– ನಿಶ್ವಿಕಾ ಹೇಳಿದ್ದು ಸರಿ, ನಿಮಗೆ ಇಷ್ಟ ಇಲ್ಲದಿದ್ರೆ ಕಾಮೆಂಟ್ ಮಾಡ್ಬೇಡಿ
ಬೆಂಗಳೂರು: ಇದನ್ನ ನಾನು ಡಿಸೈಡ್ ಮಾಡೋದಲ್ಲ. ಹೈಕಮಾಂಡ್ ತೀರ್ಮಾನ ಮಾಡಲಿದೆ. ಯಾರಾದರೂ ನನಗೆ ಓಕೆ. ರಾಜ್ಯಕ್ಕೆ ಒಳ್ಳೇಯದಾಗಬೇಕು ಎಂದು ಎಂದು ಸ್ಯಾಂಡಲ್‌ವುಡ್ ಕ್ವೀನ್ ಮೋಹಕ ತಾರೆ ರಮ್ಯಾ (Actress Ramya) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಕಾಂಗ್ರೆಸ್‌ನಲ್ಲಿ ಖುರ್ಚಿ ಕಿತ್ತಾಟ ವಿಚಾರವಾಗಿ ಮಾತನಾಡಿದ ಅವರು, ಇದನ್ನ ನಾನು ಡಿಸೈಡ್ ಮಾಡೋದಲ್ಲ. ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೀನಿಯರ್ ಲೀಡರ್‌ಗಳು ನಿರ್ಧಾರ ಮಾಡ್ತಾರೆ. ಯಾರಾದರೂ ನನಗೆ ಓಕೆ. ರಾಜ್ಯಕ್ಕೆ ಒಳ್ಳೇಯದಾಗಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ನಿರ್ಧಾರ ಮಾಡ್ತಾರೆ ಎಂದಿದ್ದಾರೆ.ಇದನ್ನೂ ಓದಿ: ರಾಯಚೂರು | ಏಕಾಏಕಿ ಮನೆಗಳಲ್ಲಿ ನೆಲ ಕುಸಿತ – ಯದ್ದಲದೊಡ್ಡಿ ಗ್ರಾಮಸ್ಥರಲ್ಲಿ ಆತಂಕ
ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆ ಯಾಕೆ ಎಂದು ಕೇಳಿದ್ದಕ್ಕೆ ಅದೇ ರಾಜಕೀಯ ಎಂದು ನಕ್ಕು, ಎಲ್ಲಾ ನಾಯಕರಿಗೂ ಅರ್ಹತೆ ಇದೆ. ಯಾರಾದ್ರು ಓಕೆ. ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದ್ದಾರೆ.
ಇನ್ನೂ ಹೆಣ್ಣು ಬೆತ್ತಲೆಯಾಗಿದ್ದರು, ಗಂಡು ಕಣ್ಣೆತ್ತಿ ನೋಡಬಾರದು ನಟಿ ನಿಶ್ವಿಕಾ ನಾಯ್ಡು ಹೇಳಿಕೆ ವಿಚಾರವಾಗಿ ಮಾತನಾಡಿ, ನಿಶ್ವಿಕಾ ಹೇಳಿದ್ದು ಸರಿಯಿದೆ. ಗಂಡಸರಿಗೆ ಇರುವಷ್ಟೇ ಹಕ್ಕು ನಮಗೂ ಇದೆ. ನೀವು ಇಷ್ಟ ಬಂದ ಹಾಗೇ ಬಟ್ಟೆ ಹಾಕ್ತೀರಾ. ನಾವು ಹಾಕಬಾರದಾ? ಹೆಣ್ಣು ಮಕ್ಕಳಿಗೂ ಸ್ವಾತಂತ್ರ‍್ಯ ಇದೆ. ನಿಮಗೆ ಇಷ್ಟ ಇಲ್ಲ ಅಂದ್ರೆ ಕಾಮೆಂಟ್ ಮಾಡೋಕೆ ಹೋಗಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರದ್ದೂ ಅಕೌಂಟ್ ಇದೆ. ಅಭಿಪ್ರಾಯ ಕೂಡ ಇದೆ. ಹಾಗಾಂತ ಕಾಮೆಂಟ್ ಮಾಡಬಾರದು ಎಂದಿದ್ದಾರೆ.
ಚಿತ್ರರಂಗಕ್ಕೆ ಕಮ್ ಬ್ಯಾಕ್ ವಿಚಾರವಾಗಿ ಮಾತನಾಡಿ, 40, 50 ಸ್ಕ್ರಿಪ್ಟ್ ಕೇಳಿದ್ದೀನಿ. ಒಂದು ಸ್ಕ್ರಿಪ್ಟ್ ಇಷ್ಟ ಆಗಿದೆ. ಮುಂದೆ ನೋಡೋಣ. ಯಾರ ಜೊತೆ ಅಂತ ಹೇಳಲ್ಲ. ನಿರ್ದೇಶಕರು ಸ್ಕ್ರಿಪ್ಟ್ ಬರೆಯುತ್ತಿದ್ದು, ಈಗಾಗಲೇ ಹಿಟ್ ಸಿನಿಮಾ ಮಾಡಿದ್ದಾರೆ. ನನಗೆ ಅವರೆಂದರೆ ತುಂಬಾ ಇಷ್ಟ. ಇದೇ ವೇಳೆ ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾಕ್ಕೆ ರಮ್ಯಾ ಶುಭಕೋರಿದ್ದಾರೆ.ಇದನ್ನೂ ಓದಿ: ವಿದೇಶಿಗರನ್ನ ಮತದಾರರ ಪಟ್ಟಿಯಲ್ಲಿ ಸೇರಿಸಲು ʻಆಧಾರ್ ಕಾರ್ಡ್ʼ ದಾಖಲೆ ಸಾಕಾ – ಸುಪ್ರೀಂ ಪ್ರಶ್ನೆ

