ಹೊಸ ಫೋಟೋ ಶೂಟ್ ನಲ್ಲಿ ಸಂಗೀತಾ ಭಟ್ ಸಖತ್ ಹಾಟ್ ಹಾಟ್

Public TV
1 Min Read
Sangeetha Bhatt 1

ರಡನೇ ಸಲ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡು, ವೈಯಕ್ತಿಕ ಕಾರಣದಿಂದಾಗಿ ಹಲವು ವರ್ಷಗಳ ಕಾಲ ಚಿತ್ರೋದ್ಯಮದಿಂದ ದೂರ ಉಳಿದಿದ್ದವರು ಸಂಗೀತಾ ಭಟ್. ಮೀಟೂ ನಂತರ ಅವರು ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿಸಲಿಲ್ಲ.

Sangeetha Bhatt 4

ಈಗ ಮತ್ತೆ ಬಣ್ಣ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಹಲವಾರು ಫೋಟೋಶೂಟ್ ಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಹಾಕಿದ ಬಹುತೇಕ ಫೋಟೋಗಳು ನೋಡುಗರ ಗಮನ ಸೆಳೆಯುತ್ತಿವೆ.

Sangeetha Bhatt 7

`ಎರಡನೇ ಸಲ’, `ಅನುಕ್ತ’ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಸಂಗೀತಾ ಭಟ್ ಈಗ ಪವರ್‌ಫುಲ್ ಪಾತ್ರದ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ರೂಪಾಂತರ ಚಿತ್ರದಲ್ಲಿ ನಟ ಕಿಶೋರ್ ಜತೆ ಪ್ರಮುಖ ಪಾತ್ರದಲ್ಲಿ ಸಂಗೀತಾ ನಟಿಸಿದ್ದಾರೆ.

Sangeetha Bhatt 9

ಜೊತೆಗೆ ದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿರುವ ‘ಆಪರೇಶನ್ ಡಿ’ (Operation D) ಚಿತ್ರಕ್ಕೆ ಸಂಗೀತ ಭಟ್ (Sangeeta Bhatt) ಹಾಗೂ ಅವರ ಪತಿ ಸುದರ್ಶನ್ ರಂಗಪ್ರಸಾದ್ (Sudarshan Rangaprasad) ಧ್ವನಿ ನೀಡಿದ್ದಾರೆ.

Sangeetha Bhatt 5

ವಿಭಿನ್ನ ರೀತಿಯಲ್ಲಿ Mythology Concept ಇಟ್ಟುಕೊಂಡು Teaser ಸಿದ್ಧವಾಗುತ್ತಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.  ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟನಾಗಿದ್ದ ತಿರುಮಲೇಶ್ ವಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.

Sangeetha Bhatt 8

ಕನ್ನಡದ ಹಲವಾರು ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ಸಂಗೀತಾ ಭಟ್ (Sangeeta Bhatt) ಈ ಹಿಂದೆ ಇಂಡೋನೇಷ್ಯಾದ (Indonesia) ಬಾಲಿಗೆ ಪ್ರಯಾಣ ಬೆಳೆಸಿದ್ದರು. ಬಾಲಿಯಲ್ಲಿ (Bali) ಅವರು ಬೇಸಿಗೆಯನ್ನು ಎಂಜಾಯ್ ಮಾಡಿದ್ದರು.

Sangeetha Bhatt 4

ಇದೇ ಮೊದಲ ಬಾರಿ ಎನ್ನುವಂತೆ ಸಂಗೀತಾ ಬಿಕಿನಿಯಲ್ಲಿ (Bikini) ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಈ ಬಾರಿಯೂ ಸಖತ್ ಫೋಟೋ ಶೂಟ್ ಮಾಡಿಸಿದ್ದಾರೆ.

 

ಹೊಸ ಫೋಟೋ ಶೂಟ್ ನಲ್ಲಿ ಕೈಯಲ್ಲಿ ಬಿಡಿ ಹಿಡಿದುಕೊಂಡು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದಾರೆ. ಇದು ಕೇವಲ ಫೋಟೊಶೂಟ್ಟಾ ಅಥವಾ ಯಾವುದಾದರೂ ಸಿನಿಮಾಗಾಗಿ ಮಾಡಿಸಿದ್ದಾ ಎನ್ನುವ ಕುತೂಹಲ ಮೂಡಿಸಿದ್ದಾರೆ.

Share This Article