ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಈಗ ಎಐಸಿಸಿಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ನೇಮಕವಾಗಿರುವ ರಮ್ಯಾ ಅವರು ತಮ್ಮ ವೃತ್ತಿ ತೆರಿಗೆಯನ್ನೇ ಪಾವತಿಸಿಲ್ಲ. ಅಷ್ಟೇ ಯಾಕೆ ಇನ್ನೂ ಹಲವು ನಟಿ ಮತ್ತು ನಟರು ವೃತ್ತಿ ತೆರಿಗೆ ಪಾವತಿಸಿಲ್ಲ. ಮೂರು ಬಾರಿ ನೋಟಿಸ್ ನೀಡಿರುವ ತೆರಿಗೆ ಅಧಿಕಾರಿಗಳು ಈಗ ನ್ಯಾಯಾಲಯದಲ್ಲಿ ಕೇಸ್ ಹಾಕಲು ಮುಂದಾಗಿದ್ದಾರೆ.
ಕನ್ನಡದ ಸಿನಿಮಾ ತಾರೆಯರು ವರ್ಷಕ್ಕೆ ಲಕ್ಷ ಲಕ್ಷ ಸಂಪಾದಿಸುತ್ತಾರೆ. ಇಷ್ಟೆಲ್ಲ ಸಂಪಾದಿಸಿದರೂ ವಾರ್ಷಿಕ 2500 ರೂಪಾಯಿ ವೃತ್ತಿ ತೆರಿಗೆ ಮಾತ್ರ ಪಾವತಿಸಿಲ್ಲ. ಈ ಹಿಂದೆ ಪಬ್ಲಿಕ್ ಟಿವಿ ತೆರಿಗೆ ಕಟ್ಟದೇ ಇರುವ ಸ್ಯಾಂಡಲ್‍ವುಡ್ ತಾರೆಯರ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾದ ಬಳಿಕ ಎಚ್ಚೆತ್ತ ಕೆಲವರು ವೃತ್ತಿ ತೆರಿಗೆ ಪಾವತಿ ಮಾಡಿದ್ದರು.
Advertisement
ನಟ ಜಗ್ಗೇಶ್ ವೃತ್ತಿ ತೆರಿಗೆಯನ್ನ ದಂಡದ ಸಮೇತ ಪಾವತಿಸಿ ಬಾಕಿ ಉಳಿಸಿಕೊಂಡಿರುವವರು ತೆರಿಗೆ ಕಟ್ಟಿ ಅಂತ ಟ್ವಿಟರ್‍ನಲ್ಲಿ ಜಾಗೃತಿ ಮೂಡಿಸಿದ್ದರು. ಪಬ್ಲಿಕ್ ಟಿವಿ ವರದಿ ಬಳಿಕ ಸುಮಾರು 10 ಲಕ್ಷ ರೂ. ತೆರಿಗೆ ಸಂಗ್ರಹವಾಗಿದೆ ಎಂದು ವೃತ್ತಿ ತೆರಿಗೆಯ ಜಂಟಿ ಆಯುಕ್ತರಾದ ರಾಮನ್ ಕೆ ತಿಳಿಸಿದ್ದಾರೆ.
Advertisement
ನಟಿಯರ ಪಟ್ಟಿ:
ರಮ್ಯಾ, ರಾಧಿಕಾ ಪಂಡಿತ್, ಪ್ರಿಯಾಂಕ ಉಪೇಂದ್ರ, ರಕ್ಷಿತಾ ಪ್ರೇಮ್, ರಚಿತಾ ರಾಮ್, ರಾಗಿಣಿ ದ್ವಿವೇದಿ, ಅಮೂಲ್ಯ, ಮಾಲಾಶ್ರೀ, ಭಾವನಾ, ಪೂಜಾ ಗಾಂಧಿ, ಅನು ಪ್ರಭಾಕರ್.
Advertisement
ನಟರ ಪಟ್ಟಿ:
ಉಪೇಂದ್ರ, ಗಣೇಶ್, ಯಶ್, ದುನಿಯಾ ವಿಜಿ, ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ದೇವರಾಜ್, ಪ್ರಜ್ವಲ್ ದೇವರಾಜ್, ದಿಗಂತ್, ಪ್ರೇಮ್, ವಿನೋದ್ ಪ್ರಭಾಕರ್, ಚಿರು ಸರ್ಜಾ
Advertisement
ನಟಿ, ನಟರ ಜೊತೆ ಕಾಮಿಡಿ ಸ್ಟಾರ್‍ಗಳಾದ ಚಿಕ್ಕಣ್ಣ, ಸಾಧು ಕೋಕಿಲಾ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಇವರೂ ವೃತ್ತಿ ತೆರಿಗೆ ಕಟ್ಟಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಕೇಸ್ ಹಾಕುವ ಮುನ್ನ ಸ್ಯಾಂಡಲ್‍ವುಡ್ ತಾರೆಗಳು ಎಚ್ಚೆತ್ತುಕೊಂಡು ತೆರಿಗೆ ಪಾವತಿಸಿದರೆ ಒಳ್ಳೆಯದು. ಇಲ್ಲದಿದ್ದರೆ, 2500 ರೂಪಾಯಿಗಾಗಿ ಮುಜುಗರ ಅನುಭವಿಸಬೇಕಾದಿತು.
ಬೆಂಗಳೂರು ಮಹಾನಗರ ಪಾಲಿಕೆ ಒಂದ್ರಲ್ಲಿಯೇ ತಿಂಗಳಿಗೆ 50 ರಿಂದ 55 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತೆ. ಅದ್ರೇ ಚಿತ್ರರಂಗದ ಅನೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ಅವ್ರಿಗೆಲ್ಲಾ ಇ-ಮೇಲ್‍ನಲ್ಲೂ ನೋಟಿಸ್ ನೀಡಿದ್ದಾರೆ. ಈ ವಿಚಾರದಲ್ಲಿ ಟೈಗರ್ ಪ್ರಭಾಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ತಾವು ಬದುಕಿರುವವರೆಗೂ ವೃತ್ತಿ ತೆರಿಗೆಯನ್ನು ಪ್ರತ ವರ್ಷ ತಪ್ಪದೇ ಪಾವತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 2500 ರೂ. ಕಟ್ಟದೆ ನೋಟಿಸ್ ಪಡೆದ ಸ್ಯಾಂಡಲ್‍ವುಡ್ ನಟ-ನಟಿಯರು