ಕಾರವಾರ: ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirsi) ಶಿಂಗನಳ್ಳಿ ಗ್ರಾಮದಲ್ಲಿನ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧ ಮರವನ್ನು ಕಡಿದು ಕಳ್ಳತನ ಮಾಡುತ್ತಿದ್ದ ಮೂವರು ಮರಗಳ್ಳರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.
ಶಿಂಗನಳ್ಳಿಯ ಸುಬ್ರಾಯ ನಾರಾಯಣ ನಾಯ್ಕ(66), ರಾಮ ಅಣ್ಣಪ್ಪ ನಾಯ್ಕ(60), ಬಿಗಿರಿಕೊಪ್ಪದ ಅಬ್ದುಲ್ ರಹೀಮ್ ಅಬ್ದುಲ್ ಗಫರ್ ಸಾಬ್(63) ಬಂಧಿತ ಆರೋಪಿಗಳು. ಇದನ್ನೂ ಓದಿ: ಬೆಂಗಳೂರಿನಲ್ಲೇ ಪ್ರಭಾವಿ ಸಚಿವರ ಹನಿ ಟ್ರ್ಯಾಪ್‌ಗೆ ಮತ್ತೊಬ್ಬ ನಾಯಕನಿಂದ ಯತ್ನ!
ಬಂಧಿತರಿAದ ಒಟ್ಟು 41.890ಕೆ.ಜಿಯ 11 ಶ್ರೀಗಂಧದ ಹಸಿತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ ಕತ್ತಿ, ಕೈಗರಗಸ, ನೀರಿನ ಬಾಟಲಿ, ಮೊಬೈಲ್ ಫೋನ್‌ಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಗುತ್ತಿಗೆದಾರರಿಗೆ ಶೇ.4 ಮೀಸಲಾತಿಗೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಯತ್ನಾಳ್ ಪತ್ರ
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ.ಜಿ.ಆರ್.ಜಾನ್ಮನೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್.ಸಿ.ಎನ್. ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಜೂಜಾಟ ಪ್ರಕರಣ – ಐವರು ಪೊಲೀಸರು ಅಮಾನತು
ಕರ್ನಾಟಕ ಅರಣ್ಯ ಕಾಯ್ದೆ 1963ರ 00 24(3), 84, 85, 87 ಆರ್/ಡಬ್ಲ್ಯೂ 86 ಮತ್ತು 1969 ಡಿ ನಿಯಮ 144, 145ರಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.