– ಪರಸ್ಪರ ದ್ವೇಷ, ಜನರಲ್ಲಿ ಅನುಮಾನ ಮೂಡಿಸುವುದೇ ಸಂಘಪರಿವಾರದ ಅಜೆಂಡಾ
ತಿರುವನಂತಪುರಂ: ರಾಜ್ಯದಲ್ಲಿ ಪ್ರಬಲ ಎಡಪಂಥೀಯರಿಂದಾಗಿ ಸಂಘ ಪರಿವಾರದ ಕೋಮುವಾದಿ ಅಜೆಂಡಾವು ಕೇರಳದಲ್ಲಿ ಸಫಲವಾಗಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.
ಕಮ್ಯೂನಿಸ್ಟ್ ಕ್ರಾಂತಿಕಾರಿ ಪಿ.ಕೃಷ್ಣ ಪಿಳ್ಳೈ ಅವರ ಸ್ಮರಣಾರ್ಥ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದ ವಿಜಯನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆರ್‍ಎಸ್‍ಎಸ್ ತಮ್ಮ ಕೋಮು ಪ್ರಚಾರವನ್ನು ಹರಡುವ ಮತ್ತು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಈ ಮೂಲಕ ಸಾರ್ವಜನಿಕ ಭಾಷಣವನ್ನು ಕಲುಷಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರ್‍ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಎಡಪಂಥೀಯನ್ನು ದುರ್ಬಲಗೊಳಿಸಲು ಅವರು ವಿವಿಧ ಕೋಮುವಾದಿ ಅಜೆಂಡಾಗಳನ್ನು ಪ್ರಯತ್ನಿಸಿದ್ದಾರೆ. ಆದರೆ ಅವರು ಅದರಲ್ಲಿ ವಿಫಲರಾಗಿದ್ದಾರೆ. ಈಗ ಅವರು ಸಾರ್ವಜನಿಕ ಭಾಷಣವನ್ನು ಕಲುಷಿತಗೊಳಿಸುವತ್ತ ಗಮನಹರಿಸಿದ್ದಾರೆ. ಅದರ ಭಾಗವಾಗಿ ಅವರು ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುತ್ತಾ, ಕೋಮು ಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್
Advertisement
ಹಲಾಲ್ ಆಹಾರದ ಬಗ್ಗೆ ಇತ್ತೀಚಿನ ವಿವಾದವನ್ನು ನೀವೆಲ್ಲರೂ ಗಮನಿಸಿರಬಹುದು. ಇತ್ತೀಚೆಗೆ ಆರ್‍ಎಸ್‍ಎಸ್ ಶಬರಿಮಲೆಯಲ್ಲಿ ನೀಡಲಾಗುವ ಪ್ರಸಾದಕ್ಕೆ ಹಲಾಲ್ ಪ್ರಮಾಣೀಕರಣದ ವಿವಾದವನ್ನು ಮಾಡುತ್ತಿದೆ. ಈ ಮೂಲಕ ಸಮಾಜದಲ್ಲಿ ‘ದ್ವೇಷ’ ವನ್ನು ಹರಡಲು ಪ್ರಯತ್ನಿಸುತ್ತಿದೆ. ಇದು ನಮ್ಮ ಸಮಾಜಕ್ಕೆ ಹೊಸ ವಿಷಯವೇ? ಸಂಸತ್ತಿನಲ್ಲಿಯೂ ಹಲಾಲ್ ಪ್ರಮಾಣೀಕೃತ ಆಹಾರವಿದೆ. ಶಬರಿಮಲೆಯಲ್ಲಿ ಹಲಾಲ್ ಗುರುತು ಹೊಂದಿರುವ ಪ್ರಸಾದವು ಸರಬರಾಜು ಮಾಡಲ್ಪಟ್ಟಿದೆ ಎಂದು ಶಿವಸೇನೆಯ ನಾಯಕರು ಹೇಳಿದರು. ಹಲಾಲ್ ಪ್ರಮಾಣೀಕರಣವು ವಿವಿಧ ದೇಶಗಳಲ್ಲಿ ವ್ಯಾಪಾರ ತಂತ್ರದ ಭಾಗವಾಗಿದೆ. ಇದನ್ನು ಯಾವುದೇ ಒಂದು ನಿರ್ದಿಷ್ಟ ಧರ್ಮ ಮಾಡುವುದಿಲ್ಲ. ಅವರು ಬೇಕೆಂದು ನಮ್ಮಲ್ಲಿ ದ್ವೇಷವನ್ನು ಹರಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಈ ಸಂಘಪರಿವಾರದ ಕೋಮುವಾದಿ ಅಜೆಂಡಾ ಇತರ ಹಲವು ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿದೆ. ಅದು ಅಲ್ಲದೇ ಅವರು ಕಾಂಗ್ರೆಸ್ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಕೇರಳ ರಾಜ್ಯದಲ್ಲಿ ಎಡ ಚಳುವಳಿಯ ಪ್ರಬಲವಾಗಿದ್ದು, ಸಂಘಪರಿವಾರವು ತನ್ನ ಹಿಡಿತ ಸಾಧಿಸಲು ವಿಫಲವಾಗಿದೆ. ಹಲವು ರಾಜ್ಯಗಳ ದುರದೃಷ್ಟಕರ ಪರಿಸ್ಥಿತಿ ನಮಗೆ ತಿಳಿದಿದೆ. ಆ ರಾಜ್ಯಗಳಲ್ಲಿ ಎಡಪಕ್ಷಗಳಿಲ್ಲ ಮತ್ತು ಅಂತಹ ರಾಜ್ಯಗಳಲ್ಲಿ ಬಿಜೆಪಿಯು ಕಾಂಗ್ರೆಸ್ ಅನ್ನು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರು ಕೋಮುವಾದವನ್ನು ವಿರೋಧಿಸದಿರಲು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದರು.
ಯಾವುದೇ ಧರ್ಮದ ಆಧಾರವಿಲ್ಲದೆ ರೈತರು ಮತ್ತು ಇತರ ಕಾರ್ಮಿಕ ವರ್ಗಗಳು ತಮ್ಮ ಹಕ್ಕುಗಳಿಗಾಗಿ ಪರಸ್ಪರ ಹೋರಾಡಿದ ಕಾರಣ ಕಮ್ಯೂನಿಸ್ಟ್ ಚಳುವಳಿಯು ಕೇರಳದಲ್ಲಿ ಯಶಸ್ವಿಯಾಗಿದೆ. ನಾವು ವರ್ಗ ಹೋರಾಟವನ್ನು ನೋಡಿದ್ದೇವೆ. ನಮ್ಮ ಸಮಾಜವು ಹೇಗೆ ಬೆಳೆದಿದೆ ಎಂದು ಪ್ರಶ್ನಿಸಿದ ಅವರು, ಇತ್ತೀಚೆಗೆ, ಗ್ರಾಮೀಣ ಪ್ರದೇಶದಲ್ಲಿ ಕೇರಳವು ಅತ್ಯಧಿಕ ಕನಿಷ್ಠ ವೇತನವನ್ನು ಹೊಂದಿದೆ ಎಂಬ ಸಮೀಕ್ಷೆಯ ಫಲಿತಾಂಶವು ಹೊರಬಂದಿದೆ. ಅದು ಎಡಪಕ್ಷಗಳ ಹೋರಾಟದ ಫಲಿತಾಂಶವೂ ಆಗಿದೆ. ಆದರೆ ಸಂಘಪರಿವಾರ ಅಂತಹ ಎಲ್ಲ ಪ್ರಗತಿಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಣಕ್ಕಾಗಿ ಚಾಕುವಿನಿಂದ ಇರಿದು ಯುವಕ ತನ್ನ ಸ್ನೇಹಿತನನ್ನೇ ಕೊಂದ!
ಪರಸ್ಪರ ದ್ವೇಷ ಹುಟ್ಟುಹಾಕುವುದು, ಜನರ ಮನಸ್ಸಿನಲ್ಲಿ ಅನುಮಾನ ಮೂಡಿಸುವುದು ಸಂಘಪರಿವಾರದ ಅಜೆಂಡಾವಾಗಿದೆ. ತಲಶ್ಶೇರಿಯಲ್ಲಿ ಆರ್‍ಎಸ್‍ಎಸ್ ಇತ್ತೀಚೆಗೆ ನಡೆಸಿದ ಮೆರವಣಿಗೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ನಿಲ್ಲಿಸಬೇಕು ಎಂದು ಬೆದರಿಕೆ ಹಾಕಿ ಫೋಷಣೆಯನ್ನು ಕೂಗಿದ್ದಾರೆ. ಇಂತಹ ಘೋಷಣೆಗಳನ್ನು ಎತ್ತುವ ಮೂಲಕ ಅವರ ಅಜೆಂಡಾ ಏನು? ಕೇರಳದಲ್ಲಿ ಅವರ ಅಜೆಂಡಾ ಕೆಲಸ ಮಾಡುವುದಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಅವರು ಜನರ ಮನಸ್ಸಿನಲ್ಲಿ ಕೋಮುಗಲಭೆ ಮೂಡಲು ಪ್ರಯತ್ನಿಸುತ್ತಿದ್ದಾರೆ ಎಂದರು.