ಲಾಂಗ್ ಶರ್ಟ್ ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಕ್ವೀನ್: ಫ್ಯಾನ್ಸ್ ಕಾಮೆಂಟ್ ಬೆಂಕಿ

Public TV
2 Min Read
Ramya 2

ತ್ತಿಚೀನ ವರ್ಷಗಳಲ್ಲಿ ಮೋಹಕ ತಾರೆ ರಮ್ಯಾ (Ramya)  ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವುದು ರೂಢಿಯಾಗಿತ್ತು. ಅದರಲ್ಲೂ ರಾಜಕಾರಣಕ್ಕೆ ಪ್ರವೇಶ ಪಡೆದ ನಂತರ ರಮ್ಯಾ ಕಾಟನ್ ಸೀರೆಯಲ್ಲಿ ಮಿಂಚುತ್ತಿದ್ದರು. ಸಿನಿಮಾ ಕಾರ್ಯಕ್ರಮವಿರಲಿ, ರಾಜಕೀಯದ ಪಡಸಾಲೆಯಲ್ಲೇ ಕಾಣಿಸಿಕೊಳ್ಳಲಿ ಗರಿಗರಿ ಸೀರೆಯಲ್ಲಿ ಅವರು ಕಂಗೊಳಿಸುತ್ತಿದ್ದರು. ಆದರೆ, ಅಚ್ಚರಿ ಎನ್ನುವಂತೆ ರಮ್ಯಾ ಲಾಂಗ್ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Ramya 1

ಬಿಡುವಿನ ಸಮಯದಲ್ಲಿ ವಿದೇಶಗಳನ್ನು ಸುತ್ತುವ ಅವರು, ಇದೀಗ ಯುರೋಪ್ (Europe) ದೇಶದ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ವೇಳೆ ಲಾಂಗ್ ಶರ್ಟ್ (Long Shirt) ಧರಿಸಿದ್ದು, ಆ ಫೋಟೋವನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್ ಕೂಡ ಆಗಿದ್ದು, ರಮ್ಯಾ ಹೀಗೂ ಉಂಟಾ? ಎಂದು ಪ್ರಶ್ನೆ ಮಾಡಿದ್ದಾರೆ. ಯುರೋಪ ಸೌಂದರ್ಯವನ್ನೂ ಮೀರಿಸುವಂತೆ ರಮ್ಯಾ ಆ ಫೋಟೋದಲ್ಲಿ ಕಂಡಿದ್ದಾರೆ. ಈ ಫೋಟೋಗೆ ರಮ್ಯಾ ಅಭಿಮಾನಿಗಳು ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಪ್ಯಾರಿಸ್‌ನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ

Ramya 2 1

ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಮತ್ತೆ ಪ್ರವೇಶ ಮಾಡಿರುವ ರಮ್ಯಾ, ಒಂದು ಸಿನಿಮಾವನ್ನು ಆಗಲೇ ನಿರ್ಮಾಣ ಮಾಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರಿನ ಸಿನಿಮಾ ಸಂಪೂರ್ಣ ಶೂಟಿಂಗ್ ಮುಗಿಸಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಮೊದ ಮೊದಲು ಈ ಚಿತ್ರಕ್ಕೆ ರಮ್ಯಾ ಅವರೇ ನಾಯಕಿ ಎಂದು ಹೇಳಲಾಗಿತ್ತು. ನಂತರ ಅದು ಬದಲಾಯಿತು. ಈ ಚಿತ್ರದಲ್ಲಿ ರಮ್ಯಾ ಇಲ್ಲ ಎನ್ನುವುದು ಅಭಿಮಾನಿಗಳಿಗೆ ನಿರಾಸೆ ತರಿಸಿತ್ತು.

 

ಈ ನಡುವೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ ರಮ್ಯಾ. ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮುಹೂರ್ತವಾಗಿದ್ದು ಇನ್ನೂ ಶೂಟಿಂಗ್ ಶುರುವಾಗಿಲ್ಲ. ಹಾಗಾಗಿ ಈ ಸಿನಿಮಾದಲ್ಲಿ ಅವರು ಇರುತ್ತಾರಾ? ಅಥವಾ ಈ ಅವಕಾಶವನ್ನೂ ಕೈ ಬಿಡ್ತಾರಾ ಗೊತ್ತಿಲ್ಲ.

Web Stories

Share This Article