– ರಟ್ಟಿಹಳ್ಳಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ
ಹಾವೇರಿ: ಹಿಂದೂಪರ ಸಂಘಟನೆಗಳು ಸೇರಿ ರಟ್ಟಿಹಳ್ಳಿ ಪಟ್ಟದಲ್ಲಿ ಇಂದು ಪ್ರಮುಖ ಬೀದಿಯಲ್ಲಿ ಬೃಹತ್ ರ್‍ಯಾಲಿ ಮಾಡಿದರು. ರ್‍ಯಾಲಿ ವೇಳೆ ಜಮಾಯಿಸಿದ ನೂರಾರು ಹಿಂದೂಪರ ಸಂಘಟನೆ ಕಾರ್ಯಕರ್ತರು ರ್‍ಯಾಲಿ ಮಧ್ಯದಲ್ಲಿ ಅನ್ಯಕೋಮಿನ ಜನರ ಮಂದಿರ ಹಾಗೂ ಶಾಲೆ ಮನೆಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.
Advertisement
ಒಂದು ವಾರಗಳ ಹಿಂದೆ ರಟ್ಟಿಹಟ್ಟಿ ಪಟ್ಟದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ ಮಾಡಿದ್ರಂತೆ. ಈ ಹಿನ್ನೆಲೆ ಇಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಲ್ಲು ತೂರಾಟ ಖಂಡಿಸಿ ಶೋಭಾಯಾತ್ರೆ ಹಮ್ಮಿಕೊಂಡಿದ್ರು. ನಗರದ ಪ್ರಮುಖ ಬೀದಿಯಲ್ಲಿ ಸಾಗಿದ ಬೃಹತ್ ಬೈಕ್ ರ್‍ಯಾಲಿ ವೇಳೆ ಕಿಡಗೇಡಿಗಳು ಕಲ್ಲು ತೂರಿದ್ದಾರೆ. ಇಲ್ಲಿ ಜಾತಿ ಮತ ಪಂತ ಬಿಟ್ಟು ನಾವೆಲ್ಲರು ಒಂದೇ ರೀತಿ ಇದ್ದೇವೆ. ನಮ್ಮ ದೇಹದಲ್ಲಿ ಇರೋ ರಕ್ತ ಕೆಂಪೇ ಆಗಿರುತ್ತದೆ. ಆದರೆ ಯಾರೋ ಹೊರಗಿನವರು ಬಂದು ನಮ್ಮ ಮನೆಯ ಮೇಲೆ ಕಲ್ಲುತೂರಿ ನಮ್ಮಲ್ಲಿ ಜಗಳ ಹಚ್ಚೋ ಕೆಲಸ ಮಾಡ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಚಕ್ರವ್ಯೂಹ ಮಾಡಿ ಸೋಲಿಸಿದ್ರು, ರಾಮನಗರದಲ್ಲೂ ಆ ಸಂಚು ನಡೀತಿದೆ- ನಿಖಿಲ್ ಕಿಡಿ
Advertisement
Advertisement
ಕಲ್ಲು ತೂರಾಟದ ಬಗ್ಗೆ ನನಗೆ ಅದರ ಮಾಹಿತಿ ಬಂದಿಲ್ಲ. ಪೊಲೀಸ್ ಅಧಿಕಾರಿಗಳ ಬಳಿ ಕೇಳಿ ತಿಳಿದುಕೊಳ್ಳುತ್ತೇನೆ. ಶಾಂತ ರೀತಿಯಿಂದ ಹೋಗಬೇಕು ಅಂತಾ ಪ್ರಾರಂಭದಲ್ಲಿ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಏರಿಯಾದಲ್ಲಿ ಹೋಗುವ ಸಮಯದಲ್ಲಿ ಸ್ವಾಗತ ಮಾಡಬೇಕಾದವರು ಕಲ್ಲು ತೆಗೆದುಕೊಂಡು ಹೆದರಿಸಿ ಕಳಿಸಿದ್ದಾರೆ. ಬ್ರಿಟಿಷ್ ವಿರುದ್ಧ ಕತ್ತಿ ಝಳಪಿಸಿದ ವ್ಯಕ್ತಿಗೆ ಅವಮಾನ ಮಾಡಿದ್ದಾರೆ. ಅದನ್ನ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದರು.
Advertisement
ರಟ್ಟಿಹಳ್ಳಿ ಪಟ್ಟಣದಲ್ಲಿ ಸದ್ಯ ಬಿಗುವಿನ ವಾತಾವರಣದ ನಿರ್ಮಾಣವಾಗಿದೆ. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.