿನ ಆಗು ಹೋಗುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡುತ್ತಾರೆ. ತಾವು ತಾಯಿಯಾಗುತ್ತಿರುವ ವಿಚಾರದಿಂದ ಹಿಡಿದು ಬೇಬಿ ಬಂಪ್ ಫೋಟೋಶೂಟ್ ಜತೆಗೆ ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದ ಸೀಮಂತದ ಸಂಭ್ರಮದ ಕ್ಷಣಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು.
View this post on Instagram
ಸಾಕಷ್ಟು ಸವಾಲುಗಳನ್ನು ಎದುರಿಸಿದ ನಂತರ ಸಂಜನಾ ತಮ್ಮ ವಯಕ್ತಿಕ ಬದುಕಿನ ಕಡೆ ಗಮನ ಹರಿಸಿದ ಈ ನಟಿ. ತಾವು ತಾಯಿಯಾಗುತ್ತಿರುವ ಸಂತಸದ ವಿಚಾರವನ್ನ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ಹೇಳಿಕೊಂಡಿದ್ರು. ಭಿನ್ನವಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಸಂಜನಾ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ರು. ಇದನ್ನೂ ಓದಿ: ಸನ್ನಿ ಲಿಯೋನ್ ಮೂರು ಮಕ್ಕಳ ತಾಯಿ, ನೂರಾರು ಕೋಟಿ ಒಡತಿ : ಜಸ್ಟ್ @ 40
View this post on Instagram
ಬಳಿಕ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಸಂಜನಾಗೆ ವಿವಿಧ ತಿಂಡಿ ಪದಾರ್ಥಗಳನ್ನು ಇಟ್ಟು ಸೀಮಂತ ಶಾಸ್ತ್ರ ಮಾಡಲಾಯಿತು. ಬಳಿಕ ಮುಸ್ಲಿಂ ಪದ್ಧತಿ ಪ್ರಕಾರ ಸೀಮಂತ ಶಾಸ್ತ್ರ ನೆರವೇರಿದ್ದು, ವೈಟ್ ಸ್ಯಾರಿನಲ್ಲಿ ಮಿರ ಮಿರ ಅಂತಾ ಸಂಜನಾ ಮಿಂಚಿದ್ರು. ಈ ಸಮಾರಂಭದಲ್ಲಿ ಸಾಕಷ್ಟು ಸೆಲೆಬ್ರೆಟಿ ಸ್ನೇಹಿತರು ಭಾಗಿಯಾಗಿದ್ರು. ಈ ಫೋಟೋ ಮತ್ತು ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಒಟ್ನಲ್ಲಿ ಅದೆನೇ ಇರಲಿ 9 ತಿಂಗಳು ತುಂಬಿರುವ ತುಂಬು ಗರ್ಭಿಣಿ ಸಂಜನಾ ಹೆರಿಗೆ ಸದ್ಯದಲ್ಲೇಯಿದ್ದು,ಯಾವುದೇ ಕಷ್ಟವಿಲ್ಲದೇ ಹೆರಿಗೆ ನೆರವೇರಲಿ ಎಂಬುದೇ ಅಭಿಮಾನಿಗಳ ಆಶಯ.