ಧಾರವಾಡ: ಸಂಗೊಳ್ಳಿ ರಾಯಣ್ಣ (Sangolli Rayanna) ಹಾಗೂ ರೈತ ಹುತಾತ್ಮನ ಮೂರ್ತಿ ಭಗ್ನ ಮಾಡಿದ ಘಟನೆ ಧಾರವಾಡದ (Dharwad) ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ.
ನರಗುಂದ-ನವಲಗುಂದ ಬಂಡಾಯದ ಗೋಲಿಬಾರ್‌ನಲ್ಲಿ ಹುತಾತ್ಮರಾದ ಬಸಪ್ಪ ಲಕ್ಕುಂಡಿ ಪ್ರತಿಮೆ ಭಗ್ನ ಮಾಡಿದ ಯುವಕ, ಗ್ರಾಮದ ಬಸ್ ನಿಲ್ದಾಣದ ಎದುರಿನ ಸಂಗೊಳ್ಳಿ ರಾಯಣ್ಣನ ಮೂರ್ತಿ ಹಾಗೂ ಮೂರ್ತಿಯ ಖಡ್ಗಕ್ಕೆ ಭಗ್ನ ಮಾಡಿದ್ದಾನೆ. ಮೂರ್ತಿಯ ಕೆಲ ಭಾಗ ಭಗ್ನ ಮಾಡಿರುವವನು ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕ್ಯಾಬಿನೆಟ್ ಒಪ್ಪಿಗೆ
ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ನವಲಗುಂದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಭಗ್ನವಾಗಿರುವ ಮೂರ್ತಿಗಳಿಗೆ ಬಟ್ಟೆ ಸುತ್ತಿರುವ ಪೊಲೀಸರು, ಭಗ್ನ ಮಾಡಿರೋ ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ಗೆ ಡಿಸಿಎಂ ಪಟ್ಟ – ಶೀಘ್ರವೇ ಘೋಷಣೆ ಸಾಧ್ಯತೆ
ಅಳಗವಾಡಿ ಗ್ರಾಮದಲ್ಲಿ ಪೊಲೀಸರು ಶಾಂತಿ ಸಭೆನ್ನು ಮಾಡಿದ್ದು, ಐದು ದಿನಗಳಲ್ಲಿ ರಾಯಣ್ಣನ ಹಾಗೂ ರೈತ ಹುತಾತ್ಮನ ಹೊಸ ಮೂರ್ತಿ ಮಾಡಿಸಿ ಕೊಡುವ ಭರವಸೆ ನೀಡಿದ್ದಾರೆ. ಮೂರ್ತಿ ಭಗ್ನ ಮಾಡಿದವನ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಕರ್ನಾಟಕ ಸುರಕ್ಷಿತವಲ್ಲ, ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ: ರವಿಕುಮಾರ್ ಕಿಡಿ