ಮಕರ ಸಂಕ್ರಾಂತಿ ಹಬ್ಬಕ್ಕೆ ತಮ್ಮದೇ ಸ್ಟೈಲ್‍ನಲ್ಲಿ ಶುಭಾಶಯ ತಿಳಿಸಿದ ಸ್ಯಾಂಡಲ್‍ವುಡ್ ಸ್ಟಾರ್ಸ್

Public TV
2 Min Read
sankranti a

ಬೆಂಗಳೂರು: ಇಂದು ರಾಜ್ಯದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸ್ಯಾಂಡಲ್‍ವುಡ್ ಸ್ಟಾರ್ ನಟರು ಕೂಡ ಮಕರ ಸಂಕ್ರಾಂತಿ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ತಮ್ಮದೇ ಸ್ಟೈಲ್‍ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯಜಮಾನ ಚಿತ್ರದ ಪೋಸ್ಟರ್ ಹಾಕಿ ಅದಕ್ಕೆ, “ಎಳ್ಳು ಬೆಲ್ಲ ಸವಿಯುತ್ತಾ ಒಳ್ಳೆ ಮಾತನಾಡಿ. ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಶುಭಾಶಯ ತಿಳಿಸಿ ನನ್ನ `ಯಜಮಾನ’ ಚಿತ್ರದ ಮೊದಲನೆಯ ಹಾಡು – `ಶಿವನಂದಿ’ ನಿಮ್ಮ ಮುಂದೆ. ಕೇಳಿ ಆನಂದಿಸಿ ಎಂದು ತಮ್ಮ ಚಿತ್ರದ ಹಾಡಿನ ಲಿಂಕ್ ಹಾಕಿ ಟ್ವೀಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ನಾಡಿನೆಲ್ಲಾ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ಈ ನಿಮ್ಮ ಪ್ರೀತಿಯ ಕಿಚ್ಚನಿಂದ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ” ಎಂದು ಶುಭಾಶಯ ತಿಳಿಸಿದ್ದಾರೆ.

ನವರಸ ನಾಯಕ ಜಗ್ಗೇಶ್ ಮಕರ ಸಂಕ್ರಾಂತಿಯ ಫೋಟೋ ಹಾಕಿ, “ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಶುಭಮಸ್ತು” ಎಂದು ಟ್ವೀಟ್ ಮಾಡಿದರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ‘ನಟಸಾರ್ವಭೌಮ’ ಚಿತ್ರದ ಪೋಸ್ಟರ್ ಹಾಕಿ “ಸಂಕ್ರಾಂತಿ ಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

ನಟ ರಮೇಶ್ ಅರವಿಂದ್ ಅವರು ಗಂಗಾ ತೀರದಲ್ಲಿ ಸ್ನಾನ ಮಾಡುತ್ತಿರುವ ಫೋಟೋ ಹಾಕಿ ಅದಕ್ಕೆ, “ಹಾಲಿನಂತೆ ಆನಂದವು ಉಕ್ಕಿ ಚೆಲ್ಲಲಿ. ಮಕರ ಸಂಕ್ರಾಂತಿಯ ಶುಭಾಶಯಗಳು. ಗಂಗಾತೀರದ ಈ ದೃಶ್ಯ ನೆನಪಾಯಿತು” ಎಂದು ಬರೆದು ತಮ್ಮ ಹಳೆಯ ನೆನಪನ್ನು ಮೆಲಕು ಹಾಕಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ‘ಗಿಮಿಕ್’ ಚಿತ್ರದ ಪೋಸ್ಟರ್ ಹಾಕಿ “ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರು, “ಸೂರ್ಯನೇ ಪಥ ಬದಲಿಸುತ್ತಾನೆ, ಇನ್ನು ನಾವೇನು ಮಹಾ? ಬನ್ನಿ.. ಕಡೇಪಕ್ಷ ಪಕ್ಷ ಬದಲಿಸೋಣ, ಪ್ರಜಾಕೀಯದ ಪಥದಿ ಸಾಗೋಣ, ಇದುವೇ ಉತ್ತರಾಯಣ, ಉತ್ತಮ ಪ್ರಜಾಕೀಯ ಪಕ್ಷಾಯಣ ಪ್ರಜಾಕಾರಣವೇ ಪ್ರಖರ ಸಂಕ್ರಮಣ” ಎಂದು ಬರೆದಿರುವ ಫೋಟೋ ಹಾಕಿ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *