ಯುಗಾದಿ ಹಬ್ಬವೆಂದರೆ (Ugadi Festival 2025) ಹಿಂದೂಗಳಿಗೆ ಹೊಸ ವರ್ಷದ ಸಂಭ್ರಮ. ಎಲ್ಲರಿಗೂ ಹೊಸ ಹರುಷ, ಸಡಗರ ತಂದಿದೆ. ಪ್ರಕೃತಿಯಲ್ಲಿ ಹಳೆ ಬೇರು ಹೊಸ ಚಿಗುರು ಸೇರಿ ಮರ ಮೆರೆಯುವಂತೆ, ಬಾಳಿನಲ್ಲಿ ಕಹಿ ಮತ್ತು ಸಿಹಿ ಸೇರಿ ಜೀವನದ ಸೊಬಗು ಹೆಚ್ಚುತ್ತದೆ. ಇದನ್ನೂ ಓದಿ:ನಾನು ಸಿನಿಮಾ ಸಕ್ಸಸ್‌ಗೆ ಪ್ರಾರ್ಥಿಸಲ್ಲ: ಸೀಕ್ರೆಟ್ ಬಿಚ್ಚಿಟ್ಟ ಸಲ್ಮಾನ್ ಖಾನ್
ಯುಗಾದಿ ದಿನದಂದು ಪ್ರತಿ ಹಿಂದುಗಳ ಮನೆಯಲ್ಲಿ ಹಬ್ಬದೂಟ, ಸಡಗರ ಮನೆ ಮಾಡಿರುತ್ತದೆ. ಜೊತೆಗೆ, ಬಾಳಿನಲ್ಲಿ ಬರುವ ಸಿಹಿ-ಕಹಿಗೆ ಹೋಲಿಕೆಯೆಂಬಂತೆ, ಬೇವು-ಬೆಲ್ಲವನ್ನು ತಿಂದು ಬಾಳಿನಲ್ಲಿ ಬರಬಹುದಾದ ಸಿಹಿ-ಕಹಿ ಘಟನೆಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂಬ ಸಂದೇಶ ನೀಡುತ್ತದೆ ಯುಗಾದಿ. ಇನ್ನೂ ಸಿನಿಮಾದಲ್ಲೂ ಸಾಕಷ್ಟು ಯುಗಾದಿ ಹಾಡುಗಳು ಬಂದಿವೆ. ಸಿನಿಮಾ ಹಾಡಲ್ಲೂ ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಹಾಡುಗಳ ವಿವರ ಇಲ್ಲಿದೆ. ಇದನ್ನೂ ಓದಿ:ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ: ವಿನಯ್ ಫಸ್ಟ್ ರಿಯಾಕ್ಷನ್
‘ಕುಲವಧು’ (Kulavadhu) ಚಿತ್ರಕ್ಕಾಗಿ ಖ್ಯಾತ ಗಾಯಕಿ ಎಸ್. ಜಾನಕಿ ಅವರು ಹಾಡಿರುವ ‘ಯುಗಾದಿ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬ ಹಾಡನ್ನಂತೂ ಕೇಳದವರಿಲ್ಲ. ಪ್ರತಿ ವರ್ಷ ಬರುವ ಯುಗಾದಿ ದಿನವಂತೂ ಈ ಹಾಡನ್ನು ಒಂದಲ್ಲ ಒಂದು ಕಡೆ ಕೇಳುವುದು ಗ್ಯಾರಂಟಿ ಎಂಬಷ್ಟರ ಮಟ್ಟಿಗೆ ಈ ಹಾಡು ಚಿರಪರಿಚಿತ ಹಾಗೂ ಅಜರಾಮರ. 1963ರಲ್ಲಿ ಬಿಡುಗಡೆಯಾದ ‘ಕುಲವಧು’ ಸಿನಿಮಾದಲ್ಲಿ ರಾಜ್‌ಕುಮಾರ್, ಲೀಲಾವತಿ, ನರಸಿಂಹರಾಜು, ಬಾಲಕೃಷ್ಣ ಸೇರಿದಂತೆ ಅನೇಕರು ನಟಿಸಿದ್ದರು.
ವಿಷ್ಣುವರ್ಧನ್ (Vishnuvardhan), ಅಂಬರೀಶ್, ದೇವರಾಜ್, ರಾಮ್ ಕುಮಾರ್ ನಟನೆಯ ‘ಹಬ್ಬ’ (Habba) ಸಿನಿಮಾದಲ್ಲಿ ಜೇನಿನ ಗೂಡು ನಾವೆಲ್ಲ, ಬೇರೆಯಾದರೆ ಜೀನಿಲ್ಲ ಎಂಬ ಹಾಡು ಯುಗಾದಿ ಹಬ್ಬದ ಆಚರಿಸುವ ಸೀಕ್ವೆನ್ಸ್‌ನಲ್ಲಿ ಮೂಡಿ ಬಂದಿದೆ. ಇಂದಿಗೂ ಈ ಹಾಡು ಅನೇಕರಿಗೆ ಇಷ್ಟ.
‘ಈ ಬಂಧನ’ ಸಿನಿಮಾದಲ್ಲಿ ವಿಷ್ಣುವರ್ಧನ್ ಹಾಗೂ ಜಯಪ್ರದಾ ನಟಿಸಿರುವ ‘ಯುಗಾದಿ ಯುಗಾದಿ’ ಸಾಂಗ್ ಕೂಡ ಪ್ರೇಕ್ಷಕರ ಅಚ್ಚುಮೆಚ್ಚಿನ ಹಾಡಾಗಿದೆ. ಇಂದಿಗೂ ಈ ಸಾಂಗ್ ಟ್ರೆಂಡ್‌ನಲ್ಲಿದೆ.
ಶಿವರಾಜ್‌ಕುಮಾರ್, ವಿಜಯ ರಾಘವೇಂದ್ರ ನಟನೆಯ ‘ರಿಷಿ’ ಚಿತ್ರದ ‘ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ’ ಸಿನಿಮಾ ಸಾಂಗ್ ಸೂಪರ್ ಹಿಟ್ ಆಗಿತ್ತು. ಇದನ್ನು ಸೋನು ನಿಗಮ್ ಮತ್ತು ಚಿತ್ರಾ ಹಾಡಿದರು. ಈ ಚಿತ್ರದಲ್ಲಿ ಶಿವಣ್ಣ, ಸಿಂಧು, ವಿಜಯ ರಾಘವೇಂದ್ರ, ರಾಧಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ರವಿಚಂದ್ರನ್ ನಟನೆಯ ‘ಯುಗಾದಿ’ ಸಿನಿಮಾದಲ್ಲಿ ‘ಧೀನ ಧೀನಕ ಧೀರಿ’ ಎಂಬ ಯುಗಾದಿ ಕುರಿತಾದ ಹಾಡಿದೆ. ಫ್ಯಾಮಿಲಿಯೊಂದಿಗೆ ಯುಗಾದಿ ಹಬ್ಬದ ಸೀಕ್ವೆನ್ಸ್‌ನಲ್ಲಿ ರವಿಚಂದ್ರನ್ ಹಾಗೂ ಜನ್ನಿಫರ್ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದು ಕೂಡ ಯುಗಾದಿ ಹಬ್ಬ ಹೆಚ್ಚಿಸುವ ಹಾಡಾಗಿದೆ. ಹೀಗೆ ಕನ್ನಡ ಸಿನಿಮಾಗಳು ಯುಗಾದಿ ಹಬ್ಬದ ಸಂಭ್ರಮ ಡಬಲ್ ಮಾಡುವ ಹಾಡುಗಳು ಪ್ರೇಕ್ಷಕರನ್ನು ಗುನುಗುವಂತೆ ಮಾಡಿದೆ.