Bigg Boss: ಅವಳು ಯಾವ ಸೀಮೆ ರಾಣಿ- ಸಂಗೀತಾ ವಿರುದ್ಧ ಸಿಡಿದೆದ್ದ ನಮ್ರತಾ

Public TV
2 Min Read
sangeetha 1 1

ಬಿಗ್ ಬಾಸ್ ಮನೆ (Bigg Boss Kannada 10) ಇದೀಗ ಅಲ್ಲೋಲ ಕಲ್ಲೋಲ ಆಗಿದೆ. ಕಾರ್ತಿಕ್ ಮತ್ತು ವಿನಯ್ ಜಟಾಪಟಿಗೆ ಸ್ಪರ್ಧಿಗಳು ಸುಸ್ತಾಗಿದ್ದಾರೆ. ಕಾರ್ತಿಕ್ ಕಡೆಯಿಂದ ಚಪ್ಪಲಿ ಏಟು ಬಿದ್ದಿದೆ ಅಂತ ವಿನಯ್ ಪರ ನಮ್ರತಾ ಗುಡುಗಿದ್ದಾರೆ. ಈ ವೇಳೆ, ಎದುರಾಳಿ ತಂಡದ ಸಂಗೀತಾ ಮೇಲೆ ನಮ್ರತಾ (Namratha Gowda) ತಿರುಗಿಬಿದ್ದಿದ್ದಾರೆ. ಅವಳು ಯಾವ ಸೀಮೆ ರಾಣಿ ಎಂದು ನಮ್ರತಾ ಕಿಡಿಕಾರಿದ್ದಾರೆ.

sangeetha 1

ವಿನಯ್ ರಾಕ್ಷಸನಾದ್ಮೇಲೆ ಇಬ್ಬರ ನಡುವಿನ ಜಗಳ ಬೇರೆಯದ್ದೇ ಹಂತ ತಲುಪಿದೆ. ಕಾರ್ತಿಕ್ ಮುಖಕ್ಕೆ ಚಪಾತಿ ಹಿಟ್ಟಿನಿಂದ ವಿನಯ್ ಜೋರಾಗಿ ಬೀಸಿದರು. ಇದು ದೈಹಿಕ ದೌರ್ಜನ್ಯ ಅಂತ ಕಾರ್ತಿಕ್ ಹೇಳುತ್ತಿದ್ದರೂ, ವಿನಯ್ ನಿಲ್ಲಿಸಲಿಲ್ಲ. ಸಿಟ್ಟಿನಿಂದ ಕಾರ್ತಿಕ್ ಚಪ್ಪಲಿಯನ್ನ ನೆಲಕ್ಕೆ ಜೋರಾಗಿ ಬೀಸಿದರು. ಆಗ ಚಪ್ಪಲಿ ಬೌನ್ಸ್ ಆಗಿ ವಿನಯ್‌ಗೆ ತಾಕಿತು. ಪರಿಣಾಮ, ವಿನಯ್ ದೊಡ್ಡ ರಂಪ ಮಾಡಿದರು.

vinay gowda 1

ನನಗೆ ಚಪ್ಪಲಿಯಲ್ಲಿ ಹೊಡಿತೀಯಾ? ಇವನ ಹತ್ತಿರ ಚಪ್ಪಲಿಯಲ್ಲಿ ಹೊಡೆಸಿಕೊಂಡು ನಾನಿಲ್ಲಿ ಇರಬೇಕಾ? ನಾನಿಲ್ಲಿ ಇರೋಲ್ಲ. ಆಚೆ ಹೋಗ್ಬೇಕು ಎಂದು ವಿನಯ್ ಕಿರುಚಾಡಿದರು. ಸಿಟ್ಟಿನಲ್ಲಿ ನೆಲಕ್ಕೆ ಕಾರ್ತಿಕ್ ಚಪ್ಪಲಿ ಎಸೆದಾಗ. ಅದು ಬೌನ್ಸ್ ಆಗಿ ವಿನಯ್‌ಗೆ ತಾಗಿತು. ಆಗ ವಿನಯ್ ದೊಡ್ಡ ರಂಪಾಟ ಮಾಡಿದರು. ಕಾರ್ತಿಕ್ ನನಗೆ ಚಪ್ಪಲಿಯಲ್ಲಿ ಹೊಡೆದ. ನಾನು ಇಲ್ಲಿ ಇರಲ್ಲ. ನನಗೆ ಮರ್ಯಾದೆ ಇಲ್ವಾ? ಅಂತೆಲ್ಲಾ ಕೂಗಾಡಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ವಿನಯ್ ಮುಂದಾಗಿದ್ದರು.

namratha gowda 1

ಈ ವೇಳೆ, ನಮ್ರತಾ ತಮ್ಮ ತಂಡದ ವಿನಯ್ ಪರ ವಹಿಸಿದ್ದರು. ಎದುರಾಳಿ ತಂಡದವರು ನಮ್ಮ ಮಾತು ಕೇಳುತ್ತಿಲ್ಲ. ಅದಕ್ಕೆಲ್ಲಾ ಕಾರಣ ಅವರ ತಂಡದ ಕ್ಯಾಪ್ಟನ್ ಸಂಗೀತಾ (Sangeetha Sringeri) ಎಂದು ಗುಡುಗಿದ್ದರು. ಅವಳು ಯಾವ ಸೀಮೆ ರಾಣಿ ಗುರು? ಸಂಗೀತಾನ ಯಾರು ರಾಣಿ ಮಾಡಿದ್ದರು. ಅವಿನಾಶ್ ನಿಮಗೆ ತಲೆಯಲ್ಲಿ ಬುದ್ಧಿ ಇಲ್ವಾ? ಸಿಂಗಲ್ ಆಗಿ ತಾನೇ ಆಟ ಆಡೋಕೆ ಬಂದಿದ್ದೀರಾ ತಾನೇ ಎಂದು ನಮ್ರತಾ ಕೇಳುತ್ತಾರೆ. ಅವಳು ಯಾರು ನಿಮಗೆ ಹೇಳೋಕೆ? ಎನ್ನುತ್ತಾರೆ. ಕಾರ್ತಿಕ್ ಕಡೆಯಿಂದ ಚಪ್ಪಲಿ ಏಟು ಬಿದ್ದಿದೆ ಅಂತ ವಿನಯ್ ಪರ ನಮ್ರತಾ ನಿಂತಿದ್ದಾರೆ. ಎದುರಾಳಿ ತಂಡದ ನಡೆಗೆ ನಮ್ರತಾ ಸಿಡಿದೆದ್ದಿದ್ದಾರೆ. ಇದನ್ನೂ ಓದಿ:Bigg Boss: ವಿನಯ್‌ಗೆ ಚಪ್ಪಲಿ ಏಟು ಬಿದ್ದಿಲ್ಲ- ಕಾರ್ತಿಕ್ ಪರ‌ ನಿಂತ ಮೈಕಲ್

ನಾವು ಸೇವಕರಾ, ಗಂಧರ್ವರಾ ನಾವು ಗುಲಾಮರಲ್ಲ. ನಾವ್ಯಾಕೆ ಶಿಕ್ಷೆ ತಗೊಳ್ಬೇಕು ಸ್ಮಾರ್ಟ್ ಆಗಿ ಆಡೋಣ. ಸ್ವಿಮ್ಮಿಂಗ್ ಪೂಲ್ ಹತ್ತಿರ ಕರ್ಕೊಂಡ್ ಹೋಗಿ ನೀರು ಹಾಕ್ತೀವಿ ಅಂದ್ರೆ ನಾವಿದನ್ನ ಒಪ್ಪುವುದಿಲ್ಲ ಅಂತ್ಹೇಳಿ ಎಂದು ತಂಡಕ್ಕೆ ಸಂಗೀತಾ ಹೇಳಿದರು. ಆಗ, ನಾವು ನಿರಾಕರಿಸುವಂತಿಲ್ಲ. ಆದರೆ ಒಡೆಯನ ಕರೆದು ಹೇಳಬೇಕು ಎಂದರು ತನಿಷಾ. ಬೇಡಿಕೆಯನ್ನ ಪೂರೈಸುತ್ತೇವೆ. ಆದರೆ, ದೈಹಿಕವಾಗಿ ಶಿಕ್ಷಿಸುವ ಹಕ್ಕು ಅವರಿಗೆ ಇಲ್ಲ ಅಷ್ಟೇ ಎಂದರು ಕಾರ್ತಿಕ್. ಈ ಮೂಲಕ ಸ್ಮಾರ್ಟ್ ಆಗಿ ಸಂಗೀತಾ ಟೀಮ್ ಆಟ ಆಡಿದ್ದರು. ಕಾದು ನೋಡೋಣ ವಾರಾಂತ್ಯದಲ್ಲಿ ಸುದೀಪ್‌ ಯಾವ ತಂಡಕ್ಕೆ ಯಾವ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಅಂತ. ಯಾವುದು ಸರಿ? ಯಾವುದು ತಪ್ಪು? ಕಿಚ್ಚನ ನಿಲುವೇನು ಎಂದು ತಿಳಿಯಲಿದೆ.

Share This Article