ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ ಸಿನಿಮಾ ರಂಗಕ್ಕೆ ಬಂದು ನಿನ್ನೆ (25 ಏಪ್ರಿಲ್ 2003)ಗೆ 19 ವರ್ಷಗಳ ಪೂರೈಸಿವೆ. ಪುನೀತ್ ರಾಜ್ ಕುಮಾರ್ ನಟನೆಯ ‘ಅಭಿ’ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರಮ್ಯಾ ಆನಂತರ ಸಿನಿಮಾ ರಂಗದ ಕ್ವೀನ್ ಆಗಿ ಬೆಳೆದರು. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ
Advertisement
ರಮ್ಯಾ ಮೊದಲ ಹೆಸರು ದಿವ್ಯ ಸ್ಪಂದನ. ಉದ್ಯಮಿ ಆರ್.ಟಿ. ನಾರಾಯಣ್ ಮತ್ತು ರಂಜಿತ ದಂಪತಿಯ ಏಕೈಕ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಊಟಿ ಮತ್ತು ಪ್ರೌಢ ಶಿಕ್ಷಣವನ್ನು ಚನ್ನೈನಲ್ಲಿ ಮುಗಿಸಿದ ನಂತರ ಚಿತ್ರೋದ್ಯಮಕ್ಕೆ ಕಾಲಿಟ್ಟವರು. ನಟನೆಯ ಬಗ್ಗೆ ಯಾವತ್ತೂ ಕನಸು ಕಾಣದೇ ಇರುವಂತಹ ಈ ನಟಿ ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕವಾದರೂ, ಬಂದ ನಂತರ ಖ್ಯಾತ ನಟಿಯಾಗಿ ಬೆಳೆದದ್ದು ರೋಚಕ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ
Advertisement
Advertisement
ಅಂದುಕೊಂಡಂತೆ ಆಗಿದ್ದರೆ ಪುನೀತ್ ಅವರ ಚೊಚ್ಚಲು ಸಿನಿಮಾ ಅಪ್ಪು ಮೂಲಕವೇ ಸಿನಿಮಾ ರಂಗ ಪ್ರವೇಶ ಮಾಡಬೇಕಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಈ ಸಿನಿಮಾದಲ್ಲಿ ರಮ್ಯಾ ನಟಿಸಲಿಲ್ಲ. ಆ ಪಾತ್ರ ರಕ್ಷಿತಾ ಪಾಲಾಯಿತು. ಹೀಗಾಗಿ ಕನ್ನಡದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಬ್ಯಾನರ್ ನ, ಅಪ್ಪು ನಟನೆಯ ಎರಡನೇ ಚಿತ್ರಕ್ಕೆ ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್
Advertisement
ಅಭಿ ನಂತರ ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿ ನಟಿಸಿದರು ರಮ್ಯಾ. ಎರಡೂ ಚಿತ್ರಗಳು ಸೂಪರ್ ಹಿಟ್. ಬಾಕ್ಸ್ ಆಫೀಸಿನಲ್ಲೂ ಗೆದ್ದವು. ಹಾಗಾಗಿ ಮೂರನೇ ಚಿತ್ರವನ್ನು ತೆಲುಗಿನಲ್ಲಿ ಮಾಡಿದರು. ಅತೀ ಕಡಿಮೆ ಅವಧಿಯಲ್ಲಿ ಬೇರೆ ಭಾಷೆಗೆ ಹೋದ ಕನ್ನಡದ ನಟಿ ಎಂಬ ಕೀರ್ತಿಗೂ ಅವರು ಪಾತ್ರರಾದರು. ಅಲ್ಲಿಂದ ತಮಿಳು, ಕನ್ನಡ, ತೆಲುಗು ಹೀಗೆ ನಾನಾ ಭಾಷೆಗಳಲ್ಲಿ ರಮ್ಯಾ ನಟಿಸಿದರು. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು
ರಮ್ಯಾ ಬಂದ ಅವಧಿಯಲ್ಲೇ ರಕ್ಷಿತಾ ಕೂಡ ಸಿನಿಮಾ ರಂಗಕ್ಕೆ ಬಂದಾಗಿತ್ತು. ಹಾಗಾಗಿ ಸಹಜವಾಗಿಯೂ ಇಬ್ಬರ ಮಧ್ಯ ಪೈಪೋಟಿ ಕೂಡ ಇತ್ತು. ಸ್ನೇಹಿತರಾಗಿದ್ದವರು ಕೆಲಸ ಸಿನಿಮಾಗಳಲ್ಲಿ ಕಿತ್ತಾಡಿಕೊಂಡರು ಎಂಬ ಸುದ್ದಿಯೂ ಆಗಿತ್ತು. ಏನೇ ಆದರೂ, ರಮ್ಯಾ ಮಾತ್ರ ತಮ್ಮ ನಂಬರ್ 1 ಸ್ಥಾನವನ್ನೂ ಯಾವತ್ತೂ ಬಿಟ್ಟುಕೊಡಲಿಲ್ಲ. ಬಹುತೇಕ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡು ಸ್ಯಾಂಡಲ್ ವುಡ್ ಕ್ವೀನ್ ಆಗಿಯೇ ಮೆರೆದರು. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ
ನಂತರ ರಾಜಕೀಯ ಪ್ರವೇಶ ಮಾಡಿದರು. ಮಂಡ್ಯ ಕ್ಷೇತ್ರದ ಸಂಸದೆಯಾಗಿ ಕೆಲಸ ಮಾಡಿದರು. ಮತ್ತೆ ಸೋತರು. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಸದ್ಯ ಸಿನಿಮಾ ಮತ್ತು ರಾಜಕಾರಣದಿಂದ ದೂರವಿದ್ದಾರೆ. ಸದ್ಯದಲ್ಲೇ ಮತ್ತೆ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಕೂಡ ಇದೆ.