ಸ್ಯಾಂಡಲ್ ವುಡ್ ಗಷ್ಟೇ ಸೀಮಿತವಾಗಿದ್ದ ನಿರ್ಮಾಪಕರು ಈಗ ಒಬ್ಬೊಬ್ಬರಾಗಿ ಪ್ಯಾನ್ ಇಂಡಿಯಾ ಅಖಾಡಕ್ಕೆ ಧುಮುಕಿದ್ದಾರೆ. ಕನ್ನಡದ ಜೊತೆಗೆ ನಾಲ್ಕೈದು ಭಾಷೆಗಳಲ್ಲಿ ಸಿನಿಮಾ ತಯಾರಿಸಿಕೊಂಡು ಪರಭಾಷಾ ಅಂಗಳದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಆ ಸಾಲಿಗೆ ಕನ್ನಡದ ಜನಪ್ರಿಯ ನಿರ್ಮಾಪಕರಾದ ಸಂದೇಶ್ ಎನ್ (Sandesh) ಸೇರ್ಪಡೆಗೊಳ್ಳುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಬಹುನಿರೀಕ್ಷಿತ `ಘೋಸ್ಟ್’ (Ghost) ಚಿತ್ರವನ್ನ ಪರಭಾಷಾ ಅಂಗಳದಲ್ಲಿ ಸ್ಪರ್ಧೆಗಿಳಿಸುತ್ತಿದ್ದಾರೆ. ಟಾಲಿವುಡ್ ನಟ ಸಿಂಹ ಬಾಲಯ್ಯ ನಟನೆಯ `ಭಗವಂತ್ ಕೇಸರಿ’, ಮಾಸ್ ಮಹರಾಜ ರವಿತೇಜ ಅಭಿನಯದ `ಟೈಗರ್ ನಾಗೇಶ್ವರ್ ರಾವ್’, ದಳಪತಿ ವಿಜಯ್ ನಟಿಸಿರುವ `ಲಿಯೋ’ ಚಿತ್ರದೆದುರು, ಮಾಸ್ ಲೀಡರ್ ನಾಯಕತ್ವದ `ಘೋಸ್ಟ್’ ಸಿನಿಮಾನ ಫೀಲ್ಡಿಗಿಳಿಸುತ್ತಿದ್ದಾರೆ.
Advertisement
`ಘೋಸ್ಟ್’ ಕಣಕ್ಕಿಳಿಯುವುದಕ್ಕೆ ಇನ್ನೇನು ಮೂರೇ ಮೂರು ದಿನ ಬಾಕಿಯಿದೆ. ಇದೇ ಅಕ್ಟೋಬರ್ 19ರಂದು ಬಹುನಿರೀಕ್ಷಿತ `ಘೋಸ್ಟ್’ ಚಿತ್ರ ತೆರೆಗಪ್ಪಳಿಸುತ್ತಿದೆ. ಬಿಗ್ಡ್ಯಾಡಿನಾ ಸ್ವಾಗತಿಸುವುದಕ್ಕೆ ಈ ಬಾರಿ ದೊಡ್ಮನೆ ಫ್ಯಾನ್ಸ್ ಮಾತ್ರವಲ್ಲ ಪ್ಯಾನ್ ಇಂಡಿಯಾ ಪ್ರೇಕ್ಷಕರೆಲ್ಲರೂ ಕೂಡ ಒಂಟಿ ಕಾಲಿನಲ್ಲಿ ನಿಂತಿದ್ದಾರೆ. `ಜೈಲರ್’ ಚಿತ್ರದಲ್ಲಿ ನರಸಿಂಹನಾಗಿ ಕಮಾಲ್ ಮಾಡಿದ ಶಿವಣ್ಣ (Shivaraj Kumar), `ಘೋಸ್ಟ್’ ಮೂಲಕ ಒರಿಜಿನಲ್ ಗ್ಯಾಂಗ್ ಸ್ಟರ್ ಆಗಿ ಖದರ್ ತೋರಿಸುವುದಕ್ಕೆ ಹೊರಟಿದ್ದಾರೆ. ಈಗಾಗಲೇ ಟೀಸರ್ ಹಾಗೂ ಟ್ರೇಲರ್ ಮೂಲಕವೇ ಸಮಸ್ತ ಸಿನಿಮಾ ಪ್ರೇಮಿಗಳನ್ನ ಹುಚ್ಚೆಬ್ಬಿಸಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಇದೇ ಮೊದಲ ಬಾರಿಗೆ ಸಿನಿಮ್ಯಾಟಿಕ್ ಯೂನಿವರ್ಸ್ ಕಾನ್ಸೆಪ್ಟ್ ಇಂಟ್ರುಡ್ಯೂಸ್ ಮಾಡ್ತಿರುವ ನಿರ್ದೇಶಕ ಶ್ರೀನಿವಾಸ್ `ಘೋಸ್ಟ್’ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ನಿರ್ಮಾಪಕ ಸಂದೇಶ್ ಎನ್ ಅವರು ಕೋಟಿ ಕೋಟಿ ಸುರಿದು `ಘೋಸ್ಟ್’ನ ರಿಚ್ ಆಗಿಯೇ ನಿರ್ಮಿಸಿದ್ದಾರೆ. ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ದತ್ತಣ್ಣ, ಪ್ರಶಾಂತ್ ನಾರಾಯಣನ್, ಅಭಿಜಿತ್, ಘೋಸ್ಟ್ ತಾರಾಬಳಗದಲ್ಲಿದ್ದಾರೆ.
Advertisement
Advertisement
ಕಳೆದ ಮೂವತ್ತೇಳು ವರ್ಷಗಳಿಂದ ರಜತಪರದೆಯನ್ನು ಬೆಳಗುತ್ತಿರುವ ದೊಡ್ಮನೆ ದೊರೆ, ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಮೆರವಣಿಗೆ ಹೊರಡ್ತಿದ್ದಾರೆ. ಇನ್ನೂ ಇಲ್ಲಿತನಕ ಸ್ಯಾಂಡಲ್‌ವುಡ್‌ಗಷ್ಟೇ ಸೀಮಿತವಾಗಿದ್ದ ಸಂದೇಶ್ ನಾಗರಾಜ್ ಮಾಲೀಕತ್ವದ `ಸಂದೇಶ್ ಪ್ರೊಡಕ್ಷನ್ಸ್’ `ಘೋಸ್ಟ್’ ಮೂಲಕ ಪ್ಯಾನ್ ಇಂಡಿಯಾದಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದೆ. ಸರಿಸುಮಾರು ಮೂರುವರೆ ದಶಕಗಳಿಂದ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಕನ್ನಡ ಚಿತ್ರರಂಗಕ್ಕೆ ಭಿನ್ನ-ವಿಭಿನ್ನ ಸಿನಿಮಾಗಳನ್ನು ಕಾಣಿಕೆಯಾಗಿ ನೀಡುತ್ತಾ ಬಂದಿದ್ದಾರೆ. ಮಣ್ಣಿನ ದೋಣಿ, ಮೌನರಾಗಂ, ಹಠವಾದಿ, ಐರಾವತ, ಪ್ರಿನ್ಸ್, ಒಡೆಯ, ಅಮರ್, ಹರಿಕಥೆ ಅಲ್ಲ ಗಿರಿಕಥೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದು, ಈಗ `ಘೋಸ್ಟ್’ ಮೂಲಕ ಪ್ಯಾನ್ ಇಂಡಿಯಾ ತಲುಪುವತ್ತ ದಾಪುಗಾವಲಿಟ್ಟಿದ್ದಾರೆ. `ಅಸುರ’, `ಚಂದ್ರೋದಯ’ ಚಿತ್ರದ ನಂತರ ಸೆಂಚುರಿಸ್ಟಾರ್ ಜೊತೆಗೆ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸ್ತಿರುವ ಮೂರನೇ ಚಿತ್ರ ಇದಾಗಿದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.
Advertisement
`ಸಂದೇಶ್ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ `ಘೋಸ್ಟ್’ಗೆ ಬೇಡಿಕೆ ಹೆಚ್ಚಿದೆ. ಆರ್ ಆರ್ ಆರ್, ಪೊನ್ನಿಯನ್ ಸೆಲ್ವನ್, ವಿಕ್ರಮ್, ಜವಾನ್ ಸೇರಿದಂತೆ ಬಿಗ್ ಬಜೆಟ್ ಸಿನಿಮಾಗಳನ್ನು ವಿತರಣೆ ಮಾಡಿರುವ ಬಾಲಿವುಡ್ ಪ್ರಖ್ಯಾತ ಪೆನ್ ಸ್ಟುಡಿಯೋಸ್ ಸಂಸ್ಥೆ, `ಘೋಸ್ಟ್’ ರೈಟ್ಸ್ ನ ತನ್ನದಾಗಿಸಿಕೊಂಡಿದೆ. ಹಿಂದಿ ಬೆಲ್ಟ್ ನಲ್ಲಿ ಹ್ಯಾಟ್ರಿಕ್ ಹೀರೋ ಸಿನಿಮಾನ ಗ್ರ್ಯಾಂಡ್ ಆಗಿ ರಿಲೀಸ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದೆ. ತಮಿಳಿನಲ್ಲಿ ಡ್ರೀಮ್ ವಾರಿಯರ್ ಸಂಸ್ಥೆ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿದ್ದು, ಸಂದೇಶ್ ಪ್ರೊಡಕ್ಷನ್ ಹೌಸ್ ಕರ್ನಾಟಕದಲ್ಲಿ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ `ಘೋಸ್ಟ್’ ಬಿಡುಗಡೆ ಮಾಡ್ತಿದೆ.
ಇಂಟ್ರೆಸ್ಟಿಂಗ್ ಅಂದರೆ ಅಕ್ಟೋಬರ್ 18ರ ಮಧ್ಯರಾತ್ರಿಯಿಂದಲೇ ಕೆಂಪೇಗೌಡ್ರ ಅಖಾಡದಲ್ಲಿ ಫ್ಯಾನ್ಸ್ ಶೋ ಶುರುವಾಗಲಿದೆ. ಈಗಾಗಲೇ ಮೆಜೆಸ್ಟಿಕ್ ನ ಸಂತೋಷ್ ಥಿಯೇಟರ್ ಮುಂಭಾಗದಲ್ಲಿ ಮಾಸ್ ಲೀಡರ್ ಕಟೌಟ್ ತಲೆಎತ್ತಿದೆ. ಇಂದಿನಿಂದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಹೊಸಕೋಟೆ ಬಿರಿಯಾನಿ ರೇಂಜ್ ಗೆ ಟಿಕೆಟ್ ಗಳು ಸೇಲ್ ಆಗ್ತಿವೆ. ಸದ್ಯ ಘೋಸ್ಟ್ ಫೀವರ್ ನೋಡ್ತಿದ್ದರೆ ಸಿನಿದುನಿಯಾದಲ್ಲಿ ಸುಂಟರಗಾಳಿ ಅಲ್ಲ ಸುನಾಮಿ ಏಳೋದು ಫಿಕ್ಸು ಎನಿಸ್ತಿದೆ. ಎನಿವೇ, ಕೆಜಿಎಫ್, ಕಾಂತಾರ ನಂತರ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿರುವ `ಘೋಸ್ಟ್’ ಪ್ಯಾನ್ ಇಂಡಿಯಾ ತುಂಬೆಲ್ಲಾ ಧಗಧಗಿಸಲಿ. `ಸಂದೇಶ್ ಪ್ರೊಡಕ್ಷನ್ಸ್’ ಹೌಸ್ಗೆ ಬೇಡಿಕೆ ಹೆಚ್ಚಲಿ. ಹೋಟೆಲ್ ಬ್ಯುಸಿನೆಸ್, ಟ್ರಾನ್ಸ್ ಪೋರ್ಟಿಂಗ್ ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ರಾಜಕಾರಣಿ ಕಮ್ ಪ್ರೊಡ್ಯೂಸರ್ ಸಂದೇಶ್ ನಾಗರಾಜ್ ಹಾಗೂ ಅವರ ಪುತ್ರ ಸಂದೇಶ್ ಎನ್ ಗೆ `ಘೋಸ್ಟ್’ ಸಿನಿಮಾದಿಂದ ಬಿಗ್ ಸಕ್ಸಸ್ ಸಿಗಲಿ.
Web Stories