Bengaluru CityCinemaDistrictsKarnatakaLatestMain PostSandalwood

ನಾನು ಚಿತ್ರಕ್ಕೆ ಸಪೋರ್ಟ್ ಮಾಡಿಲ್ಲ ಅಂದ್ರೂ ಸುದ್ದಿಯಲ್ಲಿರ್ತೀನಿ: ಕಿಚ್ಚ ಹೀಗಂದಿದ್ಯಾಕೆ..?

ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ದೇಶದೆಲ್ಲಡೆ ಸದ್ದು ಸುದ್ದಿ ಮಾಡ್ತಿದೆ. ರಾಕಿಭಾಯ್ ಚಿತ್ರಕ್ಕೆ ಸೌರ್ತ್ನಿಂದ ನಾರ್ತ್ವರೆಗೂ ಸೆಲೆಬ್ರೆಟಿಗಳು ಚಿತ್ರ ನೋಡಿ ಉಘೇ ಉಘೇ ಅಂತಿದ್ದಾರೆ. ಬಾಲಿವುಡ್‌ನಲ್ಲಿ `ಕೆಜಿಎಫ್ 2′ 250 ಕೋಟಿ ಬಾಚಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರದ ಗೆಲುವನ್ನ ಕನ್ನಡ ಚಿತ್ರರಂಗದ ಅನೇಕ ಸ್ಟಾರ್‌ಗಳು ಸಂಭ್ರಮಿಸಿಲ್ಲ. ಇನ್ನು `ಕೆಜಿಎಫ್ 2′ ಕುರಿತು ಸುದೀಪ್ ಪೋಸ್ಟ್ ಹಾಕಿಲ್ಲ ಅಂತಾ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ವಾರ್ ನಡೆಯುತ್ತಿದೆ. ಈ ವಿಚಾರವಾಗಿ ಕಿಚ್ಚನ ಸುದೀಪ್ ಪರೋಕ್ಷವಾಗಿ ಉತ್ತರಿಸಿದ್ದಾರೆ.

ನವರಸ ನಾಯಕ ಜಗ್ಗೇಶ್ ಮತ್ತು ಅದಿತಿ ನಟನೆಯ ತೋತಾಪುರಿ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುದೀಪ್ ಭಾಗವಹಿಸಿದ್ರು. ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ವೇಳೆ ವೇದಿಕೆ ಏರಿದ್ದರು ಕಿಚ್ಚ ಸುದೀಪ್, ಈ ವೇಳೆ ನಿರೂಪಕಿ ನೀಡಿದ ಪ್ರಶ್ನೆಗೆ ಥಟ್ ಅಂತಾ ಉತ್ತರಿಸಿದ್ದರು.

ನಟ ಸುದೀಪ್ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡುತ್ತಾರೆ. ಇಡೀ ಸಿನಿಮಾರಂಗವನ್ನು ಒಂದು ಕುಟುಂಬದಂತೆ ನೋಡುತ್ತಾರೆ ಎಂದ ನಿರೂಪಕಿಗೆ ಥಟ್ ಅಂತಾ ಸುದೀಪ್ ಉತ್ತರಿಸಿ, ಸಿನಿಮಾಗೆ ನಾನು ಸಪೋರ್ಟ್ ನೀಡಿಲ್ಲಾ ಅಂದು ಸುದ್ದಿಯಲ್ಲಿ ಇರ್ತೀನಿ ಅಂತಾ ಉತ್ತರಿಸಿದ್ದಾರೆ. `ಕೆಜಿಎಫ್ 2′ ಚಿತ್ರದ ಬಗ್ಗೆ ಸುದೀಪ್ ಮೌನ ವಹಿಸಿರೋದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ಚಿತ್ರದ ಕುರಿತಿ ಮಾತಾನಾಡಿದ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಸಾಕಷ್ಟು ಚೆರ್ಚೆ ಗ್ರಾಸವಾಗಿದೆ. ಅದಕ್ಕೆ ಸುದೀಪ್ ಹೀಗೆ ಮಾತಾನಾಡಿದ್ರಾ ಎಂಬು ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ:`ಬೀಸ್ಟ್’ ಸೋಲಿನ ಹಿನ್ನೆಲೆ `ತಲೈವರ್ 169′ ಚಿತ್ರಕ್ಕೆ ಹೊಸ ನಿರ್ದೇಶಕರ ಹುಡುಕಾಟದಲ್ಲಿ ತಲೈವಾ!

ನಂತರ ತೋತಾಪುರಿ ಮಾವಿನಕಾಯಿ ವಿಚಾರವಿಟ್ಟು ಪ್ರಶ್ನೆ ಮಾಡಲಾಯಿತು. ಉಪ್ಪು, ಹುಳಿ, ಖಾರ, ಮತ್ತು ಸಿಹಿ ಈ ನಾಲ್ಕು ಗುಣದಲ್ಲಿ ಸುದೀಪ್ ಯಾರಾಗಿರ್ತಾರೆ ಅಂತಾ ನಿರೂಪಕಿ ಕೇಳಿದ ಪ್ರಶ್ನೆಗೆ ಸುದೀಪ್, ಎಲ್ಲರಿಗೂ ಒಂದೊಂದು ರೀತಿ ಕಾಣುತ್ತೇನೆ. ಈ ಬಗ್ಗೆ ನಾನು ತಲೆಕಡೆಸಿಕೊಳ್ಳುವುದಿಲ್ಲ. ನಾಲಿಗೆ ನಿಮ್ಮದು ಎಂದು ಸ್ಮಾರ್ಟ್ ಉತ್ತರ ನೀಡಿದ್ದಾರೆ.

Leave a Reply

Your email address will not be published.

Back to top button