ಸ್ಯಾಂಡಲ್‌ವುಡ್‌ಗೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಎಂಟ್ರಿ ಕೊಡ್ತಿದ್ದಾರೆ. ಚೊಚ್ಚಲ ಸಿನಿಮಾ ‘ಗೌರಿ’ (Gowri Film) ಶೂಟಿಂಗ್ ಕೂಡ ಭರದಿಂದ ನಡೆಯುತ್ತಿದೆ. ‘ಗೌರಿ’ ಸಿನಿಮಾದಲ್ಲಿ ಸಲಗ (Salaga) ಸುಂದರಿ ಸಂಜನಾ ಆನಂದ್ (Sanjana Anand) ಕೂಡ ನಟಿಸುತ್ತಿದ್ದಾರೆ.
ಇಂದ್ರಜಿತ್ ನಿರ್ದೇಶನದ ಈ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯ ಅಯ್ಯರ್ (Saanya Iyer) ನಟಿಸುತ್ತಿದ್ದಾರೆ. ಲವ್ ಸ್ಟೋರಿ ಜೊತೆ ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದೆ. ಇದೇ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಶಾರುಖ್ ಪುತ್ರಿ ಸುಹಾನಾ ಸೌಂದರ್ಯಕ್ಕೆ ಪಡ್ಡೆಹುಡುಗರು ಫಿದಾ
ಚಿತ್ರದಲ್ಲಿ ಸಂಜನಾ ಪಾತ್ರ ತಿರುವು ಕೊಡಲಿದೆ. ಅಷ್ಟೇ ಅಲ್ಲ, ಹೀರೋ ಸಮರ್ಜಿತ್ ಜೊತೆ ಸ್ಪೆಷಲ್ ಹಾಡಿಗೆ ಮಸ್ತ್ ಆಗಿ ಹೆಜ್ಜೆ ಹಾಕಿ ಬಂದಿದ್ದಾರೆ. ಸಂಜನಾ ಆ್ಯಕ್ಟಿಂಗ್ ಜೊತೆಗೆ ಡ್ಯಾನ್ಸ್ ಕೂಡ ತೆಗೆಸಿದ್ದಾರೆ ನಿರ್ದೇಶಕರು. ಎರಡು ದಿನ ರಿಹರ್ಸಲ್ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಸಮರ್ಜಿತ್ ನೃತ್ಯ ಕೌಶಲ್ಯದ ಬಗ್ಗೆ ನಟಿ ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸಂಜನಾ ಆನಂದ್ ಬ್ಯುಸಿಯಾಗಿದ್ದಾರೆ. ಸದ್ಯ ಹೊಸ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.