‘ಆಪರೇಷನ್ ಡಿ’ ಚಿತ್ರದ ಟೀಸರ್ ಗೆ ಸಂಗೀತಾ ಭಟ್ ಧ್ವನಿ

Public TV
2 Min Read
Sangeeta Bhatt

ದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿರುವ “ಆಪರೇಶನ್ ಡಿ” (Operation D) ಚಿತ್ರದ ಟೀಸರ್ ಗೆ ಖ್ಯಾತ ನಟಿ ಸಂಗೀತ ಭಟ್ (Sangeeta Bhatt) ಹಾಗೂ ಅವರ ಪತಿ ಸುದರ್ಶನ್ ರಂಗಪ್ರಸಾದ್ (Sudarshan Rangaprasad) ಧ್ವನಿ ನೀಡಿದ್ದಾರೆ. ವಿಭಿನ್ನ ರೀತಿಯಲ್ಲಿ Mythology Concept ಇಟ್ಟುಕೊಂಡು Teaser ಸಿದ್ಧವಾಗುತ್ತಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.  ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟನಾಗಿದ್ದ ತಿರುಮಲೇಶ್ ವಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.

Sangeeta Bhatt Sudarshan Rangaprasad 1

ತಿರುಮಲೇಶ್ ವಿ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ.  ಸುರೇಶ್ ಬಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಹಾಗೂ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವೇದಿಕ ಹಾಗೂ ಸಂತೋಷ್ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೆಂಪಗಿರಿ ಒಂದು ಹಾಡು ಹಾಗೂ ವೇದಿಕ ಉಳಿದ ಎಲ್ಲಾ ಹಾಡುಗಳನ್ನು ರಚಿಸಿದ್ದಾರೆ. ಅನಿರುದ್ ಶಾಸ್ತ್ರೀ,  ವೇದಿಕ ಹಾಗೂ ಪೃಥ್ವಿ ಭಟ್ ಗಾಯನದಲ್ಲಿ ಈ ಚಿತ್ರದ ಹಾಡುಗಳು ಸುಮಧುರವಾಗಿ ಮೂಡಿಬಂದಿದೆ. ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಹಾಗೂ ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನ, ಜಯ ಹರಿಪ್ರಸಾದ್(ಜೆರ್ರಿ ಮಾಸ್ಟರ್‌) ನೃತ್ಯ ನಿರ್ದೇಶನ

Sangeeta Bhatt Sudarshan Rangaprasad 2

ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್,  ಈ ಚಿತ್ರದ ನಾಯಕರಾಗಿ ನಟಿಸಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ ಬಿ ಚನ್ನಪ್ಳ ಇದ್ದಾರೆ. ವೆಂಕಟಾಚಲ, ಶಿವಮಂಜು, ಜೂ ನರಸಿಂಹರಾಜು, ಮಹೇಶ್ ಎಸ್ ಕಲಿ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ, ಸಂಚಯ ನಾಗರಾಜ್,ಕಿರಣ್ ಈಡಿಗ, ರವಿಶಂಕರ್,ಶಿವಾನಂದ, ಸೂರ್ಯವಂಶಿ(ಶಿವು ಅಪ್ಪಾಜಿ), ನಂಜಪ್ಪ ಎಸ್ ದೊಡ್ಡಮದುರೆ, ಆರ್ ಜೆ ಧೀರಜ್, ಪೃಥ್ವಿ ಬನವಾಸಿ, ಪ್ರಶಾಂತ್ ಸಂಗಾಪೂರ್, ರಂಜಿತ್ ರಂಜು, ಆಶಾ, ರೂಪ ಆರ್, ಧನಲಕ್ಷ್ಮೀ, ಅಕ್ಷಯ್, ಕಿರಣ್, ನಾಗರಾಜ್ ದಾವಣಗೆರೆ, ಸಂತೋಷ್,ನಾಗರಾಜ್ ಕೀಲಗೆರೆ, ಖಾದರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬಾಣಸವಾಡಿಯ ಅರ್ಜ್ ಕಲ ಸ್ಟುಡಿಯೋ ದಲ್ಲಿ ಟೀಸರ್ ನ ಡಬ್ಬಿಂಗ್ ನಡೆಯುತ್ತಿದ್ದು,  ಸಂಗೀತಾ ಭಟ್ ಹಾಗೂ ಸುದರ್ಶನ್ ರಂಗಪ್ರಸಾದ್ ಈಗಾಗಲೇ ಧ್ವನಿ ನೀಡಿದ್ದಾರೆ. ಚಿತ್ರರಂಗದ ಖ್ಯಾತನಾಮರೊಬ್ಬರು ಸದ್ಯದಲ್ಲೇ ಟೀಸರ್ ಗೆ ಧ್ವನಿ ನೀಡಲಿದ್ದಾರೆ.  ಆ ಧ್ವನಿ ಯಾರದು ಎಂದು ಚಿತ್ರತಂಡ ಗೌಪ್ಯವಾಗಿಟ್ಟಿದೆ.

Share This Article