ಚಂಡೀಗಢ: ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಲಂಧರ್ ಜಿಲ್ಲೆಯ ಮಾಲಿಯನ್ ಗ್ರಾಮದಲ್ಲಿ ನಡೆದಿದೆ.
ಮಾಲಿಯನ್ ಗ್ರಾಮದಲ್ಲಿ ಕಬಡ್ಡಿ ಕಪ್ ಪಂದ್ಯ ಏರ್ಪಡಿಸಲಾಗಿತ್ತು. ಪಂದ್ಯದ ವೇಳೆಯೇ ಅಪರಿಚಿತ ದಾಳಿಕೋರರು ಸಂದೀಪ್ ನಂಗಲ್ ತಲೆ ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ
ಜಲಂಧರ್ ಡಿಎಸ್‌ಪಿ ಲಖ್ವಿಂದರ್ ಸಿಂಗ್ ಅವರು ಹತ್ಯೆ ವಿಚಾರವನ್ನು ದೃಢಪಡಿಸಿದ್ದಾರೆ. ಕಬಡ್ಡಿ ಆಟಗಾರನ ಮೇಲೆ ಸುಮಾರು 8ರಿಂದ 10 ಗುಂಡುಗಳನ್ನು ಹಾರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೂರದಿಂದ ಸರಣಿ ಬುಲೆಟ್‌ಗಳು ಹಾರುತ್ತಿರುವ ಆತಂಕಕಾರಿ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪಂದ್ಯಾವಳಿಯಲ್ಲಿದ್ದ ಪ್ರೇಕ್ಷಕರು ಸ್ಥಳದಿಂದ ಓಡಿಹೋಗುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಣಜಿ ಟ್ರೋಫಿ- ನೂತನ ದಾಖಲೆ ಸೃಷ್ಟಿಸಿದ ಜಾರ್ಖಂಡ್
ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ. ಕೆನಡಾ, ಯುಎಸ್ಎ, ಯುಕೆಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಸಂದೀಪ್ ಕಬಡ್ಡಿ ಫೆಡರೇಶನ್ ಅನ್ನು ನಿರ್ವಹಿಸುತ್ತಿದ್ದರು.