LatestMain PostSmartphonesTech

ಮೆಟಾ ಇಂಡಿಯಾದ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್ ನೇಮಕ

ನವದೆಹಲಿ: ಫೇಸ್‌ಬುಕ್‌ನ (Facebook) ಮಾತೃ ಸಂಸ್ಥೆ ಮೆಟಾ ಭಾರತದ (Meta India) ಹೊಸ ಮುಖ್ಯಸ್ಥರನ್ನು ನೇಮಕ ಮಾಡಿದೆ. ಮೆಟಾ ಇತ್ತೀಚೆಗೆ ಜಾಗತಿಕವಾಗಿ ತನ್ನ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಇಂದು ಸಂಧ್ಯಾ ದೇವನಾಥನ್ (Sandhya Devanathan) ಅವರನ್ನು ಮೆಟಾ ಇಂಡಿಯಾದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ.

ಕೆಲ ದಿನಗಳ ಹಿಂದೆ ಮೆಟಾ ಇಂಡಿಯಾದ ಮುಖ್ಯಸ್ಥರಾಗಿದ್ದ ಅಜಿತ್ ಮೋಹನ್ ಸ್ನ್ಯಾಪ್ ಇಂಕ್ ಅನ್ನು ಸೇರಲು ಮೆಟಾದ ಹುದ್ದೆಯನ್ನು ತೊರೆದಿದ್ದರು. ಇದೀಗ ಅವರ ಸ್ಥಾನವನ್ನು ಸಂಧ್ಯಾ ದೇವನಾಥನ್ ತುಂಬಲಿದ್ದಾರೆ. ಸಂಧ್ಯಾ 2023ರ ಜನವರಿ 1 ರಿಂದ ತಮ್ಮ ಹೊಸ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ವರದಿಯಾಗಿದೆ.

ಸಂಧ್ಯಾ ದೇವನಾಥನ್ ಹಿನ್ನೆಲೆ:
ಸಂಧ್ಯಾ 2000 ಇಸವಿಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂಬಿಎ ಯನ್ನು ಪೂರ್ಣಗೊಳಿಸಿದರು. ಇವರು ಬ್ಯಾಂಕಿಂಗ್, ಪಾವತಿ ಹಾಗೂ ತಂತ್ರಜ್ಞಾನದಲ್ಲಿ 22 ವರ್ಷಗಳ ಜಾಗತಿಕ ವ್ಯಾಪಾರದ ಅನುಭವ ಹೊಂದಿದ್ದಾರೆ. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ

2016ರಲ್ಲಿ ಮೆಟಾಗೆ ಸೇರಿದ ಸಂಧ್ಯಾ ಸಿಂಗಾಪುರ ಹಾಗೂ ವಿಯೆಟ್ನಾಂನಲ್ಲಿ ಕಂಪನಿಯ ವ್ಯವಹಾರ ಹಾಗೂ ತಂಡಗಳನ್ನು ನಿರ್ಮಿಸಲು ಸಹಾಯ ಮಾಡಿದ್ದರು. 2020ರಲ್ಲಿ ಇವರು ಏಷ್ಯಾ-ಪೆಸಿಫಿಕ್ (APAC) ಪ್ರದೇಶದಲ್ಲಿ ಕಂಪನಿಯ ಗೇಮಿಂಗ್ ಮಾರುಕಟ್ಟೆಯನ್ನು ವಿಸ್ತರಿಸಿದ್ದರು. ಇದನ್ನೂ ಓದಿ: ಫಾತಿಮಾ ‘ಛಂದ ಪುಸ್ತಕ ಬಹುಮಾನ’ ನಿರಾಕರಣೆ: ಸೋಷಿಯಲ್ ಮೀಡಿಯಾದಲ್ಲಿ ಎಡ-ಬಲ ಚರ್ಚೆ

Live Tv

Leave a Reply

Your email address will not be published. Required fields are marked *

Back to top button