ಕೊಪ್ಪಳ: ಲೋಕಸಮರದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಅವರನ್ನು ಹಿಂದಿಕ್ಕಿ ಭರ್ಜರಿ ಜಯ ಗಳಿಸಿದ್ದಾರೆ.
ಕೊಪ್ಪಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಭಾರಿ ಪೈಪೋಟಿ ನಡೆದಿತ್ತು. ಈ ಪ್ರತಿಷ್ಠೆಯ ಓಟದಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸಿದೆ. ಬಿಜೆಪಿಯ ಸಂಗಣ್ಣ ಕರಡಿ 38397 ಮತಗಳ ಅಂತರದಲ್ಲಿ ರಾಜಶೇಖರ ಹಿಟ್ನಾಳ ಅವರನ್ನು ಹಿಟ್‍ಔಟ್ ಮಾಡಿದ್ದಾರೆ.
Advertisement
Advertisement
ಕಳೆದ ಬಾರಿಗಿಂತ 8 ಸಾವಿರಕ್ಕೂ ಹೆಚ್ಚು ಮತಗಳನ್ನು ಈ ಬಾರಿ ಸಂಗಣ್ಣ ಕರಡಿ ಗಳಿಸಿದ್ದಾರೆ. ಸಂಗಣ್ಣ ಕರಡಿ ಅವರು 5,86,783 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದರೆ, ರಾಜಶೇಖರ್ ಹಿಟ್ನಾಳ ಅವರು 5,48,386 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಒಟ್ಟು 2624 ಅಂಚೆ ಮತಗಳು ಬಿದ್ದಿವೆ. ಅದರಲ್ಲಿ ಸಂಗಣ್ಣ ಕರಡಿ 1786 ಮತಗಳನ್ನು ಪಡೆದಿದ್ದರೆ, ರಾಜಶೇಖರ್ ಹಿಟ್ನಾಳ್ 813 ಮತಗಳನ್ನು ಪಡೆದಿದ್ದಾರೆ.
Advertisement
Advertisement
ಯಾವ ಕ್ಷೇತ್ರದಲ್ಲಿ ಎಷ್ಟು?
1. ಸಿಂಧನೂರ: ಜೆಡಿಎಸ್‍ನ ವೆಂಕಟರಾವ್ ನಾಡಗೌಡ ಶಾಸಕರಾಗಿದ್ದು, 81 ಮತಗಳ ಲೀಡ್ ಪಡೆದಿದೆ.
ಮೈತ್ರಿ – 71,361 ಮತ ಬಿಜೆಪಿ – 71,441
2. ಮಸ್ಕಿ: ಕಾಂಗ್ರೆಸ್ಸಿನ ಪ್ರತಾಪಗೌಡ ಪಾಟೀಲ್ ಶಾಸಕರಾಗಿದ್ದು, ಬಿಜೆಪಿ 12,071 ಮತಗಳಿಂದ ಲೀಡ್ ಪಡೆದಿದೆ.
ಮೈತ್ರಿ – 52467 ಮತ, ಬಿಜೆಪಿ – 64538
3. ಕುಷ್ಟಗಿ: ಕಾಂಗ್ರೆಸ್ಸಿನ ಅಮರೇಗೌಡ ಬಯ್ಯಪುರ ಶಾಸಕರಾಗಿದ್ದು, ಬಿಜೆಪಿ 7,825 ಮತಗಳ ಮುನ್ನಡೆ ಸಿಕ್ಕಿತ್ತು
ಮೈತ್ರಿ – 64649 ಮತ, ಬಿಜೆಪಿ – 72474
4. ಕನಕಗಿರಿ: ಬಿಜೆಪಿಯ ಬಸವರಾಜ ದಡೇಸ್ಗೂರ ಶಾಸಕರಾಗಿದ್ದು, ಬಿಜೆಪಿಗೆ 7,296 ಮತಗಳ ಲೀಡ್ ಪಡೆದುಕೊಂಡಿತ್ತು.
ಮೈತ್ರಿ – 69763 ಮತ, ಬಿಜೆಪಿ – 77059
5. ಗಂಗಾವತಿ: ಬಿಜೆಪಿಯ ಪರಣ್ಣ ಮುನವಳ್ಳಿ ಶಾಸಕರಾಗಿದ್ದು, ಬಿಜೆಪಿಗೆ 2,536 ಮತಗಳ ಲೀಡ್ ಬಂದಿದೆ.
ಮೈತ್ರಿ ಅಭ್ಯರ್ಥಿ – 67751 ಮತ, ಬಿಜೆಪಿ – 70287
6. ಯಲಬುರ್ಗಾ: ಬಿಜೆಪಿಯ ಹಾಲಪ್ಪ ಆಚಾರ ಶಾಸಕರಾಗಿದ್ದು, ಬಿಜೆಪಿಗೆ 8,072 ಮತಗಳ ಮುನ್ನಡೆ ಸಿಕ್ಕಿತ್ತು.
ಮೈತ್ರಿ ಅಭ್ಯರ್ಥಿ – 68549, ಬಿಜೆಪಿ-76621
7. ಕೊಪ್ಪಳ: ಕಾಂಗ್ರೆಸ್ಸಿನ ರಾಘವೇಂದ್ರ ಹಿಟ್ನಾಳ್ ಶಾಸಕರಾಗಿದ್ದು, ಬಿಜೆಪಿಗೆ 11,678 ಮತಗಳ ಮುನ್ನಡೆ ಪಡೆದಿತ್ತು.
ಮೈತ್ರಿ ಅಭ್ಯರ್ಥಿ – 79446, ಬಿಜೆಪಿ – 91124
8. ಸಿರಗುಪ್ಪ: ಬಿಜೆಪಿಯ ಸೋಮಲಿಂಗಪ್ಪ ಶಾಸಕರಾಗಿದ್ದು, ಕಾಂಗ್ರೆಸ್ಸಿಗೆ 12,134 ಮತಗಳ ಲೀಡ್ ಬಂದಿದೆ.
ಮೈತ್ರಿ ಅಭ್ಯರ್ಥಿ -73587, ಬಿಜೆಪಿ – 61453
ಸಂಗಣ್ಣ ಕರಡಿ ಗೆಲುವಿಗೆ ಕಾರಣವೇನು?
ಸಂಗಣ್ಣ ಕರಡಿ ಗೆಲುವಿಗೆ ಬಹುಮುಖ್ಯ ಕಾರಣವಾಗಿದ್ದು ಮೋದಿ ಅಲೆ ಎಂದರೆ ತಪ್ಪಾಗಲ್ಲ. ಯಾಕೆಂದರೆ ದೇಶದಲ್ಲಿ ಮೋದಿ ಪ್ರಭಾವ ಅಷ್ಟರ ಮಟ್ಟಿಗೆ ಇದೆ. ಲೋಕಸಮರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಅಂತರದಲ್ಲಿ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಪಾತ್ರ ಅಪಾರವಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ಅವರಿಗೆ ಹಿಂದೂ ಸಂಘಟನೆಗಳು ಹಾಗೂ ಸಂಘ ಪರಿವಾರದ ಬೆಂಬಲ, ಸಂಸದರಾಗಿ ಮತ್ತು ಶಾಸಕರಾಗಿ ಆಡಳಿತ ನಡೆಸಿದ ಅನುಭವ, ಜನರ ಬಳಿ ಜಾಸ್ತಿ ಒಡನಾಟ ಹೊಂದಿರುವುದೇ ಅವರು ಜಯ ಗಳಿಸುವಂತೆ ಮಾಡಿದೆ.
ಅಲ್ಲದೆ ಲಿಂಗಾಯತ ಸಮುದಾಯದ ಮುಂಚೂಣಿ ನಾಯಕರಾಗಿ, ಆರ್.ಎಸ್.ಎಸ್. ಮೇಲುಸ್ತುವಾರಿಯನ್ನು ಉತ್ತಮವಾಗಿ ನಿಭಾಯಿಸಿಕೊಂಡು ಬಂದಿರುವುದು ಹಾಗೂ ಯುವ ಮತದಾರರ ಬೆಂಬಲದಿಂದ ಇಂದು ಲೋಕಸಮರದಲ್ಲಿ ಗೆದ್ದು ಯಶಸ್ಸಿನ ಪತದತ್ತ ಸಾಗಿದ್ದಾರೆ.
ಆದರೆ ರಾಜಕೀಯ ಅನುಭವ ಕಡಿಮೆ ಇರುವುದು, ಜಿ.ಪಂ ಅಧ್ಯಕ್ಷರಾಗಿ ಒಮ್ಮಿಂದಲೆ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಇಳಿದಿದ್ದು, ಕುಟುಂಬ ರಾಜಕಾರಣ ಎಂಬ ಹಣೆ ಪಟ್ಟಿ ಇವರುವ ಕಾರಣಕ್ಕೆ ಇಂದು ರಾಜಶೇಕರ್ ಹಿತ್ನಾಳ ಸೋಲು ಕಂಡಿದ್ದಾರೆ. ಜೊತೆಗೆ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಇರುವುದು, ಜೆ.ಡಿ.ಎಸ್ ಕಾರ್ಯಕರ್ತರ ಕಡೆಗಣನೆ ಮಾಡಿರುವು ಹಾಗೂ ಮುಸ್ಲಿಂ ಮತಗಳು ವಿಂಗಡನೆ ಆದ ಹಿನ್ನೆಲೆ ಹಿತ್ನಾಳ ಸೋಲು ಅನುಭವಿಸಿದ್ದಾರೆ.