ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ

Public TV
1 Min Read
Sanjana Anand 2

ಹಜ ಅಭಿನಯ, ಸರಳ‌ ಸೌಂದರ್ಯದಿಂದಲೇ ಸ್ಯಾಂಡಲ್ ವುಡ್ ನ್ಯೂ ಕ್ರಶ್ ಎನಿಸಿಕೊಂಡಿರುವ ಸಂಜನಾ ಆನಂದ್ (Sanjana Anand) ಈಗ ಮುಧೋಳ್ (Mudhol) ಬಳಗ ಸೇರಿಕೊಂಡಿದ್ದಾರೆ.  ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಕಡಿಮೆ‌ ಅವಧಿಯಲ್ಲಿ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶಗಿಟ್ಟಿಸಿಕೊಂಡರು. ದುನಿಯಾ ವಿಜಯ್ ಸಾರಥ್ಯದ‌ ಸಲಗ‌ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಬ್ಯೂಟಿ ಟಾಲಿವುಡ್ ಕೂಡ ಪ್ರವೇಶಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು ಅಂಗಳದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಆನಂದ್ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಜೊತೆ ರೋಮ್ಯಾನ್ಸ್ ಮಾಡಲು ಒಕೆ ಎಂದಿದ್ದಾರೆ.

Vikram Ravichandran

‘ತ್ರಿವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ವಿಕ್ರಮ್‌ (Vikram Ravichandran) ಈಗ ಎರಡನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮುಧೋಳ್ ಮೂಲಕ ಸಖತ್‌ ಮಾಸ್ ಅವತಾರ ತಾಳಿರುವ ವಿಕ್ಕಿಗೆ ನಾಯಕಿಯಾಗಿ ರಾಯಲ್ ಹುಡುಗಿ ನಟಿಸುತ್ತಿದ್ದಾರೆ.‌ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಂಜನಾ ನಾಯಕಿ ಎಂಬ ವಿಷ್ಯ ಹರಿದಾಡಿತ್ತು. ಆದ್ರೆ ಚಿತ್ರತಂಡ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ.  ಸಲಗ ಸುಂದರಿ ಹುಟ್ಟುಹಬ್ಬದ ವಿಶೇಷವಾಗಿ‌‌ ಇಂದು ಚಿತ್ರತಂಡ ಸಮಾಚಾರವನ್ನು ಅಧಿಕೃತಗೊಳಿಸಿದೆ.

Sanjana Anand 1

ವಿಕ್ರಮ್ ಮುಧೋಳ್ ಸಿನಿಮಾದ ನಾಯಕಿಯಾಗಿರುವ ಸಂಜನಾ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ.‌ ಇಲ್ಲಿವರೆಗೂ ಅವರು ನಟಿಸಿದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೇ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಸಂಜನಾ ಆನಂದ್ ಮುಧೋಳ್ ಸಿನಿಮಾ ಜೊತೆಗೆ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಹಾಗೂ ತೆಲುಗಿನ ಫುಲ್ ಬಾಟೆಲ್ ಎಂಬ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಧನ್ವೀರ್ ಗೌಡ ನಟಿಸುತ್ತಿರುವ ಹಯಗ್ರೀವ್ ಗೂ ನಾಯಕಿಯಾಗಿರುವ ರಾಯಲ್ ಕ್ವೀನ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Share This Article