Public TV - Latest Kannada News, Public TV Kannada Live, Public TV News
Visit Public TV English
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
  • Stories
Facebook Twitter Youtube
Aa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Food
  • Videos
  • Stories
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
  • Stories
Follow US
Latest

ಕೊಟ್ಟವ ಕೋಡಂಗಿ ಇಸ್ಕೊಂಡವ ವೀರಭದ್ರ- ದ್ವಾರಕೀಶ್-ನಿರ್ಮಾಪಕರ ಜಗಳಕ್ಕೆ ಜಗ್ಗೇಶ್ ಎಂಟ್ರಿ

Public TV
Last updated: 2020/02/02 at 8:35 PM
Public TV
Share
3 Min Read
SHARE

ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ದ್ವಾರಕೀಶ್ ಹಾಗೂ ನಿರ್ಮಾಪಕ, ಫೈನಾನ್ಶಿಯರ್ ರಮೇಶ್ ಜಗಳಕ್ಕೆ ನವರಸ ನಾಯಕ ಜಗ್ಗೇಶ್ ಎಂಟ್ರಿ ಕೊಟ್ಟಿದ್ದು, ಸರಣಿ ಟ್ವೀಟ್ ಮೂಲಕ ಪರೋಕ್ಷವಾಗಿ  ಅಸಮಾಧಾನ ಹೊರ ಹಾಕಿದ್ದಾರೆ.

ಪಬ್ಲಿಕ್ ಟಿವಿ ಸುದ್ದಿಯನ್ನು ರಿಟ್ವೀಟ್ ಮಾಡಿದ  ನಟ ಜಗ್ಗೇಶ್, ಪರೋಕ್ಷವಾಗಿ ನಟ, ನಿರ್ಮಾಪಕ ದ್ವಾರಕೀಶ್ ವಿರುದ್ಧ ಹರಿಹಾಯ್ದಿದ್ದಾರೆ. ‘ನನ್ನ 1 ಕೋಟಿ ರೂ. ಕೇಳಿದರೂ ಹೀಗೆ ಆಗಬಹುದು. ಕೊಟ್ಟವ ಸ್ನೇಹಿತ, ಬಳಸಿಕೊಂಡವರು ಸ್ನೇಹಿತರು, ಇದು ಹಣದ ವಿಷಯ ಮಾತನಾಡುವುದು ಕಷ್ಟ. ನನಗೆ ಬರಬೇಕಾದ 1 ಕೋಟಿ ರೂ. ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು. ಹಣ ಬೇಕಾದಾಗ ಪ್ರಾಮಾಣಿಕ ವ್ಯವಹಾರಸ್ಥರು. ವಾಪಸ್ ಕೊಡುವಾಗ ಮಾಧ್ಯಮ, ಪೊಲೀಸ್, ಮಾನಹಾನಿ ಎಂಥ ದೌರ್ಭಾಗ್ಯ ವ್ಯವಹಾರ. ಬರುವ ಹಣಕ್ಕಾಗಿ ನಾನು ತಾಳ್ಮೆಯಿಂದ ಕಾಯುತ್ತಿರುವ ಮೂರ್ಖ ಎಂದು ಜಗ್ಗೇಶ್ ಮೊದಲ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ, ಸಿನಿಮಾ, ಸಿನಿಮಾದಲ್ಲೇ ಸತ್ತಿದ್ದೇನೆ ನಾನು: ದ್ವಾರಕೀಶ್ ಕಣ್ಣೀರು

ಕೊಟ್ಟವ ಸ್ನೇಹಿತ!ಬಳಸಿಕೊಂಡವರು ಸ್ನೇಹಿತರು!
ಇದು ಹಣದ ವಿಷಯ ಮಾತಾಡುವುದು ಕಷ್ಟ!
ನನಗೆ ಬರಬೇಕಾದ್ದ 1ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನವಿಷಯವು ಹೀಗೆ ಬರುವುದು!
ಹಣ ಬೇಕಾದಾಗ ಪ್ರಾಮಾಣಿಕ ವ್ಯೆವಹಾರಸ್ಥರು!
ವಾಪಸ್ ಕೊಡುವಾಗ ಮಾಧ್ಯಮ ಪೋಲಿಸ್ ಮಾನಹಾನಿ ಎಂಥದೌರ್ಭಾಗ್ಯ
ವ್ಯೆವಹಾರ!
ಬರುವ ಹಣಕ್ಕಾಗಿ ನಾನು ತಾಲ್ಮೆಯಿಂದ
ಕಾಯುತ್ತಿರುವ ಮೂರ್ಕ! https://t.co/KhY1de2th2

— ನವರಸನಾಯಕ ಜಗ್ಗೇಶ್ (@Jaggesh2) February 2, 2020

ಜಗ್ಗೇಶ್ ಎರಡನೇ ಟ್ವೀಟ್‍ನಲ್ಲಿ ಸಹ ದ್ವಾರಕೀಶ್ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಕಿಡಿಕಾರಿದ್ದಾರೆ. ರಮೇಶ್ ಹಾಗೂ ಜಯಣ್ಣ ಗೌರವಸ್ಥ ವ್ಯವಹಾರಿಗಳು. ಕೊಟ್ಟವ ಕೋಡಂಗಿ, ಇಸ್ಕೊಂಡವ ವೀರಭದ್ರ, ಇದು ಗಾಂಧಿನಗರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾನೂ ಗಾಂಧಿನಗರದ ವ್ಯವಹಾರದಲ್ಲಿ ಭಾಗಿಯಾಗಿದ್ದೇನೆ. ಗಾಂಧಿನಗರದ ಬಿಲ್ಡಪ್ ರಾತ್ರಿ ನೆನೆದರೂ ನಿದ್ದೆ ಬರುವುದಿಲ್ಲ. ಮಾಧ್ಯಮದಲ್ಲಿ ಎಲ್ಲರೂ ಸ್ಟಾರ್‍ಗಳು, ನಿರ್ಮಾಪಕರು ಮಾತ್ರ ಫುಟ್‍ಪಾತ್. ಇದು ನಿಜ ಗಾಂಧಿನಗರ ದುನಿಯಾ, ನೇರನುಡಿ ನಿಷ್ಟೂರವಾದಿ ವ್ಯಾಖ್ಯಾನ ಎಂದು ಟೀಕಿಸಿದ್ದಾರೆ.

ಕೆಲ ಅಮಾಯಕರಿಗೆ ಸಮುದ್ರದ ಅಲೆ ಗೊತ್ತು. ನನಗೆ ಸಿನಿಮಾ ರಂಗದ ಅಲೆಗಳ ಆಳದಲ್ಲಿರುವ ಅಗೋಚರ ಕ್ರಿಮಿ ಕೀಟಗಳ ಬಗ್ಗೆ ಗೊತ್ತು. ಕಾರಣ ಆ ಮಾಯಾವಿ ಸಮುದ್ರದಲ್ಲಿ 38 ವರ್ಷಗಳ ವಾಸ ಎಂದು ತಮ್ಮ ಮೂರನೇ ಟ್ವೀಟ್‍ನಲ್ಲಿ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

ರಮೇಶ್ ಹಾಗು ಜಯಣ್ಣ ಗೌರವಸ್ತ ವ್ಯವಹಾರಿಗಳು!
ಕೊಟ್ಟವ ಕೋಡಂಗಿ!ಇಸ್ಕೊಂಡವ ಇರ್ಭಧ್ರ!
ಇದು ಗಾಂಧಿನಗರ!
Even I am fedup with gandhinagar business!
ಗಾಂಧಿನಗರ buildup ರಾತ್ರಿ ನೆನೆದರು ನಿದ್ರೆಬಾರದು ನನಗೆ!
ಎಲ್ಲರು stars In media!producersಮಾತ್ರ footpath!ನಿಜ ಗಾಂಧಿನಗರ ದುನಿಯ!
ನೇರನುಡಿ ನಿಷ್ಟೂರವಾಧಿ ವ್ಯಾಖ್ಯಾನ! https://t.co/fJ6LhGf9fk

— ನವರಸನಾಯಕ ಜಗ್ಗೇಶ್ (@Jaggesh2) February 2, 2020

ಹೀಗೆ ಸಾಲು ಟ್ವೀಟ್‍ಗಳ ಮೂಲಕ ಜಗ್ಗೇಶ್ ಅವರು ಪರೋಕ್ಷವಾಗಿ ದ್ವಾರಕೀಶ್ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ತಮಗೂ ಒಂದು ಕೋಟಿ ರೂ. ಬರಬೇಕು. ನಾಜೂಕಾಗಿ ಮಾತನಾಡಿ ಇನ್ನೂ ಹಣ ನೀಡಿಲ್ಲ ಎಂಬರ್ಥದಲ್ಲಿ ಹರಿಹಾಯ್ದಿದ್ದಾರೆ. ಈ ಮೂಲಕ ನಿರ್ಮಾಪಕರ ಹಣಕಾಸು ವ್ಯವಹಾರದ ಕುರಿತು ಗಾಂಧಿನಗರದಲ್ಲಿ ವಾದ ವಿವಾದ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.

ಏನಿದು ಪ್ರಕರಣ?:
ದ್ವಾರಕೀಶ್ ಅವರ ಮನೆಗೆ ಫೈನಾನ್ಶಿಯರ್, ನಿರ್ಮಾಪಕ ರಮೇಶ್ ಅವರು ಫೆಬ್ರವರಿ 2ರಂದು ನುಗ್ಗಿ ದಾಂಧಲೆ ಮಾಡಿದ್ದಾರೆ. ದ್ವಾರಕೀಶ್ ಆಯುಷ್ಮಾನ್ ಭವ ಚಿತ್ರದ ನಿರ್ಮಾಪಕರಾಗಿದ್ದರು. ಈ ವೇಳೆ ಫೈನಾನ್ಶಿಯರ್ ರಮೇಶ್ ಅವರಿಂದ ಹಣ ಪಡೆದಿದ್ದರು. ಆದರೆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸುವಲ್ಲಿ ವಿಫಲ ಆಗಿತ್ತು. ಹೀಗಾಗಿ ಹಣ ವಾಪಸ್ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಕೆಲ ಅಮಾಯಕರಿಗೆ ಸಮುದ್ರದ ಅಲೆ ಗೊತ್ತು!ನನಗೆ ಸಿನಿಮಾರಂಗದ ಅಲೆಗಳ ಆಳದಲ್ಲಿ ಇರುವ ಅಗೋಚರ ಕ್ರಿಮಿ ಕೀಟಗಳ ಬಗ್ಗೆ ಗೊತ್ತು!ಕಾರಣ ನನ್ನ ವಾಸ ಆ ಮಾಯಾವಿ ಸಮುದ್ರದಲ್ಲಿ 38ವರ್ಷದ ವಾಸ! https://t.co/gEOLuUQI7p

— ನವರಸನಾಯಕ ಜಗ್ಗೇಶ್ (@Jaggesh2) February 2, 2020

ನಂತರ ಫೈನಾನ್ಸ್ ಮಾಡಿದ್ದ ರಮೇಶ್ ಹಣವನ್ನು ವಾಪಸ್ ಕೊಡುವಂತೆ ಪದೇ ಪದೇ ಕೇಳಿದ್ದಾರೆ. ದ್ವಾರಕೀಶ್ ನೀಡಿಲ್ಲ, ನಂತರ ಶುಕ್ರವಾರ ರಮೇಶ್ ಹಾಗೂ ನಿರ್ಮಾಪಕ ಜಯಣ್ಣ ಅವರು ದ್ವಾರಕೀಶ್ ಮನೆಗೆ ಹೋಗಿ ಹಣ ಕೇಳಿದ್ದರು. ಆಗ ದ್ವಾರಕೀಶ್ ಅವರು, ಕಷ್ಟದಲ್ಲಿದ್ದೇನೆ, ಸ್ವಲ್ಪ ಕಾಲಾವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಹಣವನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ನೀವು ಹೇಳಿದ ಗಡುವು ಮುಗಿಯಿತು. ಗಡುವು ಮುಗಿದ ಬಳಿಕವೂ ಹಣವನ್ನು ಬಿಡುವುದಕ್ಕೆ ಆಗುವುದಿಲ್ಲ ಎಂದು ರಮೇಶ್ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು, ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ದ್ವಾರಕೀಶ್, ಒಂದೂವರೆ ವರ್ಷ ಆದರೂ ನಿನಗೆ ನಾನು ಹಣ ಕೊಡೋದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ ಎಂದು ತಿಳಿದು ಬಂದಿದೆ.

- Advertisement -
TAGGED: Dwarakish, Financier, jaggesh, producer, Public TV, sandalwood, ಜಗ್ಗೇಶ್, ಟ್ವೀಟ್, ದ್ವಾರಕೀಶ್, ನಿರ್ಮಾಪಕ, ಪಬ್ಲಿಕ್ ಟಿವಿ, ಪೈನಾನ್ಶಿಯರ್, ಸ್ಯಾಂಡಲ್‍ವುಡ್
Share This Article
Facebook Twitter Whatsapp Whatsapp Telegram
ಬಡಮಕ್ಕಳಿಗಾಗಿ ‘ಆದಿಪುರುಷ್’ ಸಿನಿಮಾದ 10 ಸಾವಿರ ಟಿಕೆಟ್ ಖರೀದಿಸಿದ ರಣ್‌ಬೀರ್ ಕಪೂರ್
By Public TV
27 ವರ್ಷಗಳ ನಂತರ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ: ಮೊದಲಾಗಿದ್ದು ಬೆಂಗಳೂರಿನಲ್ಲಿ
By Public TV
ಅಸ್ಸಾಂ, ಲಡಾಖ್‍ನಲ್ಲಿ ಕಂಪಿಸಿದ ಭೂಮಿ – ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲು
By Public TV
ಆಸ್ಟ್ರೇಲಿಯಾ ಪೌರತ್ವ ಪಡೆದ ಕನ್ನಡ ನಟಿ ದೀಪಿಕಾ
By Public TV
ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಎಇಇ
By Public TV
ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ: ಐಎಎಸ್ ಅಧಿಕಾರಿ ನಿಯಾಜ್ ಖಾನ್
By Public TV
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ‘ಸಿಟಾಡೆಲ್’ ಜೋಡಿ
By Public TV

You Might Also Like

Uncategorized

ಬಡಮಕ್ಕಳಿಗಾಗಿ ‘ಆದಿಪುರುಷ್’ ಸಿನಿಮಾದ 10 ಸಾವಿರ ಟಿಕೆಟ್ ಖರೀದಿಸಿದ ರಣ್‌ಬೀರ್ ಕಪೂರ್

Public TV By Public TV 12 mins ago
Bollywood

27 ವರ್ಷಗಳ ನಂತರ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ: ಮೊದಲಾಗಿದ್ದು ಬೆಂಗಳೂರಿನಲ್ಲಿ

Public TV By Public TV 16 mins ago
Latest

ಅಸ್ಸಾಂ, ಲಡಾಖ್‍ನಲ್ಲಿ ಕಂಪಿಸಿದ ಭೂಮಿ – ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲು

Public TV By Public TV 38 mins ago
Cinema

ಆಸ್ಟ್ರೇಲಿಯಾ ಪೌರತ್ವ ಪಡೆದ ಕನ್ನಡ ನಟಿ ದೀಪಿಕಾ

Public TV By Public TV 14 mins ago
Kodagu

ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಎಇಇ

Public TV By Public TV 41 mins ago
Latest

ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ: ಐಎಎಸ್ ಅಧಿಕಾರಿ ನಿಯಾಜ್ ಖಾನ್

Public TV By Public TV 1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
Welcome Back!

Sign in to your account

Lost your password?