Connect with us

Bengaluru City

ಆ ‘ವ್ಯಕ್ತಿ’ಯಿಂದಾಗಿ ಕನ್ನಡ ಚಿತ್ರರಂಗ ಹಾಳಾಗಿದೆ: ಬುಧವಾರ ಸಿಡಿಯಲಿದೆ ಬುಲೆಟ್ ಬಾಂಬ್

Published

on

ಬೆಂಗಳೂರು:ಕನ್ನಡ ಚಿತ್ರರಂಗದ ಮನಸ್ತಾಪ, ಗುಂಪುಗಾರಿಕೆ, ಭಿನ್ನಾಭಿಪ್ರಾಯಕ್ಕೆ ಯಾರು ಕಾರಣ ಎನ್ನುವುದನ್ನು ನಾನು ಬುಧವಾರ ತಿಳಿಸುತ್ತೇನೆ ಎಂದು ನಟ ಬುಲೆಟ್ ಪ್ರಕಾಶ್ ಹೇಳಿದ್ದಾರೆ.

ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಡಾ ರಾಜ್ ಕಟ್ಟಿದ್ದ ಕನ್ನಡ ಚಿತ್ರರಂಗ ಚೆನ್ನಾಗಿತ್ತು. ಆದರೆ ಆ ವ್ಯಕ್ತಿಯ ಸ್ವಾರ್ಥದಿಂದಾಗಿ ಕನ್ನಡ ಚಿತ್ರರಂಗ ಈಗ ಹಾಳಾಗಿದೆ. ಹೀಗಾಗಿ ಆ ವ್ಯಕ್ತಿಯ ವಿರುದ್ಧ ನಾನು ಬೆಳಗ್ಗೆ ಸಂಪೂರ್ಣವಾಗಿ ತಿಳಿಸುತ್ತೇನೆ ಎಂದರು.

ಆ ವ್ಯಕ್ತಿ ಯಾರು, ತಿಳಿಸಿ ಎಂದು ಕೇಳಿದ್ದಕ್ಕೆ, ನಾನು ಸತ್ಯವನ್ನೇ ಹೇಳುತ್ತೇನೆ. ಎಲ್ಲರೂ ಮೆಚ್ಚಿಕೊಳ್ಳುವಂತಹ ನಟನ ಬಗ್ಗೆ ನಾನು ನಾಳೆ ಹೇಳುತ್ತೇನೆ. ಆ ವ್ಯಕ್ತಿ ದರ್ಶನ್ ಅವರನ್ನು ಹಾಳು ಮಾಡಿದ್ದಾನೆ. ಚೆನ್ನಾಗಿ ಇದ್ದ ಚಿತ್ರರಂಗದಲ್ಲಿ ಸುಂಟರಗಾಳಿ ಏಳಲು ಆ ವ್ಯಕ್ತಿಯೇ ಕಾರಣವಾಗಿದ್ದು, ಆ ವ್ಯಕ್ತಿಯಿಂದಲೇ ಗುಂಪುಗಾರಿಕೆ ಆರಂಭವಾಗಿದೆ ಎಂದು ಅವರು ತಿಳಿಸಿದರು.

ಈ ಸಂಬಂಧ ಟ್ವಿಟ್ಟರ್‍ನಲ್ಲಿ ದೊಡ್ಡ ನಟನ ಸಣ್ಣತನ ನಿಮಗೆ ಪರಿಚಯ ಮಾಡಿಸುತ್ತೇನೆ. ದೀಪ ಇರುವ ಮೊದಲು ಜೋರಾಗಿ ಉರಿಯುತ್ತದೆ ಎಂದು ಬುಲೆಟ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.

https://www.youtube.com/watch?v=7KGL-ocj9Lk

Click to comment

Leave a Reply

Your email address will not be published. Required fields are marked *