ಚಿತ್ರದುರ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರವಾಗಿ ಹೊಸ ತಲೆನೋವು ಶುರುವಾದಂತಿದೆ. ನಮ್ಮದು ಏಕ ಪಕ್ಷದ ಸರ್ಕಾರವಲ್ಲ, ಕಾಂಗ್ರೆಸ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ತೀನಿ ಅಂತಾ ಹೇಳ್ತಿದ್ರೂ ಯಾರು ಕೇಳೋ ಸ್ಥಿತಿಲಿ ಇಲ್ಲ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಿದ್ದ ಹೊತ್ತು, ಅತ್ತ ಚಿತ್ರದುರ್ಗದ ಸಿರಿಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಾಣೆಹಳ್ಳಿಯ ತರಳಬಾಳು ಗುರುಪೀಠದ ಪಂಡಿತಾರಾಧ್ಯ ಸ್ವಾಮೀಜಿ ಆಕ್ರೋಶ ಹೊರಹಾಕಿದ್ರು. ಚುನಾವಣೆಗೂ ಮೊದ್ಲು ಸಾಲ ಮನ್ನಾ ಮಾಡ್ತೀನಿ ಅಂತಿದ್ದ ಹೆಚ್‍ಡಿಕೆ ನಾಲಿಗೆ ಸಿಎಂ ಆದ ಕೂಡ್ಲೇ ಹೊರಳುತ್ತಿದೆ. ನೋಡೋಣ ಕಾಯೋಣ ಅಂತಾ ಮಾತು ಬದಲಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.
Advertisement
ಇದು ರಾಜಕೀಯ ನಾಟಕವಲ್ಲದೇ ಮತ್ತೇನು? ಈ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಆಗಲ್ಲ. ಆಗೋದು ಕೇವಲ ಅವರ ಆಕಾಂಕ್ಷೆಗಳ ಈಡೇರಿಕೆ. ಇವರದ್ದೆಲ್ಲಾ ಕ್ಷಣಕ್ಕೊಮ್ಮೆ ಮಾತು ಬದಲಿಸೋ ಸ್ವಭಾವ ಅಂತಾ ಟೀಕಿಸಿದ್ರು.
Advertisement
ಈ ವಿಚಾರ ಗೊತ್ತಾಗಿಯೋ ಏನೋ, ಸಿಎಂ ಆದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿಗಳು ಅವರ ಕೆಲಸ ಅರಿತುಕೊಳ್ಳಬೇಕು. ರಾಜಕೀಯದ ಭಾಗವಾಗುವುದು ಸ್ವಾಮೀಜಿಗಳ ಕೆಲಸವಲ್ಲ. ಸ್ವಾಮೀಜಿಗಳು ಗುರುಗಳ ಸ್ಥಾನದಲ್ಲಿ ಕೂತು, ನಾವು ತಪ್ಪು ಮಾಡಿದಾಗ ಹೇಳಬೇಕು. ಅದನ್ನು ಬಿಟ್ಟು ಅವರೇ ತಪ್ಪು ಮಾಡಿದರೆ ಹೇಗೆ ಅಂತಾ ಪರೋಕ್ಷವಾಗಿ ಕುಮಾರಸ್ವಾಮಿ ಪ್ರಶ್ನಿಸಿದ್ರು. ಈ ಬೆಳವಣಿಗೆ ರಾಜಕೀಯ ಮತ್ತು ಆಧ್ಯಾತ್ಮಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.