ಬಳ್ಳಾರಿ: ರೆಡ್ಡಿ ಬ್ರದರ್ಸ್-ರಾಮುಲು ಸೇರಿ ಬಳ್ಳಾರಿಯನ್ನು (Ballari) ಲೂಟಿ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವಾಗ್ದಾಳಿ ನಡೆಸಿದ್ದಾರೆ.
ಸಂಡೂರು ಉಪಚುನಾವಣೆಯಲ್ಲಿ (Sanduru By Election) ಅನ್ನಪೂರ್ಣ (Annapurna Tukaram) ಪರ ಮತಯಾಚಿಸಿದ ಸಿಎಂ ಸಿದ್ದರಾಮಯ್ಯ ಮಾತಾಡಿ, ಇದು ಉಪಚುನಾವಣೆ ಆದರೂ ಬಹಳ ಮಹತ್ವದ ಚುನಾವಣೆ. ಬಿಜೆಪಿಗರು ಸುಳ್ಳು ಹೇಳಿ, ಹಣ ಖರ್ಚು ಮಾಡಿ ಸಂಡೂರು ಗೆಲ್ಲಲು ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ ಜನಾರ್ದನರೆಡ್ಡಿ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿ ತಮ್ಮ ಹಳೇ ಪಾದಯಾತ್ರೆಯನ್ನು ಸಿಎಂ ನೆನಪಿಸಿದರು. ಇದನ್ನೂ ಓದಿ: ಉಪಚುನಾವಣೆ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಹೈಕಮಾಂಡ್‌ನಿಂದ ಸೂಚನೆ – ಜನಾರ್ದನರೆಡ್ಡಿ
ಬಿಜೆಪಿಯವರು ಇದೀಗ ಸೂಟ್ ಕೇಸ್ ಹಿಡಿದುಕೊಂಡು ಬಂದಿದ್ದಾರೆ. ನನ್ನ ಅಧಿಕಾರದಿಂದ ತೆಗಿಬೇಕು ಎಂದು ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ನನ್ನ ಅಧಿಕಾರದಿಂದ ತೆಗೆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ತೆಗೆಯಬಹುದು ಅಂತ ಕೇಸ್ ಹಾಕಿದ್ದಾರೆ ಎಂದರು. ಇದನ್ನೂ ಓದಿ: ರೈತ ವಿರೋಧಿ, ಹಿಂದೂ ವಿರೋಧಿ ಧೋರಣೆ ಕಾಂಗ್ರೆಸ್ಸಿಗೆ ಶಾಪವಾಗಲಿದೆ – 3 ಕ್ಷೇತ್ರಗಳಲ್ಲೂ ನಮ್ಮದೇ ಗೆಲುವು: ವಿಜಯೇಂದ್ರ
ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಜೋಶಿ, ಸೋಮಣ್ಣ ಅವರು ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ನಡೆಸಿದರು. ಬಿಎಸ್‌ವೈ ಮಾತಾಡಿ, ಕಾಂಗ್ರೆಸ್ ಮುಳುಗುತ್ತಿರೋ ಹಡಗು. ಸಿಎಂ ಚೇರ್ ಯಾವಾಗ ಖಾಲಿಯಾಗುತ್ತೋ ಗೊತ್ತಿಲ್ಲ. ಹಣ, ಹೆಂಡ, ಅಧಿಕಾರ, ತೋಳ್ಬಲದಿಂದ ಅಧಿಕಾರ ಪಡೆಯಲು ಪ್ರಯತ್ನ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜನಾರ್ದನ ರೆಡ್ಡಿ ಮಾತಾಡಿ, ಲೋಕಾಯುಕ್ತದ ವಿಚಾರಣೆ ಎದುರಿಸಿದ ಮೊದಲ ಮುಖ್ಯಮಂತ್ರಿ ನೀವು. 20 ದಿನದಲ್ಲಿ ನೀವು ಮೈಸೂರು ಬಿಡೋ ಪರಿಸ್ಥಿತಿ ಬರುತ್ತೆ. ನಾನು ಅಭಿವೃದ್ಧಿ ವಿಚಾರದಲ್ಲಿ ಕೊಟ್ಟ ಮಾತು ತಪ್ಪಿದ್ರೆ ಪ್ರಾಣ ಬಿಡುತ್ತೇನೆ ಎಂದು ಸವಾಲು ಹಾಕಿದರು.