ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

Public TV
2 Min Read
SHIVANNA

– ವೇದಿಕೆಯಲ್ಲೇ ಕಣ್ಣೀರಿಟ್ಟ ದುನಿಯಾ ವಿಜಿ

ಬೆಂಗಳೂರು: ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ. ಹೀಗಾಗಿ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

SALAGA 1

ಇಂದು ಖಾಸಗಿ ಹೊಟೇಲ್ ನಲ್ಲಿ ನಡೆದ ‘ಸಲಗ’ ಚಿತ್ರದ ಸಕ್ಸಸ್ ಮೀಟ್‍ನಲ್ಲಿ ಮಾತನಾಡಿದ ಅವರು, ನಾವು ಒಟ್ಟಿಗೆ ಇದ್ದಾಗೆಲ್ಲಾ ನಮಗೆ ವಯಸ್ಸಾಗಿದೆ ಅನ್ಕೋಳ್ಳೋದಿಲ್ಲ. ನಾವು ಪಾಸಿಟಿವ್ ಥಿಂಕ್ ಮಾಡಬೇಕು, ಅದೇ ಒಳ್ಳೆಯದು. ವಿಜಿ ಮೊದಲ ಸಿನಿಮಾ ದುನಿಯಾ ಮುಹೂರ್ತಕ್ಕೂ ಬಂದಿದ್ದೆ, ಈಗಲೂ ಜೊತೆ ಇರ್ತೀನಿ. ಕನ್ನಡದ ನಟಿ ಸಂಜನಾ ಅವರು ಚಿತ್ರದಲ್ಲಿ ಒಳ್ಳೆಯ ರೀತಿ ನಟಿಸಿದ್ದಾರೆ. ನಮ್ಮಲ್ಲೇ ಒಳ್ಳೊಳ್ಳೆ ನಟಿಯರಿದ್ದಾರೆ. ಎಲ್ಲರಿಗೂ ಹೇಳೋದೇನು ಅಂದ್ರೆ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

SALAGA

ಇದೇ ವೇಳೆ ವೇದಿಕೆಯಲ್ಲಿ ಅಪ್ಪು ನೆನೆದು ಶಿವಣ್ಣ ಭಾವುಕರಾದರು. ‘ಸಲಗ’ ಪ್ರೀ-ರಿಲೀಸ್ ಇವೆಂಟ್ ಯಾವಾಗ್ಲೂ ನೆನಪಿರುತ್ತೆ. ಅಪ್ಪು ನಾನು ಇದ್ವಿ. ಹಲವು ನೆನಪುಗಳಿವೆ. ಈಗಿಲ್ಲ ಅಂತ ಅನ್ಕೊಂಡ್ರೆ ತುಂಬಾ ಕಷ್ಟ ಆಗುತ್ತೆ. ಆದರೆ ಅವರು ಇಲ್ಲೇ ಇದ್ದಾರೆ, ಅವರ ಬೆಸ್ಲಿಂಗ್ಸ್ ಇರುತ್ತೆ ಎಂದರು. ನೀವು ಬಂದಿದ್ದೀರಿ, ನಿಮ್ಮ ಮೂಲಕ ಅಪ್ಪು ಬ್ಲೆಸ್ಲಿಂಗ್ಸ್ ನೋಡಬಹುದಾ ಎಂಬ ಪ್ರಶ್ನೆಗೆ ಇಲ್ಲ ಖಂಡಿತಾ ಇಲ್ಲ. ಅವರು ಇಲ್ಲ ಅಂತ ಅನ್ಕೊಳ್ಳೋ ಹಾಗಿಲ್ಲ. ಇಲ್ಲೇ ಇದ್ದಾರೆ ಎಂದು ಶಿವಣ್ಣ ಗದ್ಗದಿತರಾದರು.

ನಟ ದುನಿಯಾ ವಿಜಯ್ ಮಾತನಾಡಿ, ಸಲಗ ಚಿತ್ರ ಸಕ್ಸಸ್ ತಂದುಕೊಟ್ಟಿದೆ ಎಂದು ಹೇಳಿ ಕಣ್ಣೀರು ಹಾಕಿದರು. ಕೆಲ ಕ್ಷಣ ಮೌನ ತಾಳಿದ ಬಳಿಕ ದುನಿಯಾ ವಿಜಯ್ ದುಃಖದ ಕೋಡಿ ಒಡೆಯಿತು. ಈ ನಡುವೆ ತಾಯಿ – ತಂದೆ ಕಳೆದುಕೊಂಡರು. ಈ ಸಕ್ಸಸ್ ಅನ್ನು ಅಪ್ಪು, ಅಮ್ಮ-ಅಪ್ಪ ಅಭಿಮಾನಿಗಳಿಗೆ ಸಲ್ಲಿಸ್ತೀನಿ. ಶಿವಣ್ಣ ಯಾವಾಗಲೂ ಜೊತೆಯಲ್ಲಿದ್ದಾರೆ, ಖುಷಿಯಾಗುತ್ತೆ. ಸಿನಿಮಾ ಪ್ರೊಡ್ಯೂಸ್ ಮಾಡೋವಾಗ ಮುಂಚೆ 40 ರೂ. ನನ್ನ ಜೇಬಲ್ಲಿತ್ತು. ಈಗ 40 ಲಕ್ಷ ಆಗಿದೆ ಎಂದು ಭಾವುಕರಾದರು.

ಸಲಗ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ, ಗಣೇಶ್, ಡಾಲಿ ಧನಂಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಲ್ಲದೆ ನಟ ಡಾಲಿ ಧನಂಜಯ್, ಸಂಜನಾ ಆನಂದ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಸಲಗ ಚಿತ್ರಕ್ಕೆ ಅಪ್ಪು ಚಾಲನೆ ಕೊಟ್ಟಿದ್ರು. ಚಿತ್ರ ಬಿಡುಗಡೆಗೂ ಮುಂಚೆ ಪ್ರಿ-ರಿಲೀಸ್ ಇವೆಂಟ್ ನಲ್ಲೂ ಅಪ್ಪು ಇದ್ದರು. ಇದೀಗ ಸಲಗ ಸಕ್ಸಸ್ ನಲ್ಲಿ ಅಪ್ಪು ಇಲ್ಲ ಅನ್ನೋದು ಕೊರಗು ಚಿತ್ರತಂಡಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *