ಬೆಂಗಳೂರು: ಹದಿಹರೆಯದ ತವಕ, ತಲ್ಲಣ ಮತ್ತು ಬೊಗಸೆ ತುಂಬಿದಷ್ಟೂ ಹೊಸತನದಿಂದ ನಳನಳಿಸುವ ಪ್ರೇಮ… ಬಹುಶಃ ಯಾವ ಕಾಲಕ್ಕೂ ಸಿನಿಮಾಗಳ ಪಾಲಿಗೆ ಇವೆರಡು ಸಂಗತಿಗಳು ಹಳತಾಗಲು ಸಾಧ್ಯವಿಲ್ಲ, ಯಾವುದೇ ಕಥೆಯಾದರೂ ಇವೆರಡು ಅಂಶಗಳ ಸ್ಪರ್ಶವಾದೇಟಿಗೆ ಅಲ್ಲೊಂದು ದೃಷ್ಯ ಕಾವ್ಯ ಕಣ್ತೆರೆಯುತ್ತದೆಕಿಂಥಾ ಕಥಾ ಹಂದರದೊಂದಿಗೆ ಹೊಸಬರ ತಂಡಗಳು ಆಗಮಿಸಿದಾಗಲಂತೂ ನಿರೀಕ್ಷೇ ಮಾಮೂಲಿಗಿಂತಲೂ ತುಸು ಹೆಚ್ಚೇ ಇರುತ್ತದೆ. ಇದೀಗ ’19 ಏಜ್ ಈಸ್ ನಾನ್ಸೆನ್ಸ್? ಅನ್ನುತ್ತಾ ಅಡಿಯಿರಿಸಿರುವ ಚಿತ್ರತಂಡದಲ್ಲಿಯೂ ಅಂಥಾದ್ದೊಂದು ಹೊಸತನದ ಹುಮ್ಮಸ್ಸಿನ ಛಾಯೆಯೇ ಎದ್ದು ಕಾಣಿಸುತ್ತಿದೆ.
Advertisement
ಶ್ರೀ ರಾಜೇಶ್ವರಿ ಫಿಲಂಸ್ ಬ್ಯಾನರಿನಡಿಯಲ್ಲಿ ಎಸ್ ಲೋಕೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುರೇಶ್ ಎಂ ಗಿಣಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ಮನುಷ್ ಎಂಬ ಹೊಸಾ ಹುಡುಗ ನಾಯಕನಾಗಿ ನಟಿಸಿದರೆ, ಚೆನೈ ಮೂಲದ ಮಧುಮಿತಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಶೀರ್ಷಿಕೆಯ ಕಾರಣದಿಂದಲೇ ಕುತೂಹಲ ಮೂಡಿಸಿರೋ ಈ ಚಿತ್ರ ಹತ್ತೊಂಬತ್ತರ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಅದರ ಸಾಧಕ ಬಾಧಕಗಳನ್ನು ಮಜವಾದ ಶೈಲಿಯಲ್ಲಿ ಕಟ್ಟಿ ಕೊಡಲಿದೆಯಂತೆ. ಇಲ್ಲಿ ಹದಿಹರೆಯದ ಹುಡುಗ ಹುಡುಗೀರ ಕಥೆಯಿದ್ದರೂ ಇಲ್ಲಿ ಕೌಂಟುಬಿಕ ಅಂಶಗಳೇ ಪ್ರಧಾನ.
Advertisement
Advertisement
ಈ ಯುವ ಆವೇಗದ ಚಿತ್ರದಲ್ಲಿ ಸಾಮಾಜಿಕ ಕ್ರಾಂತಿಗೆ ಕಿಚ್ಚು ಹಚ್ಚಬಲ್ಲ ವಿಚಾರವನ್ನೂ ಕೂಡಾ ನಮುಖ್ಯವಾಗಿ ಬಳಸಿಕೊಂಡಿರೋದು ನಿಜವಾದ ವಿಶೇಷ. ವಿಧವಾ ವಿವಾಹವೀಗ ಕಾನೂನು ಸಮ್ಮತವಾಗಿದ್ದರೂ ಸಹ ಮಡಿವಂತೆಕೆಯ ಮನಸ್ಥಿತಿಗಳಿನ್ನೂ ಮಾಯವಾಗಿಲ್ಲ. ಇಂಥಾ ಸಂದರ್ಭದಲ್ಲಿ ವಿಧವಾ ವಿವಾಹವನ್ನು ಉತ್ತೇಜಿಸುವಂಥಾ ಅಂಶಗಳನ್ನೂ ಇಲ್ಲಿ ಪ್ರಧಾನವಾಗಿ ತೋರಿಸಲಾಗಿದೆಯಂತೆ. ಹದಿಹರೆಯದ ಘಟ್ಟದ ಕಥೆ ಹೊಂದಿರೋ ಈ ಸಿನಿಮಾ ಹಾಡುಗಳನ್ನು ಇತ್ತೀಚೆಗೆ ಲಹರಿ ವೇಲು ಬಿಡುಗಡೆಗೊಳಿಸಿದ್ದಾರೆ. ಇದೀಗ ಈ ಹಾಡುಗಳ ಕಾರಣದಿಂದಲೇ ಸದರಿ ಚಿತ್ರ ಸುದ್ದಿ ಕೇಂದ್ರದಲ್ಲಿದೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಇಷ್ಟರಲ್ಲಿಯೇ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆ.