ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಮಗನ ನಾಮಕರಣ ಏ.20ರಂದು ಅದ್ಧೂರಿಯಾಗಿ ಜರುಗಿದೆ. ಈ ಸಮಾರಂಭಕ್ಕೆ ಮೋಹಕತಾರೆ ರಮ್ಯಾ (Ramya) ಸೇರಿದಂತೆ ಅನೇಕ ಕನ್ನಡದ ನಟ-ನಟಿಯರು ಭಾಗಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ನಟಿಯ ಮಗನ ನಾಮಕರಣ (Naming Ceremony) ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ರಮ್ಯಾ ಕೂಡ ನಾಮಕರಣ ಫಂಕ್ಷನ್‌ಗೆ ಆಗಮಿಸಿ ಪ್ರಣಿತಾ ಮಗನಿಗೆ ಶುಭಕೋರಿದರು. ಈ ಸಮಾರಂಭದಲ್ಲಿ ರಮ್ಯಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರು ನಟಿಯ ಮಗನ ನಾಮಕರಣಕ್ಕೆ ಆಗಮಿಸಿದ್ದರು. ಇದನ್ನೂ ಓದಿ:ಚಂದನ್ ಶೆಟ್ಟಿ, ಸುಪ್ರೀತಾ ಸತ್ಯನಾರಾಯಣ್ ಎಂಗೇಜ್‌ಮೆಂಟ್ ಫೋಟೋಸ್
ಡಾಲಿ ಧನಂಜಯ, ಯೋಗರಾಜ್ ಭಟ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಣಿತಾ ಪುತ್ರನಿಗೆ ಶುಭಹಾರೈಸಿದರು. ಇದನ್ನೂ ಓದಿ:ನಾನು ಚಿಕ್ಕಂದಿನಿಂದ ಶಿವನ ಭಕ್ತ: ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಯಶ್
‘ಮಾಕ್ಸ್’ ಚಿತ್ರದ ನಟಿ ಸಂಯುಕ್ತಾ ಹೊರನಾಡ್, ಮಾಳವಿಕಾ ಅವಿನಾಶ್, ಹಿರಿಯ ನಟಿ ಶ್ರುತಿ ಕೃಷ್ಣ, ಕೆ. ಸುಧಾಕರ್, ನಟಿ ಅಮೂಲ್ಯ, ಧನ್ಯ ರಾಮ್‌ಕುಮಾರ್ ಅನೇಕರು ಭಾಗಿಯಾಗಿದ್ದರು.
ಈ ಸಂದರ್ಭ ಲೈಟ್ ಪಿಂಕ್ ಬಣ್ಣದ ಸೀರೆಯಲ್ಲಿ ಪತಿಯೊಂದಿಗೆ ನಿಂತು ಪ್ರಣಿತಾ ಪೋಸ್ ನೀಡಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ.
ಅಂದಹಾಗೆ, ಎರಡನೇ ಮಗು ಇಂದು (ಏ.20) ಜಯ್ ಕೃಷ್ಣ ನಿತಿನ್ ರಾಜ್ ಅನ್ನೋ ಹೆಸರಿಟ್ಟಿದ್ದಾರೆ ಪ್ರಣಿತಾ ದಂಪತಿ.
View this post on Instagram
2021ರಲ್ಲಿ ನಿತಿನ್ ರಾಜ್ ಜೊತೆ ಪ್ರಣಿತಾ ಸುಭಾಷ್ ಮದುವೆಯಾದರು. ಈ ಜೋಡಿಗೆ ಇಬ್ಬರೂ ಮುದ್ದಾದ ಮಕ್ಕಳಿದ್ದಾರೆ. 2 ವರ್ಷದ ಮುದ್ದು ಮಗಳಿಗೆ ಆರ್ನಾ ಎಂದು ಹೆಸರಿಟ್ಟಿದ್ದಾರೆ.