ಮಾಜಿ ಸಂಸದೆ, ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾಗೆ ಇಂದು 35ನೇ ಹುಟ್ಟುಹಬ್ಬ

Public TV
1 Min Read
RAMYA 2

ಮಂಡ್ಯ: ಮಾಜಿ ಸಂಸದೆ ಹಾಗೂ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಇಂದು 35ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ರಾಜಕೀಯದಲ್ಲಿ ಸಾಕಷ್ಟು ಆಸಕ್ತಿ ಇಟ್ಟುಕೊಂಡಿರುವ ರಮ್ಯಾ ಮೇಡಂಗೆ ಈ ವರ್ಷವಾದರೂ ಮತದಾರ ಕೈ ಹಿಡಿಯುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಎಲ್ಲೆಲ್ಲೂ ಪೋಸ್ಟ್ ಹಾಕಿ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ರಾಜಕೀಯ ಮುಖಂಡರು ಸಹ ಶುಭಾಶವನ್ನು ಕೋರಿದ್ದಾರೆ.

ramya 3

ಕಳೆದ ವರ್ಷ ಸಕ್ಕರೆ ನಾಡಲ್ಲಿ ಜನ್ಮದಿನ ಆಚರಿಸಿಕೊಂಡ ಹಿನ್ನೆಲೆಯಲ್ಲಿ ಈ ಬಾರಿಯೂ ಬರ್ತಾರೆ ಅನ್ನೋ ಕುತೂಹಲ ಅಭಿಮಾನಿಗಳದ್ದು. ರಮ್ಯಾರನ್ನು ಸ್ವಾಗತಿಸಲು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಬ್ಯಾನರ್, ಬಟ್ಟಿಂಗ್ಸ್‍ಗಳನ್ನು ಹಾಕಿ ಬರುವಿಕೆಗಾಗಿ ಕಾತರದಿಂದ ಕಾಯ್ತಿದ್ದಾರೆ. ರಮ್ಯಾ ಆಗಮನದ ಬಳಿಕ ಗಣಪತಿ ದೇವಸ್ಥಾನದಲ್ಲಿ ಪೂಜೆ, ಬೂದನೂರು ಕೆರೆಗೆ ಬಾಗೀನ ಅರ್ಪಣೆ, ಸಸಿ ಮತ್ತು ಸಿಹಿ ವಿತರಿಸಲಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಮ್ಯಾ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಸಂಸದೆಯಾಗಿದ್ದ ಅಲ್ಪಾವಧಿಯಲ್ಲೇ ಮಂಡ್ಯ ಜಿಲ್ಲೆಯಲ್ಲಿ ಹಲವು ಯೋಜನೆಗಳನ್ನು ತಂದು ಅಭಿವೃದ್ಧಿ ಕೆಲಸ ಮಾಡಿದ್ದೀರಿ. ಆದುದರಿಂದ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮತ್ತೆ ನೀವು ರಾಜ್ಯ ರಾಜಕಾರಣಕ್ಕೆ ಬರಬೇಕು. ಮಂಡ್ಯ ಜಿಲ್ಲೆಯ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಅಂತಾ ರಮ್ಯಾ ಅಭಿಮಾನಿಗಳು ಮನವಿ ಮಾಡಿದ್ದಾರೆ.

ರಮ್ಯಾ ರಾಜ್ಯ ರಾಜಕಾರಣಕ್ಕೆ ಬರುವಿಕೆಯ ಬಗ್ಗೆ ನಟ, ಸಚಿವ ಅಂಬರೀಶ್ ಮಾತನಾಡಿದ್ದು, ರಮ್ಯಾ ಮರಳಿ ಬರಬೇಕೆಂದ್ರೆ ಹೈಕಮಾಂಡ್ ನಿಂದ ಅನುಮತಿ ಪಡೆಯಬೇಕು. ಒಂದು ವೇಳೆ ರಮ್ಯಾ ಮಂಡ್ಯಕ್ಕೆ ಬಂದರೆ ಸ್ವಾಗತ. ಪಕ್ಷ ಬಿಡುವ ಯಾವುದೇ ಉದ್ದೇಶ ನನಗಿಲ್ಲ ಎಂದಿದ್ದಾರೆ.

ಒಂದು ವೇಳೆ ರಮ್ಯಾರಿಗೆ ಟಿಕೆಟ್ ನೀಡಿದರೆ ಅವರ ಪ್ರಚಾರ ಮಾಡ್ತೀರಾ ಎಂಬ ಪ್ರಶ್ನೆಗೆ, ಅದು ಪಕ್ಷದ ಕೆಲಸ. ಹಾಗಾಗಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಉತ್ತರಿಸಿದರು.

https://twitter.com/RamyaManiacs/status/934796605726670849

ramya 1

ramya 7

ramya 6

ramya 5

ramya 20160823 630 630

RAMYA 1 1

RAMYA

RAMYA 1

ramya 2

RAMYA 3

MND RAMYA MELEKOTE 7

23ramya divya spandana

Ramya 2

Share This Article
Leave a Comment

Leave a Reply

Your email address will not be published. Required fields are marked *