ಬೆಂಗಳೂರು: ನಗರದಲ್ಲಿ ಸಚಿವರ ಮನೆಗಳಿಗೂ ಸುರಕ್ಷತೆ ಇಲ್ಲದಂತಾಗಿದೆ. ಯಾಕಂದರೆ 7 ಮಿನಿಸ್ಟರ್ ಕ್ವಾಟ್ರಸ್‍ನಲ್ಲಿ ಕಳ್ಳತನ ನಡೆದಿದೆ.
ಬೆಂಗಳೂರಿನ ಗಾಲ್ಫ್ ಕ್ಲಬ್ ಬಳಿಯ 7 ಮಿನಿಸ್ಟರ್ ಕ್ವಾಟ್ರಸ್‍ನಲ್ಲಿ ಈ ಕಳ್ಳತನ ನಡೆದಿದೆ. ರಾತ್ರೋರಾತ್ರಿ 2 ಗಂಧದ ಮರಗಳನ್ನು ಕತ್ತರಿಸಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಖಾಲಿ ಇದ್ದ 6ನೇ ಖಾಲಿ ಕ್ವಾರ್ಟರ್ಸ್ ನ ಆವರಣದಲ್ಲಿ ಈ ಕಳ್ಳತನ ನಡೆದಿದೆ. ಈ ಹಿಂದೆ ಕಾನೂನು ಸಚಿವರಾಗಿದ್ದ ಟಿ.ಬಿ ಜಯಚಂದ್ರಗೆ ಈ ಕ್ವಾಟ್ರಸ್ ನೀಡಲಾಗಿತ್ತು.
Advertisement
Advertisement
ಈಗ ಸಮ್ಮಿಶ್ರ ಸರ್ಕಾರದಲ್ಲಿ ಈ ಕ್ವಾರ್ಟರ್ಸ್ ನ್ನು ಯಾವ ಸಚಿವರಿಗೂ ನಿಯೋಜನೆ ಮಾಡಿಲ್ಲ. ಆದರು ಈ ಕ್ವಾಟ್ರಸ್ ಗೆ ಪೊಲೀಸ್ ಕಣ್ಗಾವಲಿತ್ತು. ಪೊಲೀಸರ ಕಾವಲಿದ್ದರೂ 2 ಗಂಧದ ಮರಗಳು ಬುಡಸಮೇತ ಮಾಯವಾಗಿವೆ. ಈ ಗಂಧದ ಮರ 30 ವರ್ಷ ಹಳೆಯದಾಗಿದ್ದು, ಭಾರೀ ಗಾತ್ರದಾಗಿದ್ದವು.
Advertisement
ಸಚಿವರ ಕ್ವಾಟ್ರಸ್‍ನಲ್ಲಿ ಗಂಧದ ಮರ ಕಳ್ಳತನ ನಡೆದಿರೋದು ಹಲವು ಅನುಮಾನ ಹುಟ್ಟು ಹಾಕಿದೆ. ಈ ಮರಗಳ್ಳತನದ ಹಿಂದೆ ಅಧಿಕಾರಿಗಳು ಶಾಮೀಲಾಗಿದ್ದಾರಾ ಅನ್ನೋ ಗುಮಾನಿ ವ್ಯಕ್ತವಾಗಿದೆ. ಯಾಕಂದ್ರೆ ಗಂಧದ ಮರ ಕಳವಾದರು ಕೂಡ ಯಾವ ಸಿಬ್ಬಂದಿ ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. ಸದ್ಯ ಪೊಲೀಸರು ಈ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.
Advertisement
ಈ ಕ್ವಾಟ್ರಸ್‍ನ ಮುಂಭಾಗದಲ್ಲಿಯೇ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರ ಕ್ವಾಟ್ರಸ್ ಕೂಡ ಇದೆ. ಪಕ್ಕದಲ್ಲಿಯೇ ಹೈಕೋರ್ಟ್ ನ್ಯಾಯಾಧೀಶರಾದ ಎಸ್.ಎನ್ ಸತ್ಯನಾರಾಯಣ್ ಅವರ ನಿವಾಸ ಕೂಡ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv