ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್ (Karnataka Bandh) ಗೆ ಸ್ಯಾಂಡಲ್ ವುಡ್ ಬೆಂಬಲ ವ್ಯಕ್ತ ಪಡಿಸಿದೆ. ಅಂದು ಚಿತ್ರೋದ್ಯಮ ಬಂದ್ ಮಾಡಿ ಹೋರಾಟದಲ್ಲಿ ನಟ ನಟಿಯರು ಹಾಗೂ ತಂತ್ರಜ್ಞರು ಭಾಗಿಯಾಗಲಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಅಧ್ಯಕ್ಷ ಎನ್.ಎಮ್. ಸುರೇಶ್ (NM Suresh) ತಿಳಿಸಿದ್ದಾರೆ. ಕರ್ನಾಟಕ ಬಂದ್ ಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಾ.ರಾ ಗೋವಿಂದ್ ಹೇಳಿದ್ದೇನೆ
ಕರ್ನಾಟಕದಲ್ಲಿ ಕಾವೇರಿದ ಕಾವೇರಿ ಹೋರಾಟ (Cauvery Protest) ಈ ಬೆನ್ನಲ್ಲೇ ಸೆ.29ರ ಬಂದ್ ಚರ್ಚಿಸಲು ಫಿಲ್ಮ್ ಚೇಂಬರ್‌ಗೆ ಕನ್ನಡ ಪರ ಹೋರಾಟಗಾರ ಸಾ ರಾ ಗೋವಿಂದು (Sa Ra Govindu) ಆಗಮಿಸಿ, ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಯೋಜನೆಗಾಗಿ ಹಿಂದಿನಿಂದಲೂ ದೊಡ್ಡ ಹೋರಾಟ ಮಾಡಿದ್ದೇವೆ. ಅಕ್ಟೋಬರ್, ನವೆಂಬರ್ ಬಂದರೆ ಸಾಕು ಬರೀ ಹೋರಾಟದ ಕೆಲಸ ಆಗಿದೆ. ಈ ವರ್ಷ ಮಳೆಗಾಲ ಇಲ್ಲ ಅಂತ ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು ಎಂದು ಸಾ ರಾ ಗೋವಿಂದು ಮಾತನಾಡಿದರು. ನಮ್ಮ ಸರ್ಕಾರ ಕೂಡ ತಮಿಳುನಾಡಿಗೆ ನೀರು ಬಿಟ್ಟು ರೈತರಿಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಗೋವಿಂದು ಖಡಕ್ ಆಗಿ ಮಾತನಾಡಿದರು. ಇದು ನಮ್ಮ ನಾಡಿನ ಪ್ರಶ್ನೆ ಮತ್ತು ರೈತರ ಪ್ರಶ್ನೆಯಾಗಿದೆ. ಕರ್ನಾಟಕದವರು ಸತ್ತಿಲ್ಲ ಇನ್ನೂ ಬದುಕಿದ್ದೇವೆ.
ಮೋದಿಯವರು ಕಾವೇರಿ ವಿಚಾರದಲ್ಲಿ ಸೇರಿಕೊಂಡಿದ್ದಾರೆ. ಕಾವೇರಿ ಪ್ರಾಧಿಕಾರಕ್ಕೆ ನೀರು ಬಿಡಿ ಅಂತ ಹೇಳಿದ್ದಾರೆ ಎಂದು ನೇರವಾಗಿ ಕುಟುಕಿದ್ದಾರೆ. ಹಾಗಾಗಿಯೇ ಈ ರಾಜ್ಯದ ಜನ ಈ ಬಾರಿ ಬಿಜೆಪಿ ಕೈ ಹಿಡಿದಿಲ್ಲ ಅನ್ಮೋದು. ಈಗ ಕಾವೇರಿ ಪ್ರಾಧಿಕಾರವನ್ನ ಕರ್ನಾಟಕದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಈ ವಿಚಾರದಲ್ಲಿ ಮೋದಿ, ಅಮಿತ್ ಶಾ ಎಲ್ಲರೂ ಇದ್ದಾರೆ ಎಂದು ಗೋವಿಂದು ವಿರೋಧಿಸಿದ್ದಾರೆ.
ರಾಜಕೀಯ ಅಧಿಕಾರಕ್ಕಾಗಿ ಇಂತಹ ಕೆಲಸ ಮಾಡಬೇಡಿ. ಮೋದಿಯವರೇ ನೀವು ಇದೇ ತರ ಆಟ ಆಡಿದರೆ, ನಿಮ್ಮ ಪಕ್ಷ ನಾಶ ಆಗುತ್ತೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ರೈತರ ಕನ್ನಡಿಗರ ಶಾಪ ನೆನಪಿಟ್ಟುಕೊಳ್ಳಿ ಎಂದು ಮಾತನಾಡಿದ್ದಾರೆ.
Web Stories