ಬೆಂಗಳೂರು: ಶ್ರೀರಾಮುಲು (Sriramulu) ವಿಚಾರದಲ್ಲಿ ನಾನು ಯಾರಿಗೂ ಚಾಡಿ ಹೇಳಿಲ್ಲ, ಅದರ ಅವಶ್ಯಕತೆ ನನಗೆ ಇಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಹೇಳಿದ್ದಾರೆ.
ತನ್ನ ವಿರುದ್ಧ ಶ್ರೀರಾಮುಲು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಬಂಗಾರು ಹನುಮಂತುಗೆ (Bangaru Hanumanthu) ಸಂಡೂರು ಉಪಚುನಾವಣೆಯ ಟಿಕೆಟ್ ನಾನು ಕೊಡಿಸಲಿಲ್ಲ. ಪಕ್ಷ ಅವರಿಗೆ ಟಿಕೆಟ್ ನೀಡಿತ್ತು. ನನಗೆ ಕೆಲಸ ಮಾಡಲು ಪಕ್ಷ ಆದೇಶ ಮಾಡಿತ್ತು. ನಮ್ಮ ಪಕ್ಷದ ಎಲ್ಲ ನಾಯಕರು ಬಂದು ಸಂಡೂರಲ್ಲಿ ಪ್ರಚಾರ ಮಾಡಿದ್ದರು. ಆದರೆ ರಾಮುಲು ಮೂರು ದಿನ ತಡವಾಗಿ ಪ್ರಚಾರಕ್ಕೆ ಬಂದಿದ್ದರು. ಅವರ ಜತೆಗೂ ನಾನು ಕೆಲಸ ಮಾಡಿ ಪ್ರಚಾರ ಮಾಡಿದೆ. ಆದರೆ ಬಿಜೆಪಿ ಅಭ್ಯರ್ಥಿ ಸೋಲುವ ಪರಿಸ್ಥಿತಿ ಬಂತು ಎಂದು ತಿಳಿಸಿದರು.
Advertisement
ಲೋಕಸಭೆ ಚುನಾವಣೆ ನಡೆಯುವ ತಿಂಗಳ ಮೊದಲು ಬಿಜೆಪಿಗೆ ನಾನು ಸೇರಿದೆ. ಬಳ್ಳಾರಿಗೆ ಹೋಗಲು ನನಗೆ ಅನುಮತಿ ಇರಲಿಲ್ಲ. ಸುಪ್ರೀಂ ಕೋರ್ಟ್ ಅನಮತಿ ನೀಡಿದ ಬಳಿಕ ನಾನು ಬಳ್ಳಾರಿಗೆ ಹೋಗಿದ್ದೆ. ಸಂಡೂರು ಕ್ಷೇತ್ರದ ಟಿಕೆಟ್ ಚರ್ಚೆಯ ವೇಳೆ ಯಾರಿಗೂ ನೀಡಿದರೂ ನಾನು ದುಡಿಯುತ್ತೇನೆ ಎಂದು ಹೇಳಿದ್ದೆ ಎಂದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿಯನ್ನು ಮಣಿಸಲು ಡಿಕೆಶಿಯಿಂದ ಶ್ರೀರಾಮುಲು ಆಪರೇಷನ್- ರೆಡ್ಡಿ ಬಾಂಬ್
Advertisement
Advertisement
ರಾಮುಲುಗೆ ಸಹಕಾರ ನೀಡಿದ್ದೆ
1991 ರಲ್ಲಿ ರಾಮುಲು ಅವರ ಸೋದರ ಮಾವನ ಕೊಲೆ ನಡೆಯುತ್ತದೆ. ಆ ಕೊಲೆಯ ನಂತರ ನನ್ನಆಶ್ರಯಕ್ಕೆ ರಾಮುಲು ಬರುತ್ತಾರೆ. ಚಾಕು ಹಿಡಿದು, ಬೆನ್ನಿಗೆ ಕೊಡಲಿ ಕಟ್ಟಿಕೊಂಡವರ ರಕ್ಷಣೆಯಲ್ಲಿ ರಾಮುಲು ಬಂದರು. ಆಗ ಅವರಿಗೆ ರಕ್ಷಣೆ ಬೇಕಿತ್ತು.
Advertisement
ಮಾವನನ್ನು ಮುಗಿಸಿದವರು ರಾಮುಲು ಅವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ರಾಮುಲು ಬಗ್ಗೆ ನಮ್ಮ ತಾಯಿಗೆ ನಂಬಿಕೆ ಇತ್ತು. ಅವನನ್ನು ಕಾಪಾಡುವ ಜವಾಬ್ದಾರಿ ನಿನ್ನದು ಅಂತ ನಮ್ಮ ತಾಯಿ ನನಗೆ ಹೇಳಿದ್ದರು.
ಬಳ್ಳಾರಿಯಲ್ಲಿ ರಾಘವೇಂದ್ರ ಎನ್ನುವವನ ಕೊಲೆ ನಡೆಯಿತು. ಆ ಕೊಲೆ ಆರೋಪ ರಾಮುಲು ಮೇಲೆ ಬಂದಿತ್ತು. ಆಗ ನಾನು ಒಂದು ಸುದ್ದಿಗೋಷ್ಠಿ ಮಾಡಿ ದಿವಾಕರ್ ಬಾಬು ಮೇಲೆ ನಾನು ಆರೋಪ ಮಾಡಿದೆ. ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದನ್ನೂ ಓದಿ: ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಸಾಚಾ ಅಂತಾರೆ, ಸಮಯ ಬಂದಾಗ ಜನರ ಮುಂದೆ ಬಿಚ್ಚಿಡ್ತೀನಿ: ರೆಡ್ಡಿಗೆ ರಾಮುಲು ವಾರ್ನಿಂಗ್
ರಾಮುಲು ಅವರ ಮಾವನ ಕೊಲೆಗೆ ಫಂಡಿಂಗ್ ಮಾಡಿದವರು ಸೂರ್ಯನಾರಾಯಣ ರೆಡ್ಡಿ. ದಿವಾಕರ್ ಬಾಬು ಮೂಲಕ ಸೂರ್ಯನಾರಾಯಣ ರೆಡ್ಡಿ ಕೊಲೆ ಮಾಡಿಸಿದರು. ಈಗ ಅವರು ಕಾಂಗ್ರೆಸ್‌ನಲ್ಲಿದ್ದಾರೆ. ರಾಮುಲು ತಮ್ಮ ಮಾವನ ಕೊಲೆಗಾರರ ಮೇಲೆ ಸೇಡಿಗೆ ಮುಂದಾಗಿದ್ದರು. ಆಗ ನಾನು ರಾಮುಲುಗೆ ಬುದ್ಧಿವಾದ ಹೇಳಿ, ಅಪರಾಧದಲ್ಲಿ ಶಾಮೀಲಾದರೆ ಬೆಳೆಯಲು ಸಾಧ್ಯವಿಲ್ಲ. ಅವರ ಮುಂದೆ ದೊಡ್ಡದಾಗಿ ಬೆಳಿ ಎಂದು ಹೇಳಿದೆ.
ಪ್ರಾಣ ತೆಗೆಯುವ ಕೆಲಸ ಬೇಡ ಅಂತ ರಾಮುಲು ಅವರನ್ನು ಸನ್ಮಾರ್ಗದಲ್ಲಿ ಹೋಗುವಂತೆ ಮಾಡಿದೆ. ರಾಮುಲು ಮತ್ತವರ ತಂಡ ಸೂರ್ಯನಾರಾಯಣ ರೆಡ್ಡಿ ಕೊಲೆಗೆ ಸ್ಕೆಚ್ ಹಾಕಿದ್ದರು. ಅದನ್ನು ತಡೆದು ಸನ್ಮಾರ್ಗದಲ್ಲಿ ಕರೆದುಕೊಂಡು ಬಂದಿದ್ದು ನಾನು.
ನನ್ನ ಮಾತಿನಂತೆ ರಾಮುಲು ರಾಜಕೀಯಕ್ಕೆ ಬಂದರು. 1999 ರಲ್ಲಿ ಯಡಿಯೂರಪ್ಪ ಹಾಗೂ ಸುಷ್ಮಾ ಸ್ವರಾಜ್ ಭೇಟಿ ಮಾಡಿಸಿ ಶಾಸಕ ಕ್ಷೇತ್ರಕ್ಕೆ ಟಿಕೆಟ್ ಕೊಡಿಸಿದೆ. ಆಗ ರಾಮುಲು ಬಿಎಸ್ ಯಡಿಯೂರಪ್ಪನವರ ಮುಂದೆ ಕಣ್ಣೀರು ಹಾಕಿದ್ದರು.ಆ ಚುನಾವಣೆಯಲ್ಲಿ ರಾಮುಲು ಸೋತರೂ ಬಿಜೆಪಿಯಲ್ಲಿ ಅವರು ಬೆಳೆದರು. ನಮ್ಮಿಬ್ಬರ ಸ್ನೇಹ ರಾಜಕೀಯ ಮೀರಿದ್ದು. ನಂತರ ಸಮ್ಮಿಶ್ರ ಸರ್ಕಾರ ಬಂದಾಗ ರಾಮುಲು ಅವರನ್ನು ನಾನು ಮಂತ್ರಿ ಮಾಡಿಸಿದ್ದೆ ಎಂದು ತಿಳಿಸಿದರು.