ಚಂದ್ರಯಾನ-3 ಲ್ಯಾಂಡಿಂಗ್‌ಗೆ ಶುಭಕೋರಿದ ಸ್ಯಾಂಡಲ್‌ವುಡ್ ಸ್ಟಾರ್ಸ್

Public TV
2 Min Read
sandalwood 1

ಚಂದ್ರಯಾನ-3 (Chandrayana 3) ಯಶಸ್ಸಿನ ಹೊಸ್ತಿಲಲ್ಲಿದೆ. ಇಂದು ಚಂದ್ರನ ಮೇಲೆ ಇಸ್ರೋದ ವಿಕ್ರಮ್ ಇಳಿಯಲಿದೆ. ಹೀಗಿರುವಾಗ ಇಸ್ರೋದ ಸಾಧನೆಯನ್ನು ಸ್ಯಾಂಡಲ್‌ವುಡ್ ಕಲಾವಿದರು ಕೊಂಡಾಡಿದ್ದಾರೆ. ಯಾರೆಲ್ಲಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಇಲ್ಲಿದೆ ಮಾಹಿತಿ.

shivarajkumar 1 4ಎಲ್ಲಾ ಭಾರತೀಯರಿಗೂ ಇದು ಹೆಮ್ಮೆಯ ಕ್ಷಣವಿದು. ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗುತ್ತಿದೆ. ನಾವೆಲ್ಲರೂ ಇದಕ್ಕೆ ಹೆಮ್ಮೆ ಪಡಬೇಕು. ಇಸ್ರೋ ಆಲ್ ದಿ ಬೆಸ್ಟ್ ಎಂದು ಶಿವಣ್ಣ (Shivarajkumar) ಶುಭಕೋರಿದ್ದಾರೆ.

ಚಂದ್ರಯಾನ -3 ಬಗ್ಗೆ ಡಾಲಿ (Daali) ರಿಯಾಕ್ಟ್ ಮಾಡಿದ್ದಾರೆ. ನಮ್ಮ ವಿಜ್ಞಾನಿಗಳ ಎಲ್ಲ ಪರಿಶ್ರಮ ಸಾರ್ಥಕವಾಗುವ ಗಳಿಗೆ ಅದು. ನಮ್ಮ ಇಸ್ರೋ ವಿಜ್ಞಾನಿಗಳು ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಅವರಿಗೆ ಧನ್ಯವಾದ ಇನ್ನೂ ಇಂತಹ ಅನೇಕ ಕೆಲಸಗಳು ಅವರಿಂದ ಆಗಲಿ. ಜಗತ್ತಿನಲ್ಲಿ ಎಲ್ಲವೂ ಒಂದೇ ಬಾರಿಗೆ ಸಕ್ಸಸ್ ಆಗಲ್ಲ. ಕೆಲವೊಮ್ಮೆ ವಿಫಲವಾಗುತ್ತೆ. ಹಾಗೆಯೇ ನಮ್ಮ ಇಸ್ರೋ ಚಂದ್ರಯಾನ 3 ಸಕ್ಸಸ್ ಆಗುತ್ತೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ:ನಾನು ಮದುವೆಗೂ ಮುನ್ನ ಗರ್ಭಿಣಿ ಆಗಿದ್ದೆ, ಆದಿಲ್ ಮೋಸ ಮಾಡಿದ: ನಟಿ ರಾಖಿ

ಇಡೀ ಜಗತ್ತು ಕ್ರಿಯೆಟ್ ಆಗಿರೋದು ವಿಜ್ಞಾನದ ಮುಖಾಂತರ. ನಾನು ಸೈನ್ಸ್ ತುಂಬಾ ನಂಬುವವನು. ಇವತ್ತು ನಮ್ಮ ವಿಜ್ಞಾನಿಗಳು ತಯಾರಿಸುವಂತಹ ಉಪಗ್ರಹ ಉಡಾವಣೆ ಆಗೋದ್ರಲ್ಲಿದೆ. ನಾವೆಲ್ಲರೂ ಭಾರತೀಯರು ಹೆಮ್ಮೆ ಪಡುವಂತಹ ವಿಷಯವಿದು ಎಂದು ನೀನಾಸಂ ಸತೀಶ್ (Ninasum Satish) ಶುಭಹಾರೈಸಿದ್ದಾರೆ. ಇದನ್ನೂ ಓದಿ:Yash 19 ಸಿನಿಮಾ KVN ನಿರ್ಮಾಣ ಮಾಡ್ತಿದ್ಯಾ? ಇಲ್ಲಿದೆ ಸೀಕ್ರೆಟ್

ನಟಿ, ರಾಜಕಾರಣಿ ಸುಮಲತಾ ಕೂಡ ಚಂದ್ರಯಾನ 3 ಬಗ್ಗೆ ಮಾತನಾಡಿದ್ದಾರೆ. ಚಂದ್ರನ ಮೇಲೆ ಚಂದ್ರಯಾನ 3 ಲ್ಯಾಂಡ್ ಆಗುತ್ತಿದೆ. ಶುಭ ಘಳಿಗೆ ನೋಡಲು 140 ಕೋಟಿ ಜನರು ಕಾಯ್ತಿದ್ದಾರೆ. ಚಂದ್ರಯಾನ 3 ಯಶಸ್ಸಾಗಲಿ ಭಾರತೀಯರಿಗೆ ಇಂದು ಹೆಮ್ಮೆಯ ಕ್ಷಣ. ತಂಡಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.

ಇಂದು ಸಂಜೆ ಚಂದ್ರಯಾನ 3 ಚಂದ್ರ ಮಂಡಲದ ಮೇಲೆ ಲ್ಯಾಂಡ್ ಆಗುತ್ತೆ. ಆ ಲ್ಯಾಂಡಿಂಗ್ ಯಶಸ್ವಿಯಾಗಲಿ. ಆಲ್ ದಿ ಬೆಸ್ಟ್ ಇಸ್ರೋ ಎಂದು ರಮೇಶ್ ಅರವಿಂದ್ (Ramesh Aravind) ವಿಶ್ ಮಾಡಿದ್ದಾರೆ.

ಇವತ್ತು ತುಂಬಾನೇ ವಿಶೇಷವಾಗಿರುವ ದಿನ, ನನ್ನ ಸಿನಿಮಾ ಲಾಂಚ್ ಆಗುತ್ತಿದೆ. ಜೊತೆಗೆ ಇವತ್ತು ಇಡೀ ದೇಶ ಹೆಮ್ಮೆ ಪಡುವಂತಹ ದಿನ ಅಂತಾ ಹೇಳಬಹುದು. ಚಂದ್ರಯಾನ 3 ಸಕ್ಸಸ್‌ಫುಲ್ ಆಗುವಂತಹ ದಿನ. ನನ್ನ ಕಡೆಯಿಂದ ಆಲ್ ದಿ ಬೆಸ್ಟ್ ಹೇಳ್ತೀನಿ ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ(Roopesh Shetty) ಹೇಳಿದ್ದಾರೆ.

ಭಾರತ ದೇಶದಲ್ಲಿ ಇವತ್ತು ಖುಷಿ ಪಡುವಂತಹ, ಜಗತ್ತೇ ನಮ್ಮನ್ನ ಮೆಚ್ಚಿಕೊಳ್ಳುವಂತಹ ಚಂದ್ರಯಾನ 3 ಯಶಸ್ವಿಯಾಗಿ ಪೂರೈಸುತ್ತಾರೆ ಎಂಬ ನಂಬಿಕೆಯಿದೆ. ನಾವು ಚಿಕ್ಕವರು ಇರುವಾಗ ಚಂದಮಾಮನನ್ನ ತೋರಿಸಿ ಊಟ ಮಾಡಿಸುತ್ತಾ ಇದ್ದರು. ಈಗ ಚಂದ್ರನಲ್ಲಿ ಏನೇನಿದೆ ಎಂಬ ಕುತೂಹಲವನ್ನ ತೋರಿಸುತ್ತಾ ಹೋದರು. ಭಾರತ 4ನೇ ರಾಷ್ಟ್ರವಾಗಿದ್ರು. ಚಂದ್ರನ ದಕ್ಷಿಣ ಭಾಗಕ್ಕೆ ಹೋಗುತ್ತಿರುವ ಮೊದಲ ರಾಷ್ಟ್ರವಾಗಿದೆ. ಇಸ್ರೋಗೆ ಶುಭವಾಗಲಿ ಎಂದು ನಟಿ ತಾರಾ ಹಾರೈಸಿದ್ದಾರೆ.

Share This Article