CrimeDistrictsLatestMain PostRaichur

ರಾತ್ರೋರಾತ್ರಿ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧ ಮರ ಕಳ್ಳತನ

ರಾಯಚೂರು: ತಾಲೂಕಿನ ಕುಕನೂರು ಗ್ರಾಮದಲ್ಲಿ ತಡರಾತ್ರಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಶ್ರೀಗಂಧ ಮರ ಕಳ್ಳತನವಾಗಿದೆ.

ಡಿಸೆಂಬರ್ 16ರಂದು ರಾತ್ರಿ ಶ್ರೀಗಂಧದ ಮರಗಳನ್ನು ಖದೀಮರು ಕತ್ತರಿಸಿಕೊಂಡು ಕದ್ದೊಯ್ದಿದ್ದಾರೆ. ಗ್ರಾಮದ ಸರ್ಕಾರಿ ಶಾಲೆ ಹಿಂಭಾಗದಲ್ಲಿ ಬೆಳೆಯಲಾಗಿದ್ದ ಮರಗಳನ್ನ ಕದಿಯಲಾಗಿದೆ. ಇಲ್ಲಿನ ರಾಮಕ್ಕವ್ವ ದೇವಾಲಯ ಬಳಿ ಇದ್ದ ಐದಾರು ವರ್ಷದ ಎರಡು ಮರಗಳನ್ನ ಬೇರು ಸಹಿತ ಕತ್ತರಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಒಂಟಿಯಾಗಿದ್ದ ಅಮ್ಮನಿಗೆ ಮದುವೆ ಮಾಡಿಸಿದ ಮಗಳು

ರಾತ್ರಿ ವೇಳೆ ಯಾರೂ ಇಲ್ಲದ ಸಮಯ ನೋಡಿ ಮರಗಳ ಕಳ್ಳತನ ಮಾಡಲಾಗಿದೆ. ಅರಣ್ಯ ಇಲಾಖೆ ಬೆಳೆದಿದ್ದ ಶ್ರೀಗಂಧದ ಮರಗಳಿಗೆ ಕನ್ನ ಹಾಕಲಾಗಿದೆ. ಪದೇ ಪದೇ ಈ ಭಾಗದಲ್ಲಿ ಶ್ರೀಗಂಧ ಮರಗಳ ಕಳ್ಳತನ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಗಂಭೀರ ಕ್ರಮಗಳನ್ನ ಕೈಗೊಂಡಿಲ್ಲ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್‌ ಮುಂದೂಡಿಕೆ

Leave a Reply

Your email address will not be published.

Back to top button