ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಕಾರ್ತಿಕ್ ಮತ್ತು ಸಂಗೀತಾ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್ (Karthik Mahesh) ಜೊತೆ ಬ್ರೇಕಪ್ ಮಾಡಿಕೊಂಡಿದ್ದ ಸಂಗೀತಾ ಇದೀಗ ಮುನಿಸು ಮರೆತು ಒಂದಾಗಿದ್ದಾರೆ. ಸಂಕ್ರಾಂತಿ ಹಬ್ಬದಂದು ಮತ್ತೆ ಕಾರ್ತಿಕ್- ಸಂಗೀತಾ (Sangeetha Sringeri) ನಡುವೆ ಸ್ನೇಹ ಚಿಗುರಿದೆ.
ಚೆನ್ನಾಗಿದ್ದ ಜೋಡಿ ಕಾರ್ತಿಕ್- ಸಂಗೀತಾ ದೂರ ದೂರ ಆಗಿದ್ದರು. ಮತ್ತೆ ಒಂದಾಗೋದೇ ಇಲ್ವೇನೋ ಅನ್ನುವಷ್ಟರ ಮಟ್ಟಿಗೆ ಜಗಳ ಆಡಿಕೊಂಡಿದ್ದರು. ಈಗ ಸಂಕ್ರಾಂತಿ ಹಬ್ಬದಂದು ಈ ಜೋಡಿ ಸ್ನೇಹಕ್ಕೆ ಬೆಲೆ ಕೊಟ್ಟು ಒಂದಾಗಿದ್ದಾರೆ. ‘ಬಿಗ್ ಬಾಸ್’ ಸಂಕ್ರಾಂತಿ ದಿನದಂದು, ನೀವು ನಿಮ್ಮ ಯಾವ ಒಂದು ಗುಣವನ್ನು ಬಿಡುತ್ತೀರಿ, ಯಾವ ಗುಣವನ್ನು ಇಲ್ಲಿಂದ ನಿಮ್ಮಲ್ಲಿ ಅಳವಡಿಸಿಕೊಳ್ಳುತ್ತೀರಿ ಹಾಗೂ ಯಾರೊಟ್ಟಿಗೆ ದ್ವೇಷವನ್ನು ಬಿಟ್ಟು ಸ್ನೇಹವನ್ನು ಬೆಳೆಸುತ್ತೀರಿ ಎಂದು ಸೂಚಿಸಿ ಆ ವ್ಯಕ್ತಿಯನ್ನು ಕರೆದು ಎಳ್ಳು ಬೆಲ್ಲ ನೀಡಿ ಎಂದು ಆದೇಶ ನೀಡಿದ್ದರು. ಇದನ್ನೂ ಓದಿ:ಯುವ ಪ್ರತಿಭೆ ವಿನಯ್- ದಿಶಾ ರಮೇಶ್ ನಟನೆಯ ‘ದಿ’ ಸಿನಿಮಾದ ಸಾಂಗ್ ಔಟ್
ಆಗ ಕಾರ್ತಿಕ್, ಇಲ್ಲಿ ನನ್ನ ಮುಂಗೋಪವನ್ನ ಬಿಡುತ್ತೇನೆ. ಯಾಕಂದ್ರೆ, ನಾನು ಬಹಳ ಬೇಗ ರಿಯಾಕ್ಟ್ ಮಾಡಿಬಿಡುತ್ತೇನೆ. ಆಮೇಲೆ ಕೊರಗೋದು ನಿಜ. ಸಂಗೀತಾ ಜೊತೆಗೆ ನಾನು ಎಷ್ಟೋ ವಿಷಯಗಳಲ್ಲಿ ಓವರ್ ಆಗಿ ರಿಯಾಕ್ಟ್ ಮಾಡಿ, ಕೋಪದಿಂದ ಮಾತಾಡಿದ್ದೇನೆ ಎಂದರು. ಬಳಿಕ ಸಂಗೀತಾರನ್ನು (Sangeetha) ಕರೆದು ಅವರಿಗೆ ಎಳ್ಳು-ಬೆಲ್ಲವನ್ನ ಕಾರ್ತಿಕ್ ತಿನ್ನಿಸಿದರು. ನನಗೆ ಇಲ್ಲಿ ಸಿಕ್ಕಿದ ಒಳ್ಳೆಯ ಫ್ರೆಂಡ್ ಸಂಗೀತಾ. ಈ ಸಂಕ್ರಾಂತಿ ಹಬ್ಬದಿಂದ ನಿಮಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದರು.
ಅದಾದ ಬಳಿಕ ಸಂಗೀತಾ, ನನಗೆ ಒಬ್ಬರನ್ನ ಬೇಗ ಕ್ಷಮಿಸೋಕೆ ಆಗಲ್ಲ. ಒಬ್ಬ ವ್ಯಕ್ತಿಯ ಮೇಲೆ ತುಂಬಾ ನಂಬಿಕೆ ಇಡುತ್ತೇನೆ. ಆ ನಂಬಿಕೆಗೆ ಹರ್ಟ್ ಮಾಡಿದರೆ ಮಾತ್ರ ನನಗೆ ಕ್ಷಮಿಸೋಕೆ ಆಗಲ್ಲ. ನಾನು ನಂಬಿಕೆಯಿಟ್ಟ ಇಬ್ಬರು ವ್ಯಕ್ತಿಗಳು ತನಿಷಾ ಮತ್ತು ಕಾರ್ತಿಕ್. ಒಂದು ಆಯ್ಕೆಯಲ್ಲಿ ತಪ್ಪಾದಾಗ, ಅವರಿಗೆ ಬೇಜಾರು ಮಾಡಿದೆ. ಅದು ನನ್ನ ಕೆಟ್ಟ ಗುಣ. ಇಲ್ಲಿಂದ ನಾನು ತಾಳ್ಮೆಯನ್ನ ಕಲಿಯುತ್ತೇನೆ ಎಂದು ಸಂಗೀತಾ ಮಾತನಾಡಿದರು.
ಕೆಲವು ಬಾರಿ ಫ್ರೆಂಡ್ಸ್ ಬಿಟ್ಟು ನಾನು ಬೇರೆಯವರೊಂದಿಗೆ ಇದ್ದದ್ದು, ಅವರವರ ದೃಷ್ಟಿಕೋನ ಅರ್ಥ ಮಾಡಿಕೊಳ್ಳೋಕೆ. ಆಗ ಅವರು ಒಳ್ಳೆಯವರಾಗಿಯೇ ಕಂಡಿದ್ದಾರೆ ಎಂದರು ಸಂಗೀತಾ. ನಾನು ಅಹಂ ಬಿಡೋಕೆ ನಾನು ಕಲಿಯುತ್ತೇನೆ. ಇಬ್ಬರು ಹೀರೋಗಳು ವಿನಯ್ ಮತ್ತು ಕಾರ್ತಿಕ್. ವಿನಯ್‌ಗೆ ನಾನು ಹೋಗೋ, ಬಾರೋ ಅಂದಿದ್ದೇನೆ. ಅದರ ಬಗ್ಗೆ ನನಗೆ ಪಶ್ಚಾತ್ತಾಪ ಇದೆ ಎಂದು ಸಂಗೀತಾ ವಿನಯ್‌ಗೆ (Vinay Gowda) ಕ್ಷಮೆ ಕೇಳಿದ್ದರು. ಬಳಿಕ ಕಾರ್ತಿಕ್‌ನ ಯಾವತ್ತೂ ಕ್ಷಮಿಸೋದಿಲ್ಲ ಅಂದುಕೊಂಡಿದ್ದೆ. ಅದಕ್ಕೆ ಸುಮಾರು ಕಾರಣಗಳಿವೆ. ನಾನು ತುಂಬಾ ನಂಬಿದ್ದೆ. ಸಾರಿ ಹೇಳಿದ್ಮೇಲೂ ಮತ್ತೆ ಮಾಡೋದಿದೆ ಅಲ್ಲ ಅದನ್ನ ನಂಬೋಕೆ ಆಗಲ್ಲ. ಕ್ಷಮಿಸಿ, ಮುಂದೆ ಸಾಗಬೇಕು ಅಂತ ಇಲ್ಲಿ ಕಲಿತಿದ್ದೇನೆ ಎಂದು ಹೇಳುತ್ತಾ ಕಾರ್ತಿಕ್‌ಗೆ ಸಂಗೀತಾ ಎಳ್ಳು-ಬೆಲ್ಲ ತಿನ್ನಿಸಿದ್ದಾರೆ.
ಸಂಕ್ರಾಂತಿ ಹಬ್ಬದಂದು ಸಂಗೀತಾ ನಡೆ ನೋಡಿ, ಮನೆಮಂದಿ ಅಚ್ಚರಿಗೊಂಡಿದ್ದಾರೆ. ಸಂಗೀತಾ ಮಾತೆಲ್ಲವೂ ಸ್ವತಃ ಕಾರ್ತಿಕ್‌ಗೆ ಅಚ್ಚರಿ ಮೂಡಿಸಿದೆ. ಅದೇನೇ ಇರಲಿ ಸಂಗೀತಾ- ಕಾರ್ತಿಕ್ ಜೊತೆಯಾಗಿರಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.