ಮಾನ್ವಿತಾ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

Public TV
1 Min Read
manvita kamath 7

ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಮೇ 1ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ.

manvita 1

ಮೈಸೂರಿನ ವರ ಅರುಣ್ ಕುಮಾರ್ (Arun Kumar) ಜೊತೆ ಮಾನ್ವಿತಾ ಮದುವೆಯಾಗುತ್ತಿದ್ದು, ಚಿಕ್ಕಮಗಳೂರಿನ ಕಳಸದಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿವೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನವಜೋಡಿ ನೇರಳೆ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ.

manvita kamath 1 2

ಮಾನ್ವಿತಾ ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ(Nidhi Subbaiah), ಶ್ರುತಿ ಹರಿಹರನ್ (Shruti Hariharan), ರಿಲಾಕ್ಸ್ ಸತ್ಯ ನಟ ಪ್ರಭು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಾಳೆ ನಡೆಯಲಿರುವ ಮದುವೆಯಲ್ಲಿ ಸ್ಟಾರ್‌ ನಟ-ನಟಿಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಅವಕಾಶವಿಲ್ಲದ ದಿನಗಳನ್ನು ಸ್ಮರಿಸಿದ ಸನ್ನಿ- ಕಣ್ಣೀರಿಟ್ಟ ಬಾಬಿ ಡಿಯೋಲ್

manvita kamath 2 1

ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

manvita kamath 3 1

ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕರೆ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳಿದ್ದರು ಮಾನ್ವಿತಾ. ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ. ಇಲ್ಲಿಂದ ಪಾಸಿಟಿವ್ ಸೂಚನೆ ಸಿಕ್ಕಿದೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರು.

Share This Article