ಬೆಂಗಳೂರು: ಬಿಗ್ ಪರದೆ ಮೇಲೆ ಮಿಂಚ್ತಿದ್ದ ಸ್ಟಾರ್‍ಗಳಿಂದ ಇನ್ಮುಂದೆ ಬೀದಿ ನಾಟಕ ನಡೆಯಲಿದೆ.
Advertisement
ಸ್ಟಾರ್‍ಗಿರಿ ಬಿಟ್ಟು ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಬೀದಿಗಿಳಿಯಲಿದ್ದಾರೆ. ಸುಪ್ರೀಂ ಹೀರೋ ಶಶಿಕುಮಾರ್, ಸಚಿವೆ ಉಮಾಶ್ರೀ, ಹಿರಿಯ ನಟಿ ಜಯಮಾಲ, ಮಾಲಾಶ್ರೀ, ಭಾವನ, ಅಭಿನಯ ಸಾಧುಕೋಕಿಲ ಸೇರಿದಂತೆ ಹಲವಾರು ನಟ ನಟಿಯರು ರಾಜ್ಯದ ನಾನಾ ಭಾಗಗಳಲ್ಲಿ ಬೀದಿ ನಾಟಕ ಮಾಡಲಿದ್ದಾರೆ.
Advertisement
Advertisement
ಇವರೆಲ್ಲಾ ಸ್ಯಾಂಡಲ್‍ವುಡ್ ಬಿಟ್ಟು ಬೀದಿಗಿಳಿಯಲು ಕಾರಣ ಕಾಂಗ್ರೆಸ್. ಜನಮತಕ್ಕಾಗಿ ಸ್ಯಾಂಡಲ್‍ವುಡ್ ಸ್ಟಾರ್‍ಗಳಿಂದಲೇ ಬೀದಿ ನಾಟಕವಾಡಿಸಲು ಕೆಪಿಸಿಸಿ ಮುಂದಾಗಿದೆ. ಸ್ಟಾರ್ ಪ್ರಚಾರಕರು ಕೇವಲ ರೋಡ್ ಶೋಗಷ್ಟೇ ಸೀಮಿತವಲ್ಲ. ಬೀದಿ ಬೀದಿಯಲ್ಲಿ ಸರ್ಕಾರದ ಸಾಧನೆಯನ್ನ ತಮ್ಮ ಆ್ಯಕ್ಟಿಂಗ್ ಮೂಲಕ ತೋರಿಸಬೇಕಿದೆ. ಕೋಟಿಕೋಟಿ ಸಂಭಾವನೆ, ಮೇಕಪ್, ಕಾಸ್ಟ್ಯೂಮ್ ಎಲ್ಲಾ ಬಿಟ್ಟು ರಸ್ತೆಯಲ್ಲಿ ಬೆವರಿಳಿಸಬೇಕಿದೆ.
Advertisement
ಚುನಾವಣೆಗಾಗಿ ಸ್ಟಾರ್‍ಗಳಿಂದ ಬೀದಿ ನಾಟಕ ಮಾಡಿಸಲು ಕೆಪಿಸಿಸಿ ಮುಂದಾಗಿದ್ದು, ಈ ಸ್ಟಾರ್ಸ್ ಬಿಗ್ ಸ್ಕ್ರೀನ್ ಬಿಟ್ಟು ಬೀದಿಯಲ್ಲಿ ನಿಂತು ಜನರ ಮನ ಗೆಲ್ತಾರಾ ಕಾದುನೋಡಬೇಕಿದೆ.