ಬಿಗ್ ಬಾಸ್ ಮನೆಯಲ್ಲಿ ಲವ್, ಮದುವೆ, ಬ್ರೇಕಪ್ ಎಲ್ಲವೂ ಕಾಮನ್ ಆಗೋಗಿದೆ. ಪ್ರತಿ ಸೀಸನ್ನಲ್ಲೂ ಪ್ರೇಮಿಗಳಾಗಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ ಇಲ್ವಾ? ಕಾಲಿಟ್ಟಿರೋ ಸ್ಪರ್ಧಿಗಳು ಜೋಡಿಗಳಾಗಿ ಹೊರಗೆ ಬರುತ್ತಾರೆ. ಇದು ಪ್ರತಿ ಸೀಸನ್ನಲ್ಲೂ ನಡೆಯುವ ಅಸಲಿ ಕಥೆ. ಈಗ ದೀದಿ ಎನ್ನುತ್ತಿದ್ದ ಡ್ರೋನ್ ಪ್ರತಾಪ್ಗೆ ಸಂಗೀತಾ ಪ್ರಪೋಸ್ ಮಾಡಿ ಶಾಕ್ ಕೊಟ್ಟಿದ್ದಾರೆ.
Advertisement
ದೊಡ್ಮನೆಯಲ್ಲಿ ಕಾರ್ತಿಕ್- ಸಂಗೀತಾ, ಇಶಾನಿ- ಮೈಕಲ್, ನಮ್ರತಾ-ಸ್ನೇಹಿತ್ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್- ಸಂಗೀತಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನುವಾಗಲೇ ಕಾರ್ತಿಕ್ಗೆ ಕೈ ಕೊಟ್ಟು ಡ್ರೋನ್ ಪ್ರತಾಪ್ಗೆ ಚಾರ್ಲಿ ನಟಿ ಪ್ರಪೋಸ್ ಮಾಡಿದ್ದಾರೆ. ಪ್ರತಾಪ್ಗೆ ನಿನ್ನ ಹುಡುಗಿ ನಾನೇ ಒಪ್ಪಿಕೋ ಅಂತ ಕ್ಯೂಟ್ ಕ್ಯೂಟ್ ಆಗಿ ನಟಿ ಪ್ರೇಮ ನಿವೇದನೆ ಮಾಡಿದ್ದಾರೆ.
Advertisement
Advertisement
ನಿಮ್ಮ ಬದುಕಿನಲ್ಲಿ ಮುಂದೆ ಹುಡುಗಿ ಬಂದರೆ ಪ್ರತಾಪ್ ಉತ್ತರ ಏನಾಗಿರುತ್ತೆ ಅಂತ ಪ್ರತಾಪ್ ಜೊತೆ ಮಾತುಕತೆ ನಡೆದಿದೆ. ಅದಕ್ಕೆ ಅಯ್ಯೋ ನನ್ನ ಬಿಡಮ್ಮ, ನನಗೆ ಜೀವನದಲ್ಲಿ ಗುರಿ ಇದೆ. ನನ್ನ ಕೆರಿಯರ್ ಕಡೆ ನೋಡಬೇಕು ಅಂತೀನಿ, ಅಪ್ಪ ನೋಡಿದ ಹುಡುಗಿನಾ ಮದುವೆ ಆಗ್ತೀನಿ ಎಂದು ಹೇಳ್ತೀನಿ ಎಂದು ಪ್ರತಾಪ್ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಕನ್ನಡ ಪ್ರೇಕ್ಷಕರಿಗೆ ಶ್ರೀಲೀಲಾ ಗುಡ್ ನ್ಯೂಸ್
Advertisement
ಈಗ ನಾನೇ ಆ ಹುಡುಗಿ, ನಿಮ್ಮ ಅಪ್ಪನ ನಾನು ಒಪ್ಪಸುತ್ತೇನೆ ಎಂದು ಪ್ರತಾಪ್ಗೆ ಸಂಗೀತಾ ಹೇಳಿದ್ದಾರೆ. ಅವರ ಮಾತು ಕೇಳಿ ಪ್ರತಾಪ್ ನಾಚಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಸಂಗೀತಾ ಕಾಡಿಸಿದ್ರೆ, ನನಗೆ ಇಷ್ಟ ಇಲ್ಲಪ್ಪಾ ಎಂದು ಪ್ರತಾಪ್ ಕೈ ಮುಗಿದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಸಂಗೀತಾ, ನಾನು ನಿನಗೆ ಇಷ್ಟ ಇಲ್ವಾ ಎಂದು ಮತ್ತೆ ಪ್ರತಾಪ್ ಕೈ ಹಿಡಿದು ಕೇಳಿದ್ದಾರೆ. ಇಲ್ಲ ಎಂದು ನಗುತ್ತಲೇ ಸಂಗೀತಾಗೆ ರಿಯಾಕ್ಟ್ ಮಾಡಿದ್ದಾರೆ ಪ್ರತಾಪ್.
ನನ್ನ ಪ್ಯೂಚರ್ ಪತಿಯನ್ನ ನಿಮ್ಮಲ್ಲಿ ಕಾಣುತ್ತಿದ್ದೇನೆ ಎಂದು ಸಂಗೀತಾ ಹೇಳಿದ್ರೆ, ಇತ್ತ ನೀವು ನನ್ನ ಅಕ್ಕ ಎಂದು ಪ್ರತಾಪ್ ಜಪ ಮಾಡಿದ್ದಾರೆ. ಇದೆಲ್ಲ ನಾನು ಒಪ್ಪಲ್ಲ. ನಿಮ್ಮ ಮೇಲೆ ನನಗೆ ತುಂಬಾ ಪ್ರೀತಿ ಆಗಿದೆ. ನಿಮ್ಮನ್ನ ನೋಡಿದ ಮೇಲೆ ಕ್ರಶ್ ಆಗಿದೆ ಎಂದು ಸಂಗೀತಾ, ಮನ ಒಲಿಸಲು ಪ್ರಯತ್ನ ಮಾಡಿದ್ದಾರೆ. ನನ್ನ ಹತ್ತಿರ ದುಡ್ಡಿಲ್ಲ ಎಂದ ಡ್ರೋನ್ಗೆ ಪರ್ವಾಗಿಲ್ಲ ನಾನೇ ಸಾಕುತ್ತೇನೆ. ನಿಮ್ಮ ನಗು, ಹೃದಯ, ಉಸ್ತುವಾರಿ ನೋಡಿಯೇ ನಾನು ಕಳೆದು ಹೋಗಿದ್ದೀನಿ ಎಂದೆಲ್ಲಾ ‘ಚಾರ್ಲಿ’ ನಟಿ ಡೈಲಾಗ್ ಹೊಡೆದಿದ್ದಾರೆ. ಆದರೂ ಸಂಗೀತಾ ಮಾತಿಗೆ ನೋ ಎಂದಿದ್ದಾರೆ ಪ್ರತಾಪ್. ಒಟ್ನಲ್ಲಿ ಈ ಸಂದರ್ಭ ಮನೆಮಂದಿಗೆ ಮಸ್ತ್ ಮನರಂಜನೆ ನೀಡಿದೆ.